ನವದೆಹಲಿ: ಯಾರಾದರೂ ಇಹಲೋಕ ತ್ಯಜಿಸಿದಾಗ ಅವರನ್ನು ಪ್ರೀತಿಸುವವರಿಗೂ ಈ ಜಗತ್ತು ನಿಷ್ಪ್ರಯೋಜಕವಾಗಿ ಕಾಣುತ್ತದೆ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ-ಪಕ್ಷಿಗಳಿಗೂ ಅನ್ವಯಿಸುತ್ತದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ಗ್ಯಾರಂಟಿ ನೀರು ಬರುತ್ತದೆ. ಈ ವಿಡಿಯೋದಲ್ಲಿ ಹಕ್ಕಿಯೊಂದು ಸಾವನ್ನಪ್ಪಿದ್ದು, ಅದರ ಸಂಗಾತಿ ಅದಕ್ಕೆ ಕೊನೆ ವಿದಾಯ ಹೇಳಿದೆ.   


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ವರಮಾಲಾ ಕಾರ್ಯಕ್ರಮದಲ್ಲಿ ಆಯತಪ್ಪಿದ ವಧು, ವರ ಮಾಡಿದ್ದೇನು ನೋಡಿ


ವಿಡಿಯೋ ನೋಡಿದ್ರೆ ಅಳು ಬರುತ್ತದೆ!


ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಕೆಲವೊಮ್ಮೆ ಕೆಲವು ವಿಡಿಯೋ ನಮ್ಮ ಹೃದಯವನ್ನು ಗೆಲ್ಲುತ್ತವೆ. ಆದರೆ ಈ ವಿಡಿಯೋ ನೋಡಿದ್ರೆ ನಿಮಗೆ ಅಳು ಬರುತ್ತದೆ. ಪ್ರಾಣಿ-ಪಕ್ಷಗಳಲ್ಲಿಯೂ ಎಷ್ಟೊಂದು ಪ್ರೀತಿ ಇರುತ್ತದೆ, ಮನುಷ್ಯನಂತೆಯೇ ಅವುಗಳಿಗೂ ಭಾವನೆಗಳಿರುತ್ತವೆ ಅನ್ನೋದಕ್ಕೆ ಈ ವಿಡಿಯೋ ನಿದರ್ಶನವಾಗಿದೆ.  


ಇದನ್ನೂ ಓದಿ: ಮೇ 1 ರಿಂದ ಸಿಲಿಂಡರ್‌ ಬೆಲೆ ದುಬಾರಿ, ಬ್ಯಾಂಕ್ ರಜೆ; ತಿಂಗಳು ಪ್ರಾರಂಭ ಹೇಗೆ? 


ಈ ವಿಡಿಯೋದಲ್ಲಿ ಯಾವುದೋ ವಾಹನ ಬಡಿದು ಪಕ್ಷಿಯೊಂದು ಸಾವನ್ನಪ್ಪಿ ರಸ್ತೆಯ ಮಧ್ಯೆ ಬಿದ್ದಿದೆ. ತನ್ನ ಪ್ರೀತಿಯ ಸಂಗಾತಿ ಕಳೆದುಕೊಂಡು ಪಕ್ಷಿಯು ದುಃಖಿಸಿದೆ. ಮೃತಪಟ್ಟ ಪಕ್ಷಿಯ ಬಳಿ ಬರುವ ಸಂಗಾತಿ ಪಕ್ಷಿ ಅದಕ್ಕೆ ಚುಂಬಿಸುವ ಮೂಲಕ ನೋವಿನ ವಿದಾಯ ಹೇಳಿದೆ.  ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ನಿಮಿಷವಿರುವ ಈ ವಿಡಿಯೋ ಇದೀಗ ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ. ಪಕ್ಷಿಯ ಸಾವಿಗೆ ನೆಟಿಜನ್‍ಗಳು ದುಃಖ ವ್ಯಕ್ತಪಡಿಸಿದ್ದಾರೆ. ಅನೇಕರು ಮನಷ್ಯರ ಸ್ವಾರ್ಥಕ್ಕೆ ಪ್ರಾಣಿ-ಪಕ್ಷಿಗಳು ಹೇಗೆ ಅನಾಥವಾಗಿ ಸಾವನ್ನಪ್ಪುತ್ತಿವೆ ನೋಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.