Viral Video: ವರಮಾಲಾ ಕಾರ್ಯಕ್ರಮದಲ್ಲಿ ಆಯತಪ್ಪಿದ ವಧು, ವರ ಮಾಡಿದ್ದೇನು ನೋಡಿ
Amazing News ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ಈ ಮದುವೆ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ನವದೆಹಲಿ: ಮದುವೆಯ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಕೆಲವು ವಿಡಿಯೋಗಳು ತುಂಬಾ ಫನ್ನಿಯಾಗಿರುತ್ತವೆ. ಮದುವೆ ಮನೆಯಲ್ಲಿ ನಡೆಯುವ ಹಾಸ್ಯ ಪ್ರಸಂಗಗಳಿಗೆ ಸಾಕ್ಷಿಯಾಗುವ ಅನೇಕ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಅದೇ ರೀತಿಯ ಮತ್ತೊಂದು ವಿಡಿಯೋ ಸದ್ಯ ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋ ವರಮಾಲಾ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು. ಈ ಸಮಯದಲ್ಲಿ ಯಾರೂ ನಿರೀಕ್ಷಿಸಿದ ಘಟನೆ ಸಂಭವಿಸಿದೆ.
ಇದನ್ನೂ ಓದಿ: Hindi Imposition: ‘ಹಿಂದಿ ಮಾತನಾಡಲು ಬಯಸದವರು ದೇಶ ಬಿಟ್ಟು ತೊಲಗಲಿ’
ವೇದಿಕೆ ಮೇಲೆಯೇ ಆಯತಪ್ಪಿದ ವಧು!
ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ವರಮಾಲಾ ಕಾರ್ಯಕ್ರಮ ನಡೆಯುತ್ತಿರುತ್ತದೆ. ವೇದಿಕೆ ಮೇಲೆ ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಳ್ಳುತ್ತಿರುತ್ತಾರೆ. ಬಂಧು-ಬಳಗ ಸೇರಿದಂತೆ ಮದುವೆಗೆ ಆಗಮಿಸಿದ್ದ ಅತಿಥಿಗಳು ಈ ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುತ್ತಾರೆ. ವಧು-ವರರು ಖುಷಿ ಖುಷಿಯಿಂದಲೇ ಹಾರ ಬದಲಾಯಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ವೇದಿಕೆ ಪಲ್ಟಿಯಾಗಿ ವಧು ಆಯತಪ್ಪಿ ಬೀಳುತ್ತಾಳೆ. ಈ ವೇಳೆ ಆಕೆಯನ್ನು ವರ ಗಟ್ಟಿಯಾಗಿ ತಬ್ಬಿ ಹಿಡಿದುಕೊಳ್ಳುತ್ತಾನೆ. ವೇದಿಕೆ ಪಲ್ಟಿಯಾಗಿದ್ದನ್ನು ನೋಡಿ ಒಂದು ಕ್ಷಣ ಅಲ್ಲಿದ್ದ ಜನರು ಗಾಬರಿಯಾಗುತ್ತಾರೆ. ಆದರೆ, ವರ ಏನೂ ಆಗಿಯೇ ಇಲ್ಲವೆಂಬಂತೆ ತನ್ನ ಭಾವಿ ಪತ್ನಿಯನ್ನು ಬೀಳದಂತೆ ಗಟ್ಟಿಯಾಗಿ ಹಿಡಿದುಕೊಂಡು ರಕ್ಷಿಸುತ್ತಾನೆ.
ಇದನ್ನೂ ಓದಿ: Labor Day: ಮೇ 1 ಕಾರ್ಮಿಕರ ದಿನ: ದಿನಾಚರಣೆಯ ಹಿಂದಿದೆ ನಿಮಗರಿಯದ ಸತ್ಯ!
ಬಳಿಕ ವರ, ವಧುವನ್ನು ಎತ್ತಿಕೊಂಡು ಕಳೆಗಡೆ ಬರುತ್ತಾನೆ. ಈ ವೇಳೆ ನೆರೆದಿದ್ದ ಜನರು ಆತನ ಸಾಹಸವನ್ನು ಕಂಡು ಹರ್ಷೋದ್ಗಾರ ಮೊಳಗಿಸುತ್ತಾರೆ. ಚಪ್ಪಾಳೆ ತಟ್ಟಿ ಇಬ್ಬರಿಗೂ ಶುಭ ಹಾರೈಸುತ್ತಾರೆ. ಅಮೇಜಿಂಗ್ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಮದುವೆ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.