Viral Video : ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಅನೇಕ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ.ಇಲ್ಲಿ ಒಂದಕ್ಕಿಂತ ಹೆಚ್ಚು ತಮಾಷೆಯ ವಿಡಿಯೋಗಳನ್ನು ನಾವು ದಿನನಿತ್ಯ ನೋಡಬಹುದು. ಅದನ್ನು ನೋಡಿ ನಗು ನಿಲ್ಲುವುದಿಲ್ಲ, ಕೆಲವೊಮ್ಮೆ ಕಣ್ಣುಗಳು ತೇವವಾಗುವಂತಹ ಮನಮುಟ್ಟುವ ವಿಡಿಯೋಗಳು ಸಹ ಇರುತ್ತವೆ. ಆದರೆ, ಈಗ ಬಂದಿರುವ ವಿಡಿಯೋ ಇವೆಲ್ಲಕ್ಕಿಂತ ಭಿನ್ನವಾಗಿದೆ. ಇದನ್ನೇನಾದರೂ ಸಿಂಗಲ್ಸ್‌ಗಳು ನೋಡಿದರೆ ಬಾಯಿಮೇಲೆ ಬೆರಳಡುವುದು ಪಕ್ಕಾ. ಇದರಲ್ಲಿ ಇಬ್ಬರ ನಡುವಿನ ವಯಸ್ಸಿನ ಅಂತರವನ್ನು ನೋಡಿದ ನಂತರ ಯಾರಿಗಾದರೂ ದಂಗಾಗುತ್ತದೆ. ಈ ಶಾಕಿಂಗ್ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದ್ದು, ನೂರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಎಕ್ಸ್‌ಪ್ರೆಸ್ ರೈಲಿಗೆ ಕೈ ಅಡ್ಡಹಾಕಿ ನಿಲ್ಲಿಸಿದ ತಾತ, ದಂಗಾದ ನೆಟ್ಟಿಗರು


ಪ್ರೀತಿ ಕುರುಡ ನಿಜ. ಆದರೆ ಈ ವಿಡಿಯೋ ನೋಡಿದರೆ ನಿಮ್ಮ ಕಣ್ಣುಗಳನ್ನ ನೀವೇ ನಂಬಲಾಗುವುದಿಲ್ಲ. ಪಾರ್ಕ್‌ನಲ್ಲಿ  ನಡೆದುಕೊಂಡು ಹೋಗುತ್ತಿರುವಾಗ ಹುಡುಗರ ಗುಂಪೊಂದು ಇಬ್ಬರು ವ್ಯಕ್ತಿಗಳ ಬಳಿಗೆ ಬರುತ್ತಾರೆ. ಈ  ವಿಡಿಯೋದಲ್ಲಿ ಓರ್ವ ವೃದ್ಧ ಮತ್ತು ಚಿಕ್ಕವಯಸ್ಸಿನ ಯುವತಿಯನ್ನು ನೋಡಬಹುದು. ಹುಡುಗರನ್ನು ನೋಡಿದ ತಕ್ಷಣ ದಂಪತಿಗಳು ಓಡಿಹೋಗಲು ಪ್ರಾರಂಭಿಸಿದರು, ಆದರೆ ಅವರನ್ನು ಯುವಕರು ತಡೆದು ನಿಲ್ಲಿಸಿದರು. ಇಬ್ಬರನ್ನೂ ಮತ್ತೆ ಮತ್ತೆ ಕೇಳಿದರು ನೀವಿಬ್ಬರು ಯಾರೆಂದು? ಇದರಿಂದ ಕೋಪಗೊಂಡ ವ್ಯಕ್ತಿ ಅವಳು ನನ್ನ ಗರ್ಲ್‌ಫ್ರೆಂಡ್‌ ಮತ್ತು ಬಾಯ್‌ಫ್ರೆಂಡ್‌ಗಳು ಎಂದು ಹೇಳಿದ್ದಾರೆ. 


 



 


ಮುಂದಿನ ಸೆಕೆಂಡ್ ಹತ್ತಿರ ನಿಂತಿದ್ದ ಹುಡುಗಿ ಕೂಡ ನಾವಿಬ್ಬರೂ ಬಾಯ್‌ಫ್ರೆಂಡ್‌ - ಗರ್ಲ್‌ಫ್ರೆಂಡ್‌ ಎಂದು ಹೇಳಿದಳು. ಈ ಆಘಾತಕಾರಿ ಮಾತುಗಳನ್ನು ಕೇಳಿದ ಹುಡುಗನೊಬ್ಬ ಇಬ್ಬರ ವಯಸ್ಸನ್ನು ಕೇಳಿದನು. ಹುಡುಗಿ ತನಗೆ 21 ವರ್ಷ ಎಂದು ಹೇಳಿದರೆ, ವೃದ್ಧ ತನ್ನ ವಯಸ್ಸು 65 ವರ್ಷ ಎಂದು ಹೇಳಿದ್ದಾರೆ. ಇಬ್ಬರ ನಡುವಿನ ವಯಸ್ಸಿನ ಅಂತರವನ್ನು ಕೇಳಿ ಎಲ್ಲರೂ ಆಶ್ಚರ್ಯ ಪಡುತ್ತಾರೆ.


ಇದನ್ನೂ ಓದಿ: Viral Video: IAS ಅಧಿಕಾರಿಯಾದ ಗೆಳತಿ, 5 ಬಾರಿ ಫೇಲ್ ಆದ UPSC ಆಕಾಂಕ್ಷಿ..!


ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ವೈರಲ್ ಆಗಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫನ್‌ಟಾಪ್‌ ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಇದುವರೆಗೆ ಲಕ್ಷಾಂತರ ಲೈಕ್‌ಗಳು ಮತ್ತು ವೀಕ್ಷಣೆಗಳು ಬಂದಿವೆ. ಈ ಬಗ್ಗೆ ನೆಟಿಜನ್‌ಗಳು ಕೂಡ ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋ ಕೂಡ ತಮಾಷೆಯ ಭಾಗವಾಗಿರಬಹುದು ಎಂದು ಸ್ಪಷ್ಟಪಡಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.