ಏಳು ವರ್ಷಗಳಿಂದ ಸಂತಾನಕ್ಕಾಗಿ ಹಂಬಲಿಸುತ್ತಿದ್ದ ಮಹಿಳೆಗೆ ಐದು ಮಕ್ಕಳ ಜನನ
Woman Delivers 5 Babies in Rajasthan:ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ ರೇಷ್ಮಾ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಬ್ಬರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿಗೆ ಜನ್ಮ ರೇಷ್ಮಾ ಜನ್ಮ ನೀಡಿರುವ ಬಗ್ಗೆ ಖಾಸಗಿ ಆಸ್ಪತ್ರೆ ವೈದ್ಯೆ ಆಶಾ ಮೀನಾ ತಿಳಿಸಿದ್ದಾರೆ.
Woman Delivers 5 Babies in Rajasthan : ರಾಜಸ್ಥಾನದಲ್ಲಿ ಆಶ್ಚರ್ಯಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಸಾಲ್‌ಪುರದ ಪಿಪರಾಣಿ ಗ್ರಾಮದ ನಿವಾಸಿ ರೇಷ್ಮಾ ಎಂಬವರು ಐದು ಮಕ್ಕಳಿಗೆ ಜನಂ ನೀಡಿದ್ದಾರೆ. ಮದುವೆಯಾಗಿ 7 ವರ್ಷಗಳ ನಂತರ ತಾಯಿಯಾಗಿರುವ ರೇಷ್ಮಾ ಐದು ಮಕ್ಕಳಿಗೆ ತಾಯಿಯಾಗಿದ್ದಾರೆ. ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ ರೇಷ್ಮಾ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಬ್ಬರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿಗೆ ಜನ್ಮ ರೇಷ್ಮಾ ಜನ್ಮ ನೀಡಿರುವ ಬಗ್ಗೆ ಖಾಸಗಿ ಆಸ್ಪತ್ರೆ ವೈದ್ಯೆ ಆಶಾ ಮೀನಾ ತಿಳಿಸಿದ್ದಾರೆ. ಆಕೆ 7 ತಿಂಗಳಲ್ಲಿಯೇ ಈ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
300 ರಿಂದ 660 ಗ್ರಾಂ ವರೆಗೆ ಮಕ್ಕಳ ತೂಕ :
ಹೆರಿಗೆಯ ನಂತರ ತಾಯಿಯ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳು ದುರ್ಬಲರಾಗಿದ್ದ ಹಿನ್ನೆಲೆಯಲ್ಲಿ ಕರೌಲಿಯ ಸರ್ಕಾರಿ ಆಸ್ಪತ್ರೆಯ ಎಸ್‌ಎನ್‌ಸಿಯು ವಾರ್ಡ್‌ಗೆ ದಾಖಲಿಸಲಾಗಿತ್ತು. ಎಲ್ಲಾ ಮಕ್ಕಳು 300 ಗ್ರಾಂನಿಂದ 660 ಗ್ರಾಂ ತೂಕ ಹೊಂದಿದ್ದಾರೆ ಎಂದು ಎಸ್‌ಎನ್‌ಸಿಯು ಘಟಕದ ಪ್ರಭಾರಿ ಡಾ.ಮಹೇಂದ್ರ ಮೀನಾ ತಿಳಿಸಿದ್ದಾರೆ. ತೀವ್ರ ನಿಗಾದ ಅಗತ್ಯವಿದ್ದ ಕಾರಣ ಮಕ್ಕಳನ್ನು ಜೈಪುರ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ : ಕಾರ್ಗಿಲ್ ವಿಜಯ್ ದಿವಸ್: ಪಾಕ್ ಕ್ರೂರಿಗಳ ಹುಟ್ಟಡಗಿಸಲು ವೀರ ಯೋಧರಿಗೆ ಸಹಾಯ ಮಾಡಿದ್ದರು ಈ ಜನ!
ಮದುವೆಯಾಗಿ 7 ವರ್ಷಗಳಾದರೂ ಮಕ್ಕಳಾಗಿರಲಿಲ್ಲ :
ರೇಷ್ಮಾ ಅವರು ಏಳು ವರ್ಷದ ಹಿಂದೆ ಅಶ್ಕ್ ಅಲಿ ಎಂಬವರನ್ನು ವಿವಾಹವಾಗಿದ್ದರು. ಮದುವೆಯಾಗಿ 7 ವರ್ಷಗಳಾದರೂ ಮಕ್ಕಳಿರಲಿಲ್ಲ. ಈ ಕೊರಗು ರೇಷ್ಮಾ ಮತ್ತು ಅವರ ಪರಿಯನ್ನು ಕಾಡುತ್ತಿತ್ತು. ಇದರಿಂದಾಗಿ ಹಲವೆಡೆ ತೋರಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ರೇಷ್ಮಾ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈ ತಿಂಗಳು ಜುಲೈ 22 ರಂದು ಮೂರು ಮಕ್ಕಳು ಜನಿಸಿದರು :
ಇದೆ ವೇಳೆ ಜುಲೈ 22 ರಂದು, 22 ವರ್ಷ ವಯಸ್ಸಿನ ಮಹಿಳೆಯೊಬ್ಬರು ಒಟ್ಟಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಡಾ.ಮಹೇಂದ್ರ ಮೀನಾ ತಿಳಿಸಿದ್ದಾರೆ. ತಾಯಿ ಮತ್ತು ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳನ್ನು ಎಸ್‌ಎನ್‌ಸಿಯು ವಾರ್ಡ್‌ನಲ್ಲಿ ಇರಿಸಲಾಗಿದೆ.
ಇದನ್ನೂ ಓದಿ :Lok Sabha News : ಇಡೀ ಮುಂಗಾರು ಅಧಿವೇಶನದಿಂದ 4 ಕಾಂಗ್ರೆಸ್ ಲೋಕಸಭಾ ಎಂಪಿಗಳ ಅಮಾನತು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.