Snake Viral Video: ಈ ಪ್ರಪಂಚದಲ್ಲಿ ಅನೇಕ ಬಗೆಯ ಹಾವುಗಳು ಕಂಡುಬರುತ್ತವೆ. ಅನೇಕ ಹಾವುಗಳು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿಯಾಗಿರುತ್ತವೆ. ಕೆಲವು ಹಾವುಗಳು ಹಸಿವಾದಾಗ ದೊಡ್ಡ ಪ್ರಾಣಿಗಳನ್ನೂ ನುಂಗುತ್ತವೆ. ಹಾವುಗಳನ್ನೂ ನುಂಗುವ ಹಾವುಗಳು ಸಹ ಇವೆ. ಹಾವುಗಳನ್ನೇ ನುಂಗುವ ಹಾವುಗಳ ಅನೇಕ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. 


COMMERCIAL BREAK
SCROLL TO CONTINUE READING

ಹಾವುಗಳನ್ನು ಕಂಡರೆ ಬಹುತೇಕರು ಭಯ ಪಡುತ್ತಾರೆ. ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಹಾವು ಕಂಡರೆ ಸಾಕು ಮಾರುದ್ದ ಓಡುವವರೇ ಹೆಚ್ಚು. ಕೆಲವು ಅಪಾಯಕಾರಿ ಹಾವುಗಳು ಕಚ್ಚಿದರೆ ಕ್ಷಣಮಾತ್ರದಲ್ಲೇ ಪ್ರಾಣ ಹೋಗುತ್ತದೆ. ಹಾವುಗಳ ವಿಡಿಯೋಗಳನ್ನು ನೀವು ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ನೋಡುತ್ತಿರುತ್ತೀರಾ. ಇಲ್ಲೊಂದು ಹಾವು ತನಗೆ ಹಸಿವು ಆಯ್ತು ಎಂದು ತನ್ನನ್ನೇ ನುಂಗಿಕೊಂಡಿದೆ. 


ಇದನ್ನೂ ಓದಿ: ಈ ಚಿತ್ರದಲ್ಲಿ ಅಡಿಗರುವ ಐಸ್‌ಕ್ರೀಮ್‌ ಅನ್ನು 12 ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದೇ? ಮೆದುಳು ಇದ್ದವರಿಗೆ ಮಾತ್ರ ಸಾಧ್ಯ!



ಹೌದು, ನೀವು ಇದನ್ನು ನಂಬಲೇಬೇಕು. ಸೋಷಿಯಲ್‌ ಮೀಡಿಯಾದಲ್ಲಿ ಸದ್ಯ ಸಖತ್‌ ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಹಾವೊಂದು ತನ್ನನ್ನು ತಾನೇ ನುಂಗಿಕೊಂಡಿದೆ. ಈ ವೀಡಿಯೋ ನೋಡಿದರೆ ಈ ಹಸಿದ ಹಾವು ಹಲವು ದಿನಗಳಿಂದ ಬೇಟೆಗಾಗಿ ಹುಡುಕಾಟ ನಡೆಸುತ್ತಿರಬಹುದು ಎಂದು ಊಹಿಸಬಹುದು. ಎಷ್ಟೋ ಪ್ರಯತ್ನಗಳ ನಂತರವೂ ಹಾವು ಬೇಟೆಯನ್ನು ಕಾಣದಿದ್ದಾಗ ತನ್ನನ್ನೇ ತಿನ್ನತೊಡಗಿದೆ. 


ಎಷ್ಟೇ ಪ್ರಯತ್ನಿಸಿದರೂ ಬೇಟೆ ಸಿಗದಿದ್ದಾಗ ಹಾವು ಗಲಿಬಿಲಿಗೊಂಡಿರುವುದನ್ನು ಈ ವಿಡಿಯೋದ ಆರಂಭದಲ್ಲಿ ಕಾಣಬಹುದು. ನಂತರ ಅದು ಬೇಸತ್ತು ತನ್ನನ್ನೇ ನಿಧಾನವಾಗಿ ನುಂಗಲು ಪ್ರಾರಂಭಿಸಿದೆ. ಈ ಹಾವು ತನ್ನ ಬಾಲವನ್ನು ನುಂಗುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು. 


ಇದನ್ನೂ ಓದಿ: ತಿಮಿಂಗಿಲ ಸತ್ತು 26 ವರ್ಷಗಳು ಕಳೆದರೂ ಅದರ ಅಸ್ಥಿಪಂಜರದಿಂದ ಸೋರುತ್ತಿದೆ ಎಣ್ಣೆ..!


ಈ ವಿಡಿಯೋವನ್ನು rajibroy9069 ಎಂಬ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಹಸಿದಾಗ ಹಾವು ತನ್ನನ್ನೇ ತಾನು ನುಂಗುತ್ತಿರುವ ದೃಶ್ಯವನ್ನು ಕಂಡು ಅನೇಕರು ಅಳುವ ಇಮೋಜಿಗಳನ್ನು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಹಲವರು ಕಾಮೆಂಟ್ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ʼಇದು ನಿಜವಾಗಿಯೂ ತುಂಬಾ ಮನಕಲಕುವ ದೃಶ್ಯವಾಗಿದೆʼ ಅಂತಾ ಒಬ್ಬ ಕಾಮೆಂಟ್‌ ಮಾಡಿದ್ರೆ, ʼಪಾಪ ಹಸಿದ ಹಾವಿಗೆ ಯಾವುದೇ ಬೇಟೆ ಸಿಕ್ಕಿಲ್ಲ, ಹೀಗಾಗಿ ಅದು ತನ್ನನ್ನೇ ನುಂಗಿಕೊಳ್ಳುತ್ತಿದೆʼ ಅಂತಾ ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʼಇದು ನೋಕಿಯಾ ಮೊಬೈಲ್‌ ಗೇಮ್‌ನಲ್ಲಿದ್ದ ಹಾವಿನಂತೆ ಕಾಣುತ್ತದೆʼ ಎಂದು ಫನ್ನಿ ಕಾಮೆಂಟ್‌ ಮಾಡಿದ್ದಾರೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.