ನವದೆಹಲಿ: ಸಾಮಾನ್ಯವಾಗಿ ಕಾಂಡೋಮ್ ಗಳನ್ನು ಲೈಂಗಿಕ ಕ್ರಿಯೆಯಲ್ಲಿ ಬಳಸುವುದನ್ನು ನೋಡಿದ್ದೇವೆ, ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಇಡೀ ಕೆಫೆ ಕಾಂಡೋಮ್ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ ಎಂದರೆ ನಂಬುತ್ತಿರಾ?


COMMERCIAL BREAK
SCROLL TO CONTINUE READING

ಹೌದು, ನಿಮಗೆ ಇದು ಅಚ್ಚರಿ ತರಿಸಬಹುದು, ಆದರೆ ಇದನ್ನು ಜನರಲ್ಲಿ ಸುರಕ್ಷಿತ ಲೈಂಗಿಕಕ್ರಿಯೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ.ಕಾಂಡೋಮ್‌ಗಳ ಥೀಮ್ ಹೊಂದಿರುವ ಕೆಫೆಯನ್ನು ವೀಡಿಯೊ ಸೆರೆಹಿಡಿಯುತ್ತದೆ ಮತ್ತು ಇದು ಆನ್‌ಲೈನ್‌ನಲ್ಲಿಈಗ ಸಾಕಷ್ಟು ಸದ್ದು ಮಾಡುತ್ತಿದೆ.



ಇದನ್ನೂ ಓದಿ: DBoss ಮೇಲೆ ಚಪ್ಪಲಿ ಎಸೆತ : ನುಗುತ್ತಲೇ ʼಪರವಾಗಿಲ್ಲ ಬಿಡು ಚಿನ್ನʼ ಎಂದ ಯಜಮಾನ..!


ವೈರಲ್ ಆಗಿರುವ ವಿಡಿಯೋದಲ್ಲಿ ಪ್ರತಿಮೆಗಳ ಉಡುಪುಗಳು, ಸಾಂಟಾ ಕ್ಲಾಸ್‌ನ ಗಡ್ಡ, ಕ್ರಿಸ್ಮಸ್ ಮರ, ನೇತಾಡುವ ದೀಪಗಳು ಮತ್ತು ಹೂವುಗಳನ್ನು ಸಂಪೂರ್ಣವಾಗಿ ಕಾಂಡೋಮ್‌ಗಳಿಂದ ನಿರ್ಮಿಸಿರುವುದನ್ನು ತೋರಿಸುತ್ತದೆ. ವಿಶೇಷವೆಂದರೆ ಈ ವಿಡಿಯೋದಲ್ಲಿ ವಿಕ್ಷಕರಿಗೆ ಸಂಪೂರ್ಣ ಕಫೆಯ ಪ್ರವಾಸವನ್ನು ಮಾಡಿಸುತ್ತದೆ. ಕಾಂಡೋಮ್ಗಳಿಂದ ಕೆತ್ತಿರುವ ವಿಶಿಷ್ಟ ಉತ್ಪನ್ನಗಳನ್ನು ಸಹ ಇಲ್ಲಿ ಮಾರಾಟ ಮಾಡಲಾಗುತ್ತಿದೆ."ಬೇರೆ ಪಕ್ಷಗಳು ಸೋಲುತ್ತವೆ ಎಂದು ಆ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಕಡಿಮೆ ಇದ್ದಾರೆ"


ಈಗ ವೈರಲ್ ಆಗಿರುವ ಪೋಸ್ಟ್ ಪ್ರಕಾರ, ಕಾಂಡೋಮ್ಸ್ ಮತ್ತು ಕ್ಯಾಬೇಜಸ್ ಹೆಸರಿನ ವಿಶಿಷ್ಟ ಕಾಂಡೋಮ್-ಥೀಮ್ ಕೆಫೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿದೆ. ಇದು ಥಾಯ್ ಆಹಾರ, ಪಾನೀಯಗಳು ಮತ್ತು ಐಸ್ ಕ್ರೀಮ್ಗಳನ್ನು ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.