Video: IPL Play Off ನಿಂದ ಹೊರಬಿದ್ದು ಮನೆ ತಲುಪಿದ ಶಿಖರ್ ಧವನ್ ಗೆ ತಂದೆಯಿಂದ ಬಿತ್ತು ಭಾರಿ ಒದೆತ, ಭಜ್ಜಿ ಹೇಳಿದ್ದೇನು ಗೊತ್ತಾ?
Viral Video - ಭಾರತದ ಅನುಭವಿ ಮತ್ತು ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಬಾರಿ ಐಪಿಎಲ್ ಪ್ಲೇ ಆಫ್ ನಿಂದ ಪಂಜಾಬ್ ಕಿಂಗ್ಸ್ ಹೊರಬಿದ್ದಿದೆ ಮತ್ತು ಇದೇ ಕಾರಣದಿಂದ ಸಾಕಷ್ಟು ಸಿಡಿಮಿಡಿಗೊಂಡಿರುವ ಧವನ್ ತಂದೆ, ಧವನ್ ಗೆ ಸಾಕಷ್ಟು ಒದೆತ ನೀಡಿದ್ದಾರೆ. ಈ ವಿಡಿಯೋದಲ್ಲಿ ಶಿಖರ್ ಧವನ್ ಸಾಕಷ್ಟು ಅಸಹಾಯಕರಂತೆ ಕಾಣಿಸಿಕೊಂಡಿದ್ದಾರೆ.
Trending Video - ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಆರಂಭಿಕ ಆಟಗಾರ ಶಿಖರ್ ಧವನ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೂ ಕೂಡ ಅವರ ತಂಡವು ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಹೀಗಾಗಿ ಇದೀಗ ಶಿಖರ ಧವನ್ ತಮ್ಮ ಮನೆಗೆ ಮರಳಿದ್ದಾರೆ. ಟೀಂ ಇಂಡಿಯಾದಲ್ಲಿ ‘ಗಬ್ಬರ್’ ಎಂದೇ ಖ್ಯಾತರಾಗಿರುವ ಧವನ್ ಮನೆ ತಲುಪಿದಾಗ ಸಾಕಷ್ಟು ಸಿಡಿಮಿಡಿಗೊಂಡಿರುವ ಅವರ ತಂದೆ ಅವರನ್ನು ಸಾಕಷ್ಟು ಬೈದು, ಕಪಾಳಮೋಕ್ಷ ಮಾಡಿ, ನೆಲಕ್ಕುರುಳಿಸಿ ಭಾರಿ ಒದೆತಗಳನ್ನು ನೀಡಿದ್ದಾರೆ. ಧವನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಈ ವಿಧಿಯೋಗೆ ಶಿಖರ್ ಅಭಿಮಾನಿಗಳಷ್ಟೇ ಅಲ್ಲ ಅನೇಕ ಸಹ ಕ್ರಿಕೆಟಿಗರು ಸಹ ಕಾಮೆಂಟ್ ಮಾಡುವ ಮೂಲಕ ಆನಂದಿಸುತ್ತಿದ್ದಾರೆ.
ಎಡಗೈ ಆಂಭಿಕ ಆಟಗಾರ ಶಿಖರ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಯಾವಾಗಲು ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ, ಅವುಗಳನ್ನು ಅಭಿಮಾನಿಗಳು ಕೂಡ ಇಷ್ಟಪಡುತ್ತಾರೆ. ಶಿಖರ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವೀಡಿಯೊ ಸಾಕಷ್ಟು ತಮಾಷೆಯಿಂದ ಕೂಡಿದೆ. ವೈರಲ್ ವಿಡಿಯೋದಲ್ಲಿ ಶಿಖರ್ ಅವರ ಇಡೀ ಕುಟುಂಬ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಡಿಯೋದಲ್ಲಿ ತಂದೆ ಕಪ್ಪು ಕನ್ನಡಕ ಹಾಕಿಕೊಂಡಿದ್ದಾರೆ. 'ನಾಕೌಟ್‌ಗೆ ಅರ್ಹತೆ ಪಡೆಯದಿದ್ದಕ್ಕಾಗಿ ನಮ್ಮ ತಂದೆ ನನ್ನನ್ನು ನಾಕೌಟ್ ಮಾಡಿದ್ದಾರೆ' ಎಂದು ಧವನ್ ತಮ್ಮ ಈ ವೀಡಿಯೊಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ-Viral video : ಮದುವೆ ದಿನ ವೇದಿಕೆಯಲ್ಲಿಯೇ ಕಳಚಿ ಬಿತ್ತು ವರನ ಪ್ಯಾಂಟ್ , ಬಿದ್ದು ಬಿದ್ದು ನಕ್ಕ ವಧು
ಐಪಿಎಲ್ 2022 ರಲ್ಲಿ ಧವನ್ ಒಟ್ಟು 460 ರನ್ ಗಳಿಸಿದ್ದಾರೆ
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಧವನ್ ಅವರ ಈ ವೀಡಿಯೊ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಬಾಪು ತೇರೆ ಸೆ ಭಿ ಅಚ್ಚೆ ಆಕ್ಟರ್ ನಿಕ್ಲೇ (ಅಂದರೆ, 'ತಂದೆ ನಿನಗಿಂತ ಉತ್ತಮ ನಟನಾಗಿ ಹೊರಹೊಮ್ಮಿದ್ದಾರೆ)' ಎಂದಿದ್ದಾರೆ. ಶಿಖರ್ ಐಪಿಎಲ್ 15ನೇ ಆವೃತ್ತಿಯಲ್ಲಿ 122ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ 14 ಪಂದ್ಯಗಳಲ್ಲಿ ಒಟ್ಟು 460 ರನ್ ಗಳಿಸಿದ್ದರು. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 88 ಆಗಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶಿಖರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ-Viral News: ಕುಡಿದು ಕಾರು ಓಡಿಸಿದ ಕಾಂಗ್ರೆಸ್ ಶಾಸಕನ ಮಗನ ವಿಡಿಯೋ ವೈರಲ್!
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕಂಡುಬಂದಿಲ್ಲ
ಐಪಿಎಲ್ 2022 ರಲ್ಲಿನ ಅಮೋಘ ಪ್ರದರ್ಶನವನ್ನು ನೋಡಿದರೆ, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ನೆಲದಲ್ಲಿಯೇ ನಡೆಯಲಿರುವ ಟಿ 20 ಸರಣಿಯಲ್ಲಿ ಶಿಖರ್‌ಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಜೂನ್ 9 ರಿಂದ ಪ್ರಾರಂಭವಾಗುವ 5 ಪಂದ್ಯಗಳ ತವರು ನೆಲದಲ್ಲಿನ T20 ಸರಣಿಗೆ ಟೀಮ್ ಇಂಡಿಯಾದಿಂದ ಶಿಖರ್ ಅವರನ್ನು ಭಾರತೀಯ ಆಯ್ಕೆಗಾರರು ಹೊರಗಿಟ್ಟಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.