Viral Video: ಬಿಯರ್ ಕುಡಿದ ಹುಂಜ, ನಶೆಯಲ್ಲಿ ಮಾಡಿದ್ದೇನು ನೋಡಿ..

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಬರುತ್ತವೆ. ಇಂತಹ ಹಲವು ವಿಡಿಯೋಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. ಇದೀಗ ಅಂತಹುದೇ ವಿಡಿಯೋವೊಂದು ವೈರಲ್‌ ಆಗಿದ್ದು, ಇದರಲ್ಲಿ ಹುಂಜವೊಂದು ಮದ್ಯಪಾನ ಮಾಡುವುದನ್ನು ಕಾಣಬಹುದು. 

Written by - Chetana Devarmani | Last Updated : Jul 25, 2022, 03:18 PM IST
  • ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಬರುತ್ತವೆ
  • ಇದೀಗ ಬಿಯರ್‌ ಕುಡಿಯುವ ಹುಂಜವೊಂದರ ವಿಡಿಯೋ ಎಲ್ಲೆಡೆ ವೈರಲ್‌ ಆಗ್ತಿದೆ
  • ಈ ದೃಶ್ಯ ಕಂಡು ಜನರು ನೋಡಿ ಬೆರಗಾದರು
Viral Video: ಬಿಯರ್ ಕುಡಿದ ಹುಂಜ, ನಶೆಯಲ್ಲಿ ಮಾಡಿದ್ದೇನು ನೋಡಿ.. title=
ಹುಂಜ

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಬರುತ್ತವೆ. ಇಂತಹ ಹಲವು ವಿಡಿಯೋಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. ಇದೀಗ ಅಂತಹುದೇ ವಿಡಿಯೋವೊಂದು ವೈರಲ್‌ ಆಗಿದ್ದು, ಇದರಲ್ಲಿ ಹುಂಜವೊಂದು ಮದ್ಯಪಾನ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೀವು ಬಿಯರ್ ಅನ್ನು ಗಾಜಿನಲ್ಲಿ ಇಡುವುದನ್ನು ನೋಡುತ್ತೀರಿ. ಹುಂಜ ಅದರ ರುಚಿ ನೋಡುತ್ತದೆ. 

ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಅಪಪ್ರಚಾರ!? ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ

ಈ ವಿಡಿಯೋದಲ್ಲಿ ಬಿಯರ್ ಬಾಟಲ್ ಇಡಲಾಗಿದ್ದು, ಅಲ್ಲಿ ಇಟ್ಟಿರುವ ಗ್ಲಾಸ್ ನಲ್ಲಿಯೂ ಬಿಯರ್ ತುಂಬಿರುವುದನ್ನು ನೋಡಬಹುದಾಗಿದೆ. ಸ್ವಲ್ಪ ಸಮಯದ ನಂತರ ಒಂದು ಹುಂಜ ಮತ್ತು ಕೋಳಿ ಅಲ್ಲಿಗೆ ಬರುತ್ತವೆ. ನಿಧಾನವಾಗಿ ಗಾಜಿನ ಬಳಿಗೆ ಬಂದು, ನಂತರ ರುಚಿ ನೋಡುತ್ತವೆ. ಬಿಯರ್ ಕುಡಿದ ನಂತರ, ಹುಂಜ ಗಾಳಿಯಲ್ಲಿ ಎತ್ತರಕ್ಕೆ ಹಾರುತ್ತದೆ, ಇದನ್ನು ಎಲ್ಲರೂ ನೋಡುತ್ತಾರೆ.  

 

 

ಇದನ್ನೂ ಓದಿ: Urfi Javed: ಇದೇನಿದು ಹೊಸ ಅವತಾರ! ಉರ್ಫಿ ಜಾವೇದ್‌ ಇತ್ತೀಚಿನ ವಿಡಿಯೋ ನೋಡಿದ್ದೀರಾ?

ಜನರು ನೋಡಿ ಬೆರಗಾದರು:

ಬಿಯರ್ ಕುಡಿದಹುಂಜನಿಗೆ ಏನಾಯಿತು ಎಂದು ನೆಟಿಜನ್‌ಗಳು ಆಶ್ಚರ್ಯ ಪಡುತ್ತಿದ್ದಾರೆ. ಇದನ್ನು 18plusguyy ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ವಿಡಿಯೋ 34 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News