Viral Video: ಸೋಷಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯ ವಿಷಯಗಳನ್ನು ನೋಡಬಹುದು. ಇವುಗಳಲ್ಲಿ ಕೆಲವು ವಿಡಿಯೋಗಳಂತು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಅಷ್ಟೇ ಅಲ್ಲ ಇದನ್ನು ನೋಡಿದಾಗಲೆಲ್ಲ ನಗು ಬರುತ್ತದೆ. ಇದೀಗ ಆಹಾರಪ್ರಿಯ ಮಗುವಿನ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಇಡೀ ಕುಟುಂಬವನ್ನು ಅಚ್ಚರಿಗೊಳಿಸುವಂತೆ ಈ ಬಾಲಕ ಊಟ ಮಾಡಿದ್ದಾನೆ. ಇಡೀ ಮನೆಮಂದಿ ತಿನ್ನುವ ಆಹಾರವನ್ನು ಚಿಕ್ಕ ಹುಡುಗ ಒಬ್ಬನೇ ತಿನ್ನುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡುತ್ತೀರಿ. ಪಕ್ಕದಲ್ಲಿ ಕುಳಿತಿದ್ದವರಿಗೆ ಈ ದೃಶ್ಯವನ್ನು ನಂಬಲು ಸಾಧ್ಯವಾಗಲೇ ಇಲ್ಲ. ವಿಡಿಯೋ ಪೋಸ್ಟ್ ಮಾಡಿದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ನೋಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಲಂಬು ವರನ ಕೊರಳಿಗೆ ಹಾರ ಹಾಕಲು ಸಾಧ್ಯವಾಗದೆ ವಧು ಏನು ಮಾಡಿದ್ದಾಳೆ ನೋಡಿ!


ನೀವು ಆಹಾರ ಸೇವಿಸುವವರ ಬಹಳಷ್ಟು ವಿಡಿಯೋಗಳನ್ನು ನೋಡಿರಬೇಕು. ಸ್ಥಳದಿಂದ ಸ್ಥಳಕ್ಕೆ ಹೋಗುವುದರ ಮೂಲಕ ಅವರು ಆಹಾರವನ್ನು ಹೇಗೆ ಆನಂದಿಸುತ್ತಾರೆ ಎಂಬುದನ್ನು ತೋರಿಸುತ್ತಿರುತ್ತಾರೆ. ಕೆಲವರ ಊಟದ ಸಾಮರ್ಥ್ಯ ಎಷ್ಟರಮಟ್ಟಿಗಿರುತ್ತದೆ ಎಂದರೆ ನಾಲ್ಕೈದು ಜನರ ಊಟವನ್ನ ಒಬ್ಬರೇ ತಿನ್ನಬಹುದು. ಇದೀಗ ಚಿಕ್ಕ ಹುಡುಗನೊಬ್ಬ ಫಾಸ್ಟ್ ಫುಡ್ ತಿನ್ನುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ಮೇಜಿನ ಮೇಲಿರುವ ಆಹಾರವನ್ನು ನೋಡಿದರೆ, ಅದು ಇಡೀ ಮನೆಮಂದಿ ತಿನ್ನುವಷ್ಟಿದೆ. ಆದರೆ ಈ ಪುಟ್ಟ ಹುಡುಗ ಮಾತ್ರ ಇಡೀ ಊಟವನ್ನು ತಿನ್ನುತ್ತಾನೆ. 


ವಿಡಿಯೋವನ್ನು ಇಲ್ಲಿ ವೀಕ್ಷಿಸಿ:


 


 

 

 

 



 

 

 

 

 

 

 

 

 

 

 

A post shared by Meme wala (@memewalanews)


 


ಇದನ್ನೂ ಓದಿ: Viral Video: ಬಿಯರ್ ಕುಡಿದ ಹುಂಜ, ನಶೆಯಲ್ಲಿ ಮಾಡಿದ್ದೇನು ನೋಡಿ..


ವಿಡಿಯೋದಲ್ಲಿ ಹುಡುಗ ಯಾವ ರೀತಿಯ ಆಹಾರಪ್ರಿಯನಿದ್ದಾನೆ ಎಂದು ತಿಳಿದುಬರುತ್ತದೆ. ಇಂತಹ ಆಹಾರಪ್ರಿಯರನ್ನು ನೀವು ಸಾಮಾನ್ಯವಾಗಿ ನೋಡಿರಲಿಕ್ಕಿಲ್ಲ. ಈ ವಿಡಿಯೋವನ್ನು memewalanews ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೋವನ್ನು ನೋಡಿದ ನಂತರ, ಬಳಕೆದಾರರು ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡುತ್ತಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.