Scary! ನೆಟ್ಟಿಗರ ಗಮನಸೆಳೆದ ಎರಡು ತಲೆ, ನೀಲಿ ನಾಲಿಗೆ ಹೊಂದಿರುವ ಹಲ್ಲಿ

Lizard with 2 heads: ನೀಲಿ ನಾಲಿಗೆಯನ್ನು ಹೊಂದಿರುವ ಎರಡು ಮುಖದ ಹಲ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Edited by - Zee Kannada News Desk | Last Updated : Dec 8, 2021, 02:35 PM IST
  • ಹಲ್ಲಿಗೆ ಎರಡು ತಲೆ ಮತ್ತು ನೀಲಿ ನಾಲಿಗೆ ಇದ್ದರೆ ಹೇಗಿರಬಹುದು?
  • ನೀಲಿ ನಾಲಿಗೆಯನ್ನು ಹೊಂದಿರುವ ಎರಡು ಮುಖದ ಹಲ್ಲಿಯ ವಿಡಿಯೋ
  • ಆಸ್ಟ್ರೇಲಿಯಾದಾದ್ಯಂತ ಬಹಳ ಸಾಮಾನ್ಯವಾಗಿರುವ ಹಲ್ಲಿ
Scary! ನೆಟ್ಟಿಗರ ಗಮನಸೆಳೆದ ಎರಡು ತಲೆ, ನೀಲಿ ನಾಲಿಗೆ ಹೊಂದಿರುವ ಹಲ್ಲಿ  title=
ಎರಡು ತಲೆ, ನೀಲಿ ನಾಲಿಗೆಯ ಹಲ್ಲಿ

ಭೂಮಿಯ ಮೇಲಿನ ಅತ್ಯಂತ ಭಯಾನಕ ಪ್ರಾಣಿಗಳು ರೆಪ್ಟಿಲಿಯಾ ಸಾಮ್ರಾಜ್ಯಕ್ಕೆ (Reptilia) ಸೇರಿವೆ. 

ಹೌದು! ಸರೀಸೃಪಗಳು, ಅದು ಸಣ್ಣ ಹಲ್ಲಿ ಅಥವಾ ಹಾವು, ನಿಮಗೆ ಭಯಾನಕ ಎನಿಸಬಹುದು. ಸಾಮಾನ್ಯ ಹಲ್ಲಿಯನ್ನು ನೋಡಿಯೇ ಅನೇಕರು ಹೆದರುತ್ತಾರೆ. ಅಂತಹುದರಲ್ಲಿ ಹಲ್ಲಿಗೆ ಎರಡು ತಲೆ ಮತ್ತು ನೀಲಿ ನಾಲಿಗೆ ಇದ್ದರೆ ಹೇಗಿರಬಹುದು?

ನೀಲಿ ನಾಲಿಗೆಯನ್ನು ಹೊಂದಿರುವ ಎರಡು ಮುಖದ ಹಲ್ಲಿ ಕಂಡು ನಿಮಗೆ ಆಶ್ಚರ್ಯ ಎಸಿಸಬಹುದು.  

ಈ ಕ್ಲಿಪ್ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದೆ. ಈ ಹಲ್ಲಿಯನ್ನು ಕಂಡು ಬಳಕೆದಾರರ ವಿನೋದವನ್ನು ವ್ಯಕ್ತಪಡಿಸುವ ನೂರಾರು ಕಾಮೆಂಟ್‌ ಮಾಡಿದ್ದಾರೆ.  

 

 

ಹಲ್ಲಿಯ ವಿರೂಪತೆಯು ಅಪರೂಪವಾಗಿದ್ದರೂ, ಇದು ನೀಲಿ-ನಾಲಿಗೆ ಹಲ್ಲಿಯಾಗಿದ್ದು, ಇದು ಆಸ್ಟ್ರೇಲಿಯಾದಾದ್ಯಂತ ಬಹಳ ಸಾಮಾನ್ಯವಾಗಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ 5.7 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಝೂಕೀಪರ್, ಜೇ ಬ್ರೂವರ್ ತಮ್ಮ ಇನ್‌ಸ್ಟಾ ಪುಟ 'ಪ್ರಿಹಿಸ್ಟಾರಿಕ್ ಪೆಟ್ಸ್' ನಲ್ಲಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: RISK TAKERS: ಈ ರಾಶಿಚಕ್ರದವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧ

Trending News