ಅಂಬೇಡ್ಕರ್, ಬಾಬೂಜಿ ಸೇರಿ ಈ ನಾಯಕರ ಕುಟುಂಬಸ್ಥರಿಗೆ ಅಯೋಧ್ಯೆಯಿಂದ ಆಹ್ವಾನ! ಯಾರೆಲ್ಲಾ ಇದ್ದಾರೆ ತಿಳಿಯಿರಿ

Ayodhya Invitation to Dalit Leaders: ಭಾರತದ ಸಂವಿಧಾನ ರಚಿಸಿದ ಡಾ. ಭೀಮರಾವ್ ಅಂಬೇಡ್ಕರ್ ಅವರ ಹೆಸರಿನಲ್ಲಿ ದೇಶದ ಹಲವು ಪಕ್ಷಗಳು ರಾಜಕೀಯ ಮಾಡುತ್ತಿವೆ. ಆದರೆ ಈ ಸಂದರ್ಭದಲ್ಲಿ ಅಂಬೇಡ್ಕರ್ ಕುಟುಂಬ ಸೇರಿದಂತೆ, ಕಾನ್ಶಿರಾಮ್, ಚಂದ್ರಶೇಖರ್ ಆಜಾದ್ ವಂಶಸ್ಥರು, ಪರಿಶಿಷ್ಟ ಜಾತಿ-ಪಂಗಡದ ಸಮುದಾಯದ ನಾಯಕರಾಗಿ ಹೊರಹೊಮ್ಮಿದ ಅನೇಕರಿಗೆ ಅಯೋಧ್ಯೆಯ ಆಹ್ವಾನ ತಲುಪಿದೆ.

Written by - Bhavishya Shetty | Last Updated : Jan 12, 2024, 04:26 PM IST
    • ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭ
    • ಪ್ರತ್ಯೇಕ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆಹ್ವಾನ
    • ವಿರೋಧ ಪಕ್ಷಗಳನ್ನು ಅಸಮಾಧಾನಗೊಳಿಸುವ ಸಾಧ್ಯತೆ
ಅಂಬೇಡ್ಕರ್, ಬಾಬೂಜಿ ಸೇರಿ ಈ ನಾಯಕರ ಕುಟುಂಬಸ್ಥರಿಗೆ ಅಯೋಧ್ಯೆಯಿಂದ ಆಹ್ವಾನ! ಯಾರೆಲ್ಲಾ ಇದ್ದಾರೆ ತಿಳಿಯಿರಿ title=
Ayodhya

Ayodhya Invitation to Dalit Leaders: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭಕ್ಕೆ ಪ್ರತ್ಯೇಕ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಸಹ ಆಹ್ವಾನಿಸಲಾಗಿದೆ. ಚಳವಳಿಯಲ್ಲಿ ಮಡಿದ ಸಂತರು, ಮುಖಂಡರು, ರೈತರು, ಕಾರ್ಮಿಕರು, ಕರಸೇವಕರ ಕುಟುಂಬಗಳ ಜೊತೆಗೆ ಕೆಲವು ಹಿರಿಯ ದಲಿತ ನಾಯಕರ ಕುಟುಂಬಗಳನ್ನು ಆಹ್ವಾನಿಸಲಾಗಿದೆ. ಈ ನಡೆ ವಿರೋಧ ಪಕ್ಷಗಳನ್ನು ಅಸಮಾಧಾನಗೊಳಿಸುವ ಸಾಧ್ಯತೆ ಕೂಡ ಇದೆ ಎಂದು ಕೆಲ ಮೂಲಗಳು ಮಾತನಾಡಿಕೊಳ್ಳುತ್ತಿವೆ.

ಭಾರತದ ಸಂವಿಧಾನ ರಚಿಸಿದ ಡಾ. ಭೀಮರಾವ್ ಅಂಬೇಡ್ಕರ್ ಅವರ ಹೆಸರಿನಲ್ಲಿ ದೇಶದ ಹಲವು ಪಕ್ಷಗಳು ರಾಜಕೀಯ ಮಾಡುತ್ತಿವೆ. ಆದರೆ ಈ ಸಂದರ್ಭದಲ್ಲಿ ಅಂಬೇಡ್ಕರ್ ಕುಟುಂಬ ಸೇರಿದಂತೆ, ಕಾನ್ಶಿರಾಮ್, ಚಂದ್ರಶೇಖರ್ ಆಜಾದ್ ವಂಶಸ್ಥರು, ಪರಿಶಿಷ್ಟ ಜಾತಿ-ಪಂಗಡದ ಸಮುದಾಯದ ನಾಯಕರಾಗಿ ಹೊರಹೊಮ್ಮಿದ ಅನೇಕರಿಗೆ ಅಯೋಧ್ಯೆಯ ಆಹ್ವಾನ ತಲುಪಿದೆ. 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ನಡೆ, ಇತರ ನಾಯಕರ ಟೆನ್ಶನ್ ಹೆಚ್ಚಿಸುವ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ: ರೆಡ್ ಡ್ರೇಸ್‌ನಲ್ಲಿ ಸೌಂದರ್ಯ ದೇವತೆ ಸನ್ನಿ..! ಫೋಟೋಸ್‌ ನೋಡಿ

ಅಂಬೇಡ್ಕರ್ ಕುಟುಂಬಕ್ಕೆ ಆಹ್ವಾನ

ಡಾ.ಅಂಬೇಡ್ಕರ್ ಅವರ ವಂಶಸ್ಥರಾದ ಪ್ರಕಾಶ್ ಅಂಬೇಡ್ಕರ್ ಅವರು ಮಹಾರಾಷ್ಟ್ರದಲ್ಲಿ ನೆಲೆಸಿದ್ದು, ‘ವಂಚಿತ್ ಬಹುಜನ ಅಘಾಡಿ’ ಎಂಬ ಪಕ್ಷ ಕಟ್ಟಿದ್ದಾರೆ. ಪ್ರಕಾಶ್ ಅವರು ಮೂರು ಬಾರಿ ಸಂಸದರಾಗಿದ್ದರು. ಇವರಿಗೂ ಕೂಡ ಅಯೋಧ್ಯೆಯ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದು ಹೆಸರು ಬಾಬು ಜಗಜೀವನ್ ರಾಮ್ ಅವರದ್ದು. ಇವರು ದೇಶದ ಮೊದಲ ದಲಿತ ಉಪಪ್ರಧಾನಿ ಮತ್ತು ರಕ್ಷಣಾ ಸಚಿವರೂ ಆಗಿದ್ದರು. ಅವರ ಪುತ್ರಿ, ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ. ಅವರ ಪಕ್ಷದ ನಾಯಕರು ಜನವರಿ 22 ರಂದು ಅಯೋಧ್ಯೆಗೆ ಹೋಗುತ್ತಿಲ್ಲ. ಹೀಗಿರುವಾಗ, ಜಗಜೀವನ್ ರಾಮ್ ಅವರ ಕುಟುಂಬ ಸದಸ್ಯರಿಗೆ ಇದು ಧಾರ್ಮಿಕ ಬಿಕ್ಕಟ್ಟಿನ ಪರಿಸ್ಥಿತಿಯಾಗಿದೆ. ಅಂದಹಾಗೆ ಇಂದಿರಾಗಾಂಧಿಯವರ ಕಾಲದಲ್ಲಿ ತುರ್ತುಪರಿಸ್ಥಿತಿ ಹಿಂಪಡೆದ ನಂತರ ಜಗಜೀವನ್ ರಾಮ್ ಅವರು ಕಾಂಗ್ರೆಸ್‌’ನಿಂದ ಬೇರ್ಪಟ್ಟು ಹೊಸ ಪಕ್ಷವನ್ನು ಸ್ಥಾಪಿಸಿದರು. ನಂತರ ಜನತಾ ಪಕ್ಷದ ಸರ್ಕಾರದಲ್ಲಿ ಉಪಪ್ರಧಾನಿಯಾದರು.

ಮೂರನೆಯ ಹೆಸರು ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ ಅವರದ್ದು. ಮೊಟ್ಟಮೊದಲ ಬಾರಿಗೆ ಉತ್ತರ ಭಾರತದಲ್ಲಿ ದಲಿತರನ್ನು ಅಧಿಕಾರದ ಮೇಲಕ್ಕೆ ತಂದವರು ಕಾನ್ಶಿರಾಮ್. ಹಿಂದಿ ಬೆಲ್ಟ್‌’ನಲ್ಲಿ ದಲಿತರನ್ನು ಒಗ್ಗೂಡಿಸಿದ ಅವರು ಮಾಯಾವತಿಯನ್ನು ರಾಜಕೀಯಕ್ಕೆ ತಂದರು. ಆ ಬಳಿಕ ಮಾಯಾವತಿ, ಕಾನ್ಷಿರಾಮ್ ಅವರ ಉತ್ತರಾಧಿಕಾರಿ ಎಂದು ಘೋಷಿಸಲ್ಪಟ್ಟರು. ದೀರ್ಘಕಾಲದವರೆಗೆ, ಮಾಯಾವತಿ ಉತ್ತರ ಭಾರತದ ಅತಿದೊಡ್ಡ ದಲಿತ ಮುಖಂಡೆ ಎಂದು ಕರೆಯಲ್ಪಟ್ಟರು. ಆದರೆ, ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾದ ನಂತರ ಅವರ ಛಾಪು ಮರೆಯಾಯಿತು. ಸದ್ಯ ಮಾಯಾವತಿ ಅವರನ್ನು ವಿರೋಧ ಪಕ್ಷದ ಮೈತ್ರಿಕೂಟಕ್ಕೆ ಸೇರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಯೋಧ್ಯೆಯಿಂದ ಕಾನ್ಶಿರಾಮ್ ಅವರ ಕುಟುಂಬದ ಸದಸ್ಯರನ್ನು ಆಹ್ವಾನಿಸುವುದು ಮಾಯಾವತಿಯವರ ರಾಜಕೀಯದ ಮೇಲೆ ಪರಿಣಾಮ ಬೀರಬಹುದು.

ಯಾರಿಗಿದೆ ಆಹ್ವಾನ?

ರಾಮ ಜನ್ಮಭೂಮಿ ಹೋರಾಟದ ವೇಳೆ ಹುತಾತ್ಮರಾದ ಕರಸೇವಕರ ಕುಟುಂಬದ ಸದಸ್ಯರನ್ನೂ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇಶಾದ್ಯಂತ ರೈತರು, ಕಾರ್ಮಿಕರು ಮತ್ತು ಸಾವಿರಾರು ಸಂತರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಮುಖ್ಯಮಂತ್ರಿಯನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿಲ್ಲ' ಎಂದು ಮೂಲವೊಂದು ತಿಳಿಸಿದೆ.

ಆಹ್ವಾನಿತರ ಪಟ್ಟಿಯಲ್ಲಿ ಸುಪ್ರೀಂ ಕೋರ್ಟ್‌’ನ ಮೂವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸೇನೆಯ ಮೂರು ಸೇವೆಗಳ ನಿವೃತ್ತ ಮುಖ್ಯಸ್ಥರು, ಮಾಜಿ ರಾಯಭಾರಿಗಳು, ಉನ್ನತ ಅಧಿಕಾರಿಗಳು, 'ಪ್ರಮುಖ ಹುದ್ದೆ' ಹೊಂದಿರುವ ಐಪಿಎಸ್ ಅಧಿಕಾರಿಗಳು ಮತ್ತು ನೊಬೆಲ್ ಪ್ರಶಸ್ತಿ ವಿಜೇತರು ಸೇರಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರು ಮತ್ತು ಅಯೋಧ್ಯೆ ಮೂಲದ ಎಲ್ಲಾ ಪಕ್ಷಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.

ಬುಡಕಟ್ಟು ಸಮುದಾಯ ಮತ್ತು ಅಲೆಮಾರಿ ಜಾತಿಗಳ 'ಪ್ರಮುಖ ವ್ಯಕ್ತಿಗಳು', ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳನ್ನು ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಭಾರತ ರತ್ನ, ಪರಮವೀರ ಚಕ್ರ, ಪದ್ಮ ಪ್ರಶಸ್ತಿ ಪುರಸ್ಕೃತ ವ್ಯಕ್ತಿಗಳು ಹಾಗೂ ಪ್ರಮುಖ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಕವಿಗಳು, ಕಲಾವಿದರು, ಸಾಹಿತಿಗಳು, ರೈತರು, ಕಾರ್ಮಿಕರು ಮತ್ತು ಕ್ರೀಡಾ ಪಟುಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: IPL ಕ್ರಿಕೆಟ್ ಇತಿಹಾಸದಲ್ಲಿ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ಆ 5 ದಾಖಲೆಗಳು ಯಾವುವು ಗೊತ್ತಾ?

ಕಥೆಗಾರರು, ಮಠಗಳು ಮತ್ತು ದೇವಾಲಯಗಳ ಟ್ರಸ್ಟಿಗಳು, 150 ಕ್ಕೂ ಹೆಚ್ಚು ಸಂಪ್ರದಾಯಗಳ ಪುರೋಹಿತರು, ನೇಪಾಳದ 'ಸಂತ ಸಮಾಜದ' ಪ್ರಮುಖರು ಹಾಗೂ ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಪ್ರತಿನಿಧಿಗಳು ಮತ್ತು ಪ್ರಮುಖ ದಾನಿಗಳನ್ನು ಸಹ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಹ್ವಾನಿತರಲ್ಲಿ 50 ವಿವಿಧ ದೇಶಗಳಲ್ಲಿ ವಾಸಿಸುವ ಹಿಂದೂ ಸಮುದಾಯದ 55 ಜನರು ಸೇರಿದ್ದಾರೆ. ರಾಮಮಂದಿರ ಟ್ರಸ್ಟ್ ಜನವರಿ 22 ರ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಎಲ್ಲರಿಗೂ ಆಹಾರ, ವಸತಿ ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News