Weight Loss: ಐಸ್ ಕ್ರೀಂ-ಸಿಹಿ ತಿಂದು ತೂಕ ಇಳಿಕೆ ಮಾಡಿಕೊಂಡ ಮಹಿಳೆ!
Weight Loss Trick: ತೂಕ ಇಳಿಕೆ ಮಾಡಿಕೊಳ್ಳಲು ಜನ ಏನೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ಇಂದು ನಾವು ನಿಮಗೆ ಓರ್ವ ಮಹಿಳೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಈ ಮಹಿಳೆ ಐಸ್ ಕ್ರೀಂ ಹಾಗೂ ಸಿಹಿ ಪದಾರ್ಥಗಳನ್ನು ತಿಂದು 40ಕೆ.ಜಿ ತೂಕ ಕಳೆದುಕೊಂಡಿದ್ದಾಳೆ. ತಬ್ಬಿಬ್ಬಾಗಬೇಡಿ... ಈ ವರದಿ ಓದಿ.
Trending Weight Loss Trick: ತೂಕ ಇಳಿಕೆ ಮಾಡಿಕೊಳ್ಳಲು ನೀವು ಉಪವಾಸದಿಂದ ಇರಬೇಕಾಗಿಲ್ಲ. ಕೇವಲ ಒಂದು ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವ ಅವಶ್ಯಕತೆ ಇದೆ. ಇದಕ್ಕಾಗಿ ನೀವು ದೀಪಾ ಸೋನಿ ಕಥೆಯನ್ನೊಮ್ಮೆ ಓದಲೇಬೇಕು.
ದೀಪಾ ಸೋನಿ ಇನ್ಸ್ಪೈರಿಂಗ್ ಕಥೆ
ಮೊದಲು ದೀಪಾ ಸೋನಿ ತೂಕ 100 ಕೆ.ಜಿಗೆ ತಲುಪಿತ್ತು. ಆದರೆ ಒಂದು ಆರೋಗ್ಯಕರ ಡಯಟ್ ಪ್ಲಾನ್ ಅನುಸರಿಸಿ ಆಕೆ ತನ್ನ 40 ಕೆ.ಜಿ ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ತೂಕ ಹೆಚ್ಚಳದ ಕಾರಣ ಆಕೆಯ ಮೊಳಕಾಲು ಹಾಗೂ ಸೊಂಟದಲ್ಲಿ ನೋವು ಕಾಣಿಸಿಕೊಳ್ಳಲಾರಂಭಿಸಿತ್ತು. ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆ ದೀಪಾ ತನ್ನ ತೂಕವನ್ನು ಇಳಿಸಿಕೊಳ್ಳಲು ನಿರ್ಧರಿಸಿದ್ದರು.
ಇದನ್ನೂ ಓದಿ-Viral Video: ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಕುಣಿದು ಕುಪ್ಪಳಿಸಿದ ಬಾಲಕ!
ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಂಡ ದೀಪಾ
ದೀಪಾ ಅವರು ಹೇಳುವ ಪ್ರಕಾರ, ಅವರು ದಿನದಲ್ಲಿ 4 ಬಾರಿ ಆಹಾರ ಸೇವಿಸುತ್ತಿದ್ದರು. ಅವರ ಉಪಹಾರ ಕೂಡ ತುಂಬಾ ಹೆವಿಯಾಗಿರುತ್ತಿತ್ತು ಮತ್ತು ಉಪಹಾರದಲ್ಲಿ ಹಾಲು-ಮೊಟ್ಟೆ ಇತ್ಯಾದಿಗಳು ಶಾಮೀಲಾಗಿದ್ದವು. ಮಧ್ಯಾಹ್ನದ ಊಟದಲ್ಲಿ ದೀಪಾ 5 ಗ್ರಾಮ್ ತುಪ್ಪ, ಬೆಳೆ ಹಾಗೂ ಹಸಿರು ತರಕಾರಿಗಳನ್ನು ಸೇವಿಸುತ್ತಿದ್ದರು. ಸಾಯಂಕಾಲದ ಸ್ಯಾಕ್ಸ್ ನಲ್ಲಿ ಪಾರ್ಲೆ ಜೀ ಬಿಸ್ಕತ್ತುಗಳನ್ನು ತಿನ್ನುತ್ತಿದ್ದ ದೀಪಾ, ರಾತ್ರಿ ಊಟದಲ್ಲಿ ತುಪ್ಪ, ಪನೀರ್ ಸೇವಿಸುತ್ತಿದ್ದರು. ಕೆಲವೊಮ್ಮೆ ರಾತ್ರಿ ಊಟದ ಬಳಿಕ ಐಸ್ ಕ್ರೀಂ ಹಾಗೂ ಸಿಹಿಯನ್ನು ಕೂಡ ಸೇವಿಸುತ್ತಿದ್ದರು.
ಇದನ್ನೂ ಓದಿ-Viral Video: ಮನೆಯ ಮಾಳಿಗೆ ಮೇಲೆ ಅಜ್ಜಿಯ ವರ್ಕೌಟ್, ವಿಡಿಯೋ ಸಖತ್ ವೈರಲ್
ಒಳ್ಳೆಯ ವರ್ಕ್ ಔಟ್ ಪ್ಲಾನ್
ಒಳ್ಳೆಯ ಊಟದ ಜೊತೆಗೆ ತೂಕ ಇಳಿಕೆಗೆ ವರ್ಕ್ ಔಟ್ ತುಂಬಾ ಮಹತ್ವದ್ದಾಗಿದೆ. ದೀಪಾ ಹೇಳುವ ಪ್ರಕಾರ ಅವರು ತಮ್ಮ ಮನೆಯ ಎಲ್ಲಾ ಕೆಲಸಗಳನ್ನು ಖುದ್ದಾಗಿ ಮಾಡುತ್ತಿದ್ದರು. ಇದಲ್ಲದೆ ನಿಯಮಿತವಾಗಿ ವರ್ಕ್ ಔಟ್ ಮಾಡುತ್ತಿದ್ದರು. ನಿಧಾನಕ್ಕೆ ದೀಪಾ ವಾರ್ಮ್ ಅಪ್ ನಿಂದ ಹೆವಿ ವೇಟ್ ವರೆಗೆ ಎಲ್ಲಾ ವ್ಯಾಯಾಮಗಳನ್ನು ಮಾಡಲು ಆರಂಭಿಸಿದರು. ಈ ರೀತಿ ಕಠಿಣ ಪರಿಶ್ರಮ ಪಟ್ಟು ದೀಪಾ ಅವರು ತಮ್ಮ ತೂಕ ಇಳಿಕೆ ಮಾಡಿಕೊಂಡಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.