Viral video : ಮದುವೆ ದಿನ ವೇದಿಕೆಯಲ್ಲಿಯೇ ಕಳಚಿ ಬಿತ್ತು ವರನ ಪ್ಯಾಂಟ್ , ಬಿದ್ದು ಬಿದ್ದು ನಕ್ಕ ವಧು

ಈ ಮದುವೆಯಲ್ಲಿ ಹಾರ ಬದಲಾಯಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆಯೇ ವರನ ಪ್ಯಾಂಟ್ ಕಳಚಿ ಬಿದ್ದಿದೆ. ಈ ದೃಶ್ಯವನ್ನು ನೋಡಿ ಮದುವೆಯಲ್ಲಿ ನೆರೆದಿದ್ದವರು ಮಾತ್ರವಲ್ಲ ವಧು ಕೂಡಾ ಬಿದ್ದುಬಿದ್ದು ನಗುವಂತಾಯಿತು.  

Written by - Ranjitha R K | Last Updated : May 25, 2022, 02:53 PM IST
  • ವೇದಿಕೆಯಲ್ಲಿಯೇ ಜಾರಿತು ವರನ ಪ್ಯಾಂಟ್
  • ವರನಿಗೆ ಸಂಕಟ, ವಧುವಿಗೆ ತಮಾಷೆ
  • ವೈರಲ್ ಆಗುತ್ತಿದೆ ವಿಡಿಯೋ
Viral video : ಮದುವೆ  ದಿನ ವೇದಿಕೆಯಲ್ಲಿಯೇ ಕಳಚಿ ಬಿತ್ತು ವರನ ಪ್ಯಾಂಟ್ , ಬಿದ್ದು ಬಿದ್ದು ನಕ್ಕ ವಧು  title=
Wedding viral video (photo instagram)

ಬೆಂಗಳೂರು : ಮದುವೆ ವ್ಯಕ್ತಿಯ ಜೀವನದ ಪ್ರಮುಖ ಘಟ್ಟ. ಮದುವೆಯ ಸಂಭ್ರಮದ ಪ್ರತಿಯೊಂದು ಕ್ಷಣಗಳನ್ನು ಕ್ಯಾಮರಾ ಮೂಲಕ ಸೆರೆ ಹಿಡಿಯಲಾಗುತ್ತದೆ. ಇದನ್ನು ಜೀವನ ಪೂರ್ತಿ ಮತ್ತೆ  ಮತ್ತೆ ನೋಡಿ ಆ ಮಧುರ ಕ್ಷಣಗಳನ್ನು ನೆನೆಯಬಹುದು. ಆದರೆ, ಮದುವೆಯ ದಿನ ಘಟಿಸುವ ಕೆಲವೊಂದು ಘಟನೆಗಳು ಜೀವನ ಪೂರ್ತಿ ಮರೆಯುವುದೇ ಇಲ್ಲ. ಕೆಲವು ಘಟನೆಗಳು ಮುಜುಗರವನ್ನು ಉಂಟು ಮಾಡಿದರೆ ಇನ್ನು ಕೆಲವು ತಮಾಷೆಯದ್ದಾಗಿರುತ್ತದೆ. ಇಲ್ಲೊಂದು ಮದುವೆಯಲ್ಲಿಯೂ ವರನ ಜೊತೆ ಇಂಥದ್ದೇ ಘಟನೆ ನಡೆದಿದೆ.  

ಮದುವೆಯಲ್ಲಿ ಹಾರ ಬದಲಾಯಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆಯೇ ವರನ ಪ್ಯಾಂಟ್ ಕಳಚಿ ಬಿದ್ದಿದೆ. ಈ ದೃಶ್ಯವನ್ನು ನೋಡಿ ಮದುವೆಯಲ್ಲಿ ನೆರೆದಿದ್ದವರು ಮಾತ್ರವಲ್ಲ ವಧು ಕೂಡಾ ಬಿದ್ದುಬಿದ್ದು ನಗುವಂತಾಯಿತು.

ಇದನ್ನೂ ಓದಿ : Viral video : ಹುಡುಗಿಯ ಈ ವರ್ತನೆಯಿಂದ ರೊಚ್ಚಿಗೆದ್ದ ಆನೆ , ಇಲ್ಲಿದೆ ನೋಡಿ ಶಾಕಿಂಗ್ ವಿಡಿಯೋ

ಕಳಚಿ ಬಿದ್ದ ವರನ  ಪ್ಯಾಂಟ್ :
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿವಧು ಮತ್ತು ವರ ವೇದಿಕೆಯಲ್ಲಿ ನಿಂತಿರುವುದನ್ನು ಕಾಣಬಹುದು. ಮದುವೆಯ ಶಾಸ್ತ್ರದಂತೆಯೇ ವಧು ಮತ್ತು ವರ ಹಾರವನ್ನು ಬದಲಾಯಿಸಿಕೊಳ್ಳುವುದನ್ನು ಕೂಡಾ ಕಾಣಬಹುದು. ಆದರೆ ಹಾರ ಬದಲಾಯಿಸುತ್ತಿದ್ದಂತೆಯೇ ವರನ ಪ್ಯಾಂಟ್ ಜಾರಿದೆ. ಆದರೆ ಪಾಪ ವರ ಮಹಾಶಯನಿಗೆ ಇದರ ಪರಿವೇ ಇರಲಿಲ್ಲ. ಇದನ್ನು ನೋಡಿದವರಿಗಂತೂ ನಗು ತಡೆಯಲಾಗಲಿಲ್ಲ, ಖುದ್ದು ವಧು ಬಿದ್ದು ಬಿದ್ದು ನಗುವುದನ್ನು ವಿಡಿಯೋದಲ್ಲಿ ಕಾಣಬಹುದು.  

ವೀಡಿಯೊವನ್ನು ವೀಕ್ಷಿಸಿ:

 
 
 
 
 

 

ಇದನ್ನೂ ಓದಿ : Viral News: ಮದುವೆ ವೇಳೆ ವರನ ತಲೆಯಿಂದ ಕಳಚಿಬಿದ್ದ ವಿಗ್, ಆಮೇಲೇನಾಯ್ತು ಗೊತ್ತಾ..?

ಈ ವೀಡಿಯೋವನ್ನು bhutni_ke_memes ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊವನ್ನು ವೀಕ್ಷಿಸಿದವರು ಕೂಡಾ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಸಾವಿರಾರು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News