ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಟ್ರೈನ್ ನಲ್ಲಿ ಪ್ರಯಾಣಿಸುತ್ತಿರುವ ವ್ಯಕ್ತಿಗೆ ಮಹಿಳೆಯೋಬ್ಬಳು ಚಪ್ಪಲಿಯಿಂದ ಹೊಡೆಯುತ್ತಿದ್ದಾಳೆ. ಈ ವಿಡಿಯೋದಲ್ಲಿ ಇತರ ಜನರು ಕೂಡ ಕಾಣಿಸಿಕೊಂಡಿದ್ದು, ಅವರು ಈ ಘಟನೆಯ ಮೊಬೈಲ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯಿಂದ ಚಪ್ಪಲಿ ಏಟು ತಿನ್ನುತ್ತಿದ್ದ ವ್ಯಕ್ತಿ ಮಹಿಳೆಯತ್ತ ನೋಡುತ್ತಾ ಅಶ್ಲೀಲ ಸನ್ನೆಗಳನ್ನು ಮಾಡುವಲ್ಲಿ ನಿರತವಾಗಿದ್ದ ಎನ್ನಲಾಗಿದೆ. (Viral News In Kannada)

COMMERCIAL BREAK
SCROLL TO CONTINUE READING

ಈ ಘಟನೆ ಎಲ್ಲಿ ನಡೆದಿದೆ ಮತ್ತು ಈ ವಿಡಿಯೋ ಯಾವಾಗ ಚಿತ್ರೀಸಲಾಗಿದೆ ಎಂಬುದರ ಮಾಹಿತಿ ತಿಳಿದುಬಂದಿಲ್ಲ. ಆದರೆ, ವಿಡಿಯೋದಲ್ಲಿ ಏಟು ತಿನ್ನುತ್ತಿರುವ ವ್ಯಕ್ತಿ ಮಹಿಳೆಯತ್ತ ನೋಡಿ ಅಶ್ಲೀಲ ಸಂಕೇತಗಳನ್ನು ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಮಹಿಳೆ ಆತನಿಗೆ ಪಾಠ ಕಲಿಸಲು ಚಪ್ಪಲಿಯಿಂದ ಹೊಡೆದಿದ್ದಾಳೆ. ವಿಡಿಯೋ ವೀಕ್ಷಿಸಿದ ಬಹುತೇಕ ಜನರು ಕೈಗೊಂಡ ಕ್ರಮವನ್ನು ಪ್ರಶಂಸಿಸುತ್ತಿದ್ದಾರೆ ಮತ್ತು ಇಂತಹ ವ್ಯಕ್ತಿಗೆ ಇದೇ ರೀತಿ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ. 

ಸಾಮಾಜಿಕ ವೇದಿಕೆ X ನಲ್ಲಿ @gharkekalesh ಹೆಸರಿನ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಮಹಿಳೆ ತನ್ನ ಚಪ್ಪಲಿಯಿಂದ ವ್ಯಕ್ತಿಗೆ ಮಂಗಳಾರತಿ ಎತ್ತಿದ್ದಾಳೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಓರ್ವ 'X' ಬಳಕೆದಾರ 'ಮಹಿಳೆ ತುಂಬಾ ಫ್ರಸ್ಟ್ರೇಟ್ ಆಗಿದ್ದಾಳೆ ಎಂಬಂತೆ ತೋರುತ್ತಿದೆ, ಇದರಲ್ಲಿ ಕಥೆಯ ಒಂದು ಭಾಗ ಮಾತ್ರ ತೋರಿಸಲಾಗಿದೆ' ಎಂದಿದ್ದಾನೆ.  ವಿಡಿಯೋಗೆ ಪ್ರತಿಕ್ರಿಯಿಸಿರುವ ಮತ್ತೊರ್ವ ಬಳಕೆದಾರ. ' ಈ ವಿಡಿಯೋದಲ್ಲಿ ಮಹಿಳೆ ವ್ಯಕ್ತಿಯ ಪ್ಯಾಂಟ್ ಜೀಪ್ ತೆರೆದಿದೆ ಎಂದು ಹೇಳುತ್ತಿದ್ದಾಳೆ. ಆತ ಜೀಪ್ ಹಾಕಲು ಮರೆತಿರಬಹುದು ಮತ್ತು ಜೀಪ್ ಹಾಕಲು ಮುಂದಾದಾಗ ಮಹಿಳೆ ಅದನ್ನು ನೋಡಿರಬಹುದು' ಎಂದಿದ್ದಾನೆ. 


ಇದನ್ನೂ ಓದಿ-ಪಾಕ್ ವೀಸಾ ಕಚೇರಿಯ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಪ್ರಸಾರ.. ವಿಡಿಯೋ ವೈರಲ್!


ಈ ವಿಡಿಯೋ ಕುರಿತು ಬರೆದುಕೊಂಡ ಮೂರನೇ ಬಳಕೆದಾರ 'ಯಾವುದೇ ಓರ್ವ ಪುರುಷ ಈ ರೀತಿ ತಪ್ಪು ಮಾಡಿದರೆ, ಮಹಿಳೆ ಇದೇ ರೀತಿ ಹೊಡೆಯುತ್ತಾಳೆ ಮತ್ತು ಜನ ನೋಡುತ್ತಾ ನಿಲ್ಲುತ್ತಾರೆ. ಒಂದು ವೇಳೆ ಮಹಿಳೆ ತಪ್ಪು ಮಾಡಿದರೆ ಆಕೆಗೂ ಇದೇ ರೀತಿ ಹೊಡೆಯಬೇಕೆ?' ಎಂದಿದ್ದಾನೆ. ನಾಲ್ಕನೇ ಬಳಕೆದಾರ, 'ಎಲ್ಲೋ ಹೊರಹಾಕಬೇಕಿದ್ದ ಸಿಟ್ಟು ಮಹಿಳೆ ಇಲ್ಲಿ ಹೊರಹಾಕಿದ್ದಾಳೆ ಎಂದು ನನಗೇಕೆ ಅನ್ನಿಸುತ್ತಿದೆ?' ಎಂದು ಪ್ರಷ್ಟಿಸಿದ್ದಾನೆ. ಐದನೇ ಬಳಕೆದಾರ 'ಈ ವಿಡಿಯೋವನ್ನು ದೇಶದ ಎಲ್ಲಾ ಪುರುಷರಿಗೆ ತೋರಿಸಬೇಕು' ಎಂದಿದ್ದಾನೆ. 


ಇದನ್ನೂ ಓದಿ-ಸಾರಾಯಿ ಕುಡಿದು ಫುಲ್ ಟಲ್ಲಿಯಾದ ನಾಯಿ, ನಂತರ ಏನ್ ಮಾಡಿದೆ ನೀವೇ ನೋಡಿ!

ಇತ್ತೀಚೆಗಷ್ಟೇ ದೆಹಲಿ ಮೆಟ್ರೊದಲ್ಲಿಯೂ ಕೂಡ ಓರ್ವ ವ್ಯಕ್ತಿ ಇದೇ ರೀತಿಯ ಕೆಟ್ಟ ವರ್ತನೆ ಮಾಡುತ್ತಿರುವುದು ವರದಿಯಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಅದರ ವಿಡಿಯೋ ಕೂಡ ತುಂಬಾ ವೈರಲ್ ಆಗಿತ್ತು ಮತ್ತು ಅದು ನಂತರ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ದೊರೆತ ಮಾಹಿತಿಯ ಪ್ರಕಾರ ನಂತರ ಪೊಲೀಸರು ವ್ಯಕ್ತಿಯ ಮೇಲೆ ಕ್ರಮ ಕೂಡ ಕೈಗೊಂಡಿದ್ದರು. ಇದೀಗ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ಈ ವಿಡಿಯೋ ವೈರಲ್ ಆಗಿದೆ. 


ಇಲ್ಲಿದೆ ವೈರಲ್ ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ