Viral Video: ‘ರಸಗುಲ್ಲಾ’ ತಿನ್ನದ ವಧುವಿನ ಕಪಾಳಕ್ಕೆ ಬಾರಿಸಿದ ವರ, ವೇದಿಕೆಯಲ್ಲೇ ಬಿಗ್ ಫೈಟ್..!
ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದುವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.
ನವದೆಹಲಿ: ಮದುವೆ ಸೀಸನ್‍ನಲ್ಲಿ ಪ್ರತಿದಿನ ಒಂದಲ್ಲ ಒಂದು ವಿಡಿಯೋ ಇಂಟರ್‍ನೆಟ್‍ನಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ಮದುವೆಗಳಲ್ಲಿ ಗದ್ದಲ, ಮೋಜು-ಮಸ್ತಿ ಜಾಸ್ತಿಯೇ ಇರುತ್ತದೆ. ಇನ್ನು ಕೆಲ ಮದುವೆಗಳಲ್ಲಿ ಸಂಬಂಧಿಕರ ನಡುವಿನ ವಾಗ್ವಾದ ಸಾಮಾನ್ಯವಾಗಿರುತ್ತದೆ. ಆದರೆ, ಮದುವೆ ಖುಷಿಯಲ್ಲಿರಬೇಕಾದ ವಧು-ವರನ ನಡುವೆ ಫೈಟ್ ನಡೆದರೆ ಹೇಗಿರಬೇಡ! ಇಂತಹ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹೌದು, ಸಿಹಿ ತಿನ್ನಲು ನಿರಾಕರಿಸಿದ ಕಾರಣಕ್ಕೆ ವಧುವಿಗೆ ವರ ಕಪಾಳಮೋಕ್ಷ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: ಹಸುಗಳಿಗಾಗಿ ಬಾಲ್ಯ ವಿವಾಹ! ಇಲ್ಲಿ ವಧು ದಕ್ಷಿಣೆ ರೂಪದಲ್ಲಿ ಸಿಗುತ್ತೆ ಹಸುಗಳು
ವಧುವಿಗೆ ಕಪಾಳಮೋಕ್ಷ..!
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೇದಿಕೆಯಲ್ಲಿ ವಧು-ವರರು ಇರುವುದನ್ನು ಕಾಣಬಹುದು. ವರಮಾಲಾ ಸಮಾರಂಭದಲ್ಲಿ ವರನ ಮುಂದೆ ವಧು ನಿಂತಿದ್ದಾಳೆ. ಈ ವೇಳೆ ಅನೇಕ ಸಂಬಂಧಿಕರು ಕೂಡ ಖುಷಿ ಖುಷಿಯಿಂದ ನಿಂತುಕೊಂಡಿರುತ್ತಾರೆ. ವಧುವಿನ ಮನೆಯವರು ವರನಿಗೆ ಸಿಹಿ ತಿನ್ನಿಸಿ ತಿಲಕ ಹಚ್ಚುವಂತೆ ಕೇಳಿಕೊಳ್ಳುತ್ತಾರೆ. ಅದರಂತೆ ವರ ವಧುವಿಗೆ ರಸಗುಲ್ಲಾ ತಿನ್ನಿಸಲು ಮುಂದಾಗುತ್ತಾನೆ. ಈ ವೇಳೆ ವಧು ಸಿಹಿ ತಿನ್ನಲು ನಿರಾಕರಿಸುತ್ತಾಳೆ. ಸಾಲದ್ದಕ್ಕೆ ಸಿಹಿ ಸಿನ್ನಿಸಲು ಬರುವ ವರನ ಕೈ ಕೊಸರುತ್ತಾಳೆ. ಇದರಿಂದ ಕೋಪಗೊಂಡ ವರ ವೇದಿಕೆಯಲ್ಲಿಯೇ ಎಲ್ಲರ ಮುಂದೆಯೇ ವಧುವಿನ ಕಪಾಳಕ್ಕೆ ಬಾರಿಸುತ್ತಾನೆ. ಇದರಿಂದ ಅಕ್ಕಪಕ್ಕದಲ್ಲಿದ್ದ ವಧು-ವರನ ಸಂಬಂಧಿಕರು ಒಂದುಕ್ಷಣ ಗಾಬರಿಯಾಗಿದ್ದಾರೆ.
Viral News: ರಜೆ ಇಲ್ಲದೇ ಸತತ 27 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗೆ ಕೋಟಿ ರೂ. ಭಕ್ಷೀಸು..!
10 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ
ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದುವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಅನೇಕರು ಇದು ನಿಜವಾದ ವಿಡಿಯೋ ಅಲ್ಲವೆಂದು ಹೇಳಿದ್ದಾರೆ. ಮನರಂಜನೆಯ ಉದ್ದೇಶಕ್ಕೆ ಈ ವಿಡಿಯೋ ಚಿತ್ರೀಕರಿಸಲಾಗಿದೆ. ನಿಜವಾಗಿಯೂ ವಧುವಿಗೆ ವರ ಕಪಾಳಮೋಕ್ಷ ಮಾಡಿಲ್ಲವೆಂದು ಕಾಮೆಂಟ್ ಮಾಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ