ನವದೆಹಲಿ: 'ಹೋಗು, ನನ್ನನ್ನು ತಡೆಯಬೇಡಿ, ನನ್ನನ್ನು ಕಿಡ್ನಾಪ್ ಮಾಡಲಾಗಿದೆ...' ಎಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ತನ್ನ ಸೀಟಿನಿಂದ ಎದ್ದು ಹೊರಬಂದು ಕಿರುಚಾಟ ಆರಂಭಿಸಿದ್ದಾಳೆ. ನಂತರ ಇದ್ದಕ್ಕಿದ್ದಂತೆ ಅವಳು ಸಿಬ್ಬಂದಿಯನ್ನು ಹೊಡೆಯಲು ಪ್ರಾರಂಭಿಸುತ್ತಾಳೆ. ಹ್ಯೂಸ್ಟನ್ನಿಂದ ಡೆನ್ವರ್ಗೆ ಹೊರಟಿದ್ದ ಫ್ರಾಂಟಿಯರ್ ಏರ್ಲೈನ್ಸ್ ವಿಮಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವೈರಲ್ ಕ್ಲಿಪ್ನಲ್ಲಿ, ಮಹಿಳೆ ವಿಮಾನ ಪ್ರಯಾಣದ ವೇಳೆ ಜನರೊಂದಿಗೆ ಜಗಳವಾಡುವುದನ್ನು ಕೇಳಬಹುದು. ಅವಳು ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದನ್ನು ಸಹ ನೀವು ನೋಡಬಹುದು. (Viral News In Kannada)
ವಿಮಾನದಲ್ಲಿ ಪ್ರೇತದ ಉಪಸ್ಥಿತಿ ಇದೆ!
ಈ ಕ್ಲಿಪ್ ಅನ್ನು X ವೇದಿಕೆಯಲ್ಲಿ @CollinRugg ಹೆಸರಿನ ಬಳಕೆದಾರರು ಹಂಚಿಕೊಂಡಿದ್ದಾರೆ. ಘಟನೆಯ ಬಗ್ಗೆ ಶೀರ್ಷಿಕೆಯಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. 30 ಸೆಕೆಂಡುಗಳ ವೀಡಿಯೊದಲ್ಲಿ, ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಏನಾದರೂ ಅರ್ಥವಾಗಬೇಕು ಎನ್ನುವಷ್ಟರಲ್ಲೇ ಮತ್ತೊರ್ವ ಮಹಿಳಾ ಪ್ರಯಾಣಿಕರು ತಾನು 'ಪಾಸ್ಟರ್' ಎಂದು ಹೇಳಿಕೊಳ್ಳಲು ಪ್ರಾರಂಭಿಸುವುದನ್ನು ನೀವು ನೋಡಬಹುದು.
ನಿಮ್ಮನ್ನು ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಕೊಲ್ಲಲು ಬಯಸುವ ಪ್ರೇತ ವಿಮಾನವನ್ನು ಕಾಡುತ್ತಿದೆ ಎಂದು ಅವಳು ಜನರಿಗೆ ಮನವರಿಕೆ ಮಾಡಲು ಪ್ರಾರಂಭಿಸುತ್ತಾಳೆ. ಹೀಗೆ ಹೇಳುತ್ತಾ ಆ ಮಹಿಳೆ ಯೇಸುಕ್ರಿಸ್ತನ ಹೆಸರಿನಲ್ಲಿ ಪ್ರಾರ್ಥಿಸಲು ಆರಂಭಿಸುತ್ತಾಳೆ. ಮಹಿಳೆಯನ್ನು ತಡೆಯಲು ಪ್ರಯತ್ನಿಸಿದಾಗ, ಅವಳು ನಿಯಂತ್ರಿಸಲಾಗದೆ ಸೀಟುಗಳ ಮೇಲೆ ಹತ್ತಿ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಜಗಳವಾಡುವುದನ್ನು ಕ್ಲಿಪ್ನಲ್ಲಿ ಕಾಣಬಹುದು.
ಇದನ್ನೂ ಓದಿ-ವರನ ಕೊರಳಲ್ಲಿ ನೋಟಿನ ವಿಶಾಲ ಗಾತ್ರದ ಮಾಲೆ, 'ಭಾಯಿ ಮೊದಲು ಮನೆ ಗೋಡೆ ಕಟ್ಟಿಸಿಕೊ' ಎಂದ ನೆಟ್ಟಿಗರು!
ಫೇಮಸ್ ಆಗಲು ಹೀಗೆ ಮಾಡಿರಬೇಕು...
ನವೆಂಬರ್ 21 ರಂದು ಹಂಚಿಕೊಳ್ಳಲಾದ ಈ ವೀಡಿಯೊ, ಇದುವರೆಗೆ 4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದೇ ವೇಳೆ, 7 ಸಾವಿರಕ್ಕೂ ಹೆಚ್ಚು ಜನರು ಅದನ್ನು ಲೈಕ್ ಮಾಡಿದ್ದಾರೆ. ಇದಲ್ಲದೆ, ಬಳಕೆದಾರರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ ಬಹುಶಃ ಆಕೆ ನಿಜವಾಗಿಯೂ ಅಪಹರಿಸಲ್ಪಟ್ಟಿದ್ದಾಳೆಯೇ? ಎಂದು ಪ್ರಶ್ನಿಸಿ ಕಾಮೆಂಟ್ ಮಾಡಿದ್ದರೆ, ಮತ್ತೊರ್ವ ಬಳಕೆದಾರ – ಯಾರಿಗೆ ಗೊತ್ತು ಫೇಮಸ್ ಆಗಲು ಹೀಗೆ ಮಾಡಿರಬಹುದು ಎಂದಿದ್ದಾರೆ. ಇದೇ ವೇಳೆ, ಕಾಮೆಂಟ್ ಬರೆದುಕೊಂಡ ಮೂರನೇ ಬಳಕೆದಾರರು - ವಿಮಾನದಲ್ಲಿ ಪ್ರಯಾಣಿಸದಿರಲು ಮತ್ತೊಂದು ಕಾರಣ ಎಂದು ಹೇಳಿದ್ದಾರೆ.
ಫಾಕ್ಸ್ ನ್ಯೂಸ್ ಪ್ರಕಾರ, ತುರ್ತು ಪರಿಸ್ಥಿತಿಯ ನಡುವೆ ವಿಮಾನವನ್ನು ಪೊಲೀಸ್ ಕ್ರಮಕ್ಕಾಗಿ ಡಲ್ಲಾಸ್ನಲ್ಲಿ ಇಳಿಸಲಾಗಿದೆ. ವೀಡಿಯೊ ಕೊನೆಯಲ್ಲಿ, ಕಾನೂನು ಜಾರಿ ಅಧಿಕಾರಿಯೊಬ್ಬರು ವಿಮಾನ ಹತ್ತುವುದನ್ನು ಮತ್ತು ಅಶಿಸ್ತಿನ ಮಹಿಳಾ ಪ್ರಯಾಣಿಕರನ್ನು ತೆಗೆದುಹಾಕುವುದನ್ನು ನೀವು ನೋಡಬಹುದು. ಆದರೆ, ಇದುವರೆಗೆ ವಿಮಾನಯಾನ ಸಂಸ್ಥೆಯಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
NEW: “Possessed” woman starts screaming and climbing over seats on a Frontier Airlines flight, claiming she was kidnapped.
After the situation briefly calmed down, one woman got up and declared that the woman was “possessed” and started singing gospel music.
“Stop blocking me!… pic.twitter.com/5yfo95h69h
— Collin Rugg (@CollinRugg) November 21, 2023
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ