Viral Video: ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಕೆಲವರು ವಿಚಿತ್ರ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಎಲ್ಲಿ ಹೋದರೂ, ಏನು ಮಾಡಿದರೂ ರೀಲ್‌ ಮಾಡಿ..ಅವುಗಳನ್ನು Instagram, TikTok ಮತ್ತು YouTube ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಾರೆ. ವೀವ್ಸ್‌ ಮತ್ತು ಲೈಕ್ಸ್‌ಗಾಗಿ ಇತರರು ತೊಂದರೆಯಾಗುತ್ತದೆ ಎನ್ನುವುದರ ಕಾಳಜಿ ವಹಿಸುವುದಿಲ್ಲ. ಇಂತಹ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.. ಇತ್ತೀಚೆಗೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಡಾನ್ಸ್‌ ಮಾಡುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಮಹಿಳೆಯ ಮೇಲೆ ಸಿಡಿಮಿಡಿಗೊಂಡಿದ್ದಾರೆ.. 


COMMERCIAL BREAK
SCROLL TO CONTINUE READING

ಈ ವಿಡಿಯೋವನ್ನು ಸಲ್ಮಾ ಶೇಖ್ ಎಂಬುವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಪ್ರಯಾಣಿಕರು ವಿಮಾನವನ್ನು ಹತ್ತುತ್ತಿದ್ದಂತೆ, ವಿಮಾನ ಸಿಬ್ಬಂದಿ ಓವರ್ಹೆಡ್ ಬಿನ್ ಅನ್ನು ಮುಚ್ಚುತ್ತಾರೆ. ಆ ವೇಳೆ ಮಹಿಳೆ ಡಾನ್ಸ್‌ ಮಾಡಲು ಆರಂಭಿದ್ದಾಳೆ.. ವಿಮಾನ ಟೇಕ್ ಆಫ್ ಗೆ ತಯಾರಾಗುತ್ತಿದ್ದಂತೆ ಆಕೆ ಈ ರೀತಿ ಡ್ಯಾನ್ಸ್ ಮಾಡಿದ್ದಕ್ಕೆ, ಸಹ ಪ್ರಯಾಣಿಕರು ಅಸಹನೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಂಡೂ ಕಾಣದ ಹಾಗೆ ವರ್ತಿಸಿದ್ದಾರೆ... ಆದರೆ, ಅದನ್ನು ಲೆಕ್ಕಿಸದೇ ಡ್ಯಾನ್ಸ್ ಮಾಡುತ್ತಲೇ ಇದ್ದ ಆ ಮಹಿಳೆ ಹುಚ್ಚೆದ್ದು ಕುಣಿದಿದ್ದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ.. 



ಇದನ್ನೂ ಓದಿ-ನಟ ದರ್ಶನ್‌ ಪ್ರಕರಣದ ಬಗ್ಗೆ ನಿರ್ಮಾಪಕ ಕೆ.ಮಂಜು ಹೇಳಿದ್ದೇನು?


ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 16 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 16 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಆದಾಗ್ಯೂ, ಕಾಮೆಂಟ್ ಭಾಕ್ಸ್‌ ಸಹ ತುಂಬಿ ತುಳುಕುತ್ತಿದೆ.. Insta ಬಳಕೆದಾರರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದು, 'ಈ ರೀತಿ ನಾನ್ಸೆನ್ಸ್ ಕೆಲಸ ಮಾಡಲು ಇದು ಆಕೆಯ ಖಾಸಗಿ ವಿಮಾನವಲ್ಲ.. ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.. 'ಸಾರ್ವಜನಿಕ ಸ್ಥಳದಲ್ಲಿ ಇಂತಹ ಚೇಷ್ಟೆಗಳನ್ನು ಮಾಡಲು ನಿಮಗೆ ಕನಿಷ್ಠ ನಾಚಿಕೆಯಾಗುವುದಿಲ್ಲವೇ? ಈ ವೀಡಿಯೊ ಅಸಹ್ಯಕರವಾಗಿ ಕಾಣುತ್ತದೆ. ಈ ರೀತಿ ವಿಡಿಯೋ ಮಾಡಿರುವ ಆಕೆಯನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ’ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 


ಇನ್ನೂ ಕೆಲವರು ವಿಮಾನದಲ್ಲಿ ಅನುಚಿತವಾಗಿ ವರ್ತಿಸಿ ಸಹಪ್ರಯಾಣಿಕರಿಗೆ ತೊಂದರೆಯಾದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಇತ್ತೀಚೆಗೆ, ಈ ರೀತಿಯ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾರ್ಗಸೂಚಿಗಳನ್ನು ನೀಡಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇತ್ತೀಚಿನ ಘಟನೆಯಲ್ಲಿ, ಬಳಕೆದಾರರು ಇಂಡಿಗೋಗೆ ದೂರು ನೀಡಿದ್ದು, ಇಂಡಿಗೋದ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ ಅವರು, 'ವಿಮಾನದಲ್ಲಿ ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಸಾಕಷ್ಟು ಕ್ರಮ ತೆಗೆದುಕೊಳ್ಳಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ-ಮುಡಾ ಸೈಟ್’ಗಳನ್ನು ಹಂಚಿದ್ದು ಬಿಜೆಪಿ ಸರ್ಕಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.