Snake and pregnant womans : ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳು ಸನಾತನ ಧರ್ಮದಲ್ಲಿ ಅಡಗಿವೆ. 21ನೇ ಶತಮಾನದಲ್ಲಿಯೂ ಅವುಗಳನ್ನ ನಂಬುವ ಜನ ಅನೇಕರಿದ್ದಾರೆ. ಅಲ್ಲದೆ, ಈ ನಂಬಿಕೆಗಳನ್ನು ಕೇವಲ ಪುರಾಣ ಕಥೆಗಳು ಅಂತ ಕರೆಯುವರೂ ಸಹ ನಮ್ಮ ನಡುವೆ ಇದ್ದಾರೆ. ಆದರೆ ಧರ್ಮಗ್ರಂಥಗಳು, ವೇದಗಳು ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಈ ನಂಬಿಕೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು.


COMMERCIAL BREAK
SCROLL TO CONTINUE READING

ಹಿಂದೂ ಧರ್ಮದಲ್ಲಿ ಹಾವನ್ನು ದೇವರಂತೆ ಪೂಜಿಸಲಾಗುತ್ತವೆ. ಅಲ್ಲದೆ, ಯಾವುದೇ ಹಾವು ಗರ್ಭಿಣಿ ಮಹಿಳೆಯನ್ನು ಕಚ್ಚುವುದಿಲ್ಲ ಎಂಬ ನಂಬಿಕೆಯೂ ಸಹ ಇದೆ. ನಂಬಿಕೆಯ ಪ್ರಕಾರ ಹಾವು ಗರ್ಭಿಣಿಯರ ಹತ್ತಿರವೂ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಹೌದು.. ಇದು ಸತ್ಯ, ಬನ್ನಿ ಇದರ ಹಿಂದಿನ ಅಸಲಿ ಕಾರಣ ಏನು ಅಂತ ತಿಳಿಯೋಣ..


ಇದನ್ನೂ ಓದಿ: ಅಂಬೇಡ್ಕರ್, ಬಾಬೂಜಿ ಸೇರಿ ಈ ನಾಯಕರ ಕುಟುಂಬಸ್ಥರಿಗೆ ಅಯೋಧ್ಯೆಯಿಂದ ಆಹ್ವಾನ! ಯಾರೆಲ್ಲಾ ಇದ್ದಾರೆ ತಿಳಿಯಿರಿ


ಈ ಕುರಿತ ವಿವರಣೆ ಬ್ರಹ್ಮವೈವರ್ತ ಪುರಾಣದಲ್ಲಿ ಕಂಡುಬರುತ್ತದೆ. ಪ್ರಕೃತಿಯು ಹಾವಿಗೆ ಕೆಲವು ವಿಶೇಷ ಇಂದ್ರಿಯಗಳನ್ನು ನೀಡಿದೆ, ಇದರಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಅವುಗಳು ತಿಳಿದುಕೊಳ್ಳಬಹುದು. ಗರ್ಭಾವಸ್ಥೆಯ ನಂತರ ಸ್ತ್ರೀ ದೇಹದಲ್ಲಿ ಕೆಲವು ಅಂಶಗಳು ಉತ್ಪತ್ತಿಯಾಗುತ್ತವೆ, ಅದನ್ನು ಹಾವುಗಳು ಸುಲಭವಾಗಿ ಗುರುತಿಸಬಹುದು. ಆದರೆ ಗರ್ಭಿಣಿ ಮಹಿಳೆಯನ್ನು ಹಾವು ಏಕೆ ಕಚ್ಚುವುದಿಲ್ಲ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ?  ಈ ಪ್ರಶ್ನೆಗೆ ನೀವು ಬ್ರಹ್ಮವೈವರ್ತ ಪುರಾಣದ ಕಥೆಯಲ್ಲಿ ಉತ್ತರ ಕಂಡುಕೊಳ್ಳಬಹುದು. 


ಬ್ರಹ್ಮವೈವರ್ತ ಪುರಾಣದ ಕಥೆಯ ಪ್ರಕಾರ, ಒಮ್ಮೆ ಗರ್ಭಿಣಿ ಮಹಿಳೆಯು ದೇವಾಲಯದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದಳು. ಅವಳು ಸಂಪೂರ್ಣವಾಗಿ ತಪಸ್ಸಿನಲ್ಲಿ ಮುಳುಗಿದ್ದಳು. ಆ ವೇಳೆ ಎರಡು ಹಾವುಗಳನ್ನು ಶಿವಾಲಯಕ್ಕೆ ಬಂದವು, ಅಲ್ಲದೆ, ಗರ್ಭಿಣಿಗೆ ಕಿರುಕುಳ ನೀಡಲಾರಂಭಿಸಿದವು. ಇದರಿಂದ ಮಹಿಳೆಯ ಗಮನ ಬೇರೆಡೆಗೆ ತಿರುಗಿತ್ತು. ತಪಸ್ಸಿನ ಭಂಗದಿಂದಾಗಿ ಹೆಣ್ಣಿನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗು, ನಾಗರಹಾವು ಮತ್ತು ಹಾವಿನ ಕುಲ ಗರ್ಭಿಣಿಯ ಬಳಿ ಹೋದಾಗ ಕುರುಡಾಗುತ್ತದೆ ಶಾಪ ನೀಡಿತಂತೆ. ಈ ಘಟನೆಯ ನಂತರ, ಹಾವುಗಳು ಗರ್ಭಿಣಿಯರನ್ನು ನೋಡಿದ ತಕ್ಷಣ ಕುರುಡಾಗುತ್ತವೆ ಮತ್ತು ಅವಳನ್ನು ಕಚ್ಚುವುದಿಲ್ಲ ಎಂಬ ನಂಬಿಕೆ ಇದೆ. ಅಲ್ಲದೆ, ಗರ್ಭಿಣಿಗೆ ಹಾವಿನ ಕನಸು ಸಹ ಬೀಳುವುದಿಲ್ಲ ಅಂತ ಹಿರಿಯರು ಹೇಳುತ್ತಾರೆ.  


ಇದನ್ನೂ ಓದಿ:ಜನವರಿ 31ರಿಂದ ಸಂಸತ್ ಬಜೆಟ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ


ವೈಜ್ಞಾನಿಕ ಕಾರಣ : ಗರ್ಭಿಣಿಯನ್ನು ಕಚ್ಚದೇ ಇರುವುದರ ಹಿಂದೆ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ ವೈಜ್ಞಾನಿಕ ಕಾರಣವೂ ಇದೆ. ಗರ್ಭಧಾರಣೆಯ ನಂತರ ಮಹಿಳೆಯ ದೇಹದಲ್ಲಿ ಕೆಲವು ಅಂಶಗಳು ರೂಪುಗೊಳ್ಳುತ್ತವೆ ಮತ್ತು ಅನೇಕ ಬದಲಾವಣೆಗಳು ಸಹ ಆಗುತ್ತವೆ. ಇವುಗಳಲ್ಲಿ ಪ್ರಮುಖವಾದದ್ದು ಹಾರ್ಮೋನುಗಳ ಸ್ರವಿಸುವಿಕೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಮಹಿಳೆಯ ಸ್ವಭಾವ, ರುಚಿ, ಬಣ್ಣ ಇತ್ಯಾದಿಗಳು ಬದಲಾಗುತ್ತವೆ. ಮಹಿಳೆಯ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯನ್ನು ಹಾವು ಗ್ರಹಿಸಬಹುದು ಮತ್ತು ಅವಳ ಬಳಿಗೆ ಬರುವ ಹಿಂದೇಟು ಹಾಕಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಆದರೆ, ಈ ಕುರಿತು ದೃಢೀಕರಿಸಲ್ಪಟ್ಟಿಲ್ಲ. ಆದರೆ ಇದೇ ನಿಜ ಇರಬೇಕು ಅಂತ ಹೇಳಲಾಗುತ್ತದೆ.


(ಹಕ್ಕುತ್ಯಾಗ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.