ನವದೆಹಲಿ: ವಿಶ್ವದ ಎಲ್ಲಾ ದೇಶಗಳು ಇದುವರೆಗೆ ಹಲವು ವಿಪತ್ತುಗಳನ್ನು ಎದುರಿಸಿವೆ. ಇವುಗಳಲ್ಲಿ ಕೆಲ ವಿಪಟ್ಟುಗಳ ಕುರಿತು ಬಾಬಾ ವೆಂಗಾ ಹಲವು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದವು. ಬಾಬಾ ವೆಂಗಾ ಅವರು 9/11 ದಾಳಿಗಳು, ಐಸಿಸ್ ದಾಳಿ ಮತ್ತು ಕೋವಿಡ್ -19 ರ ಅಸ್ತಿತ್ವದ ಬಗ್ಗೆ ಅವರು ಜೀವಂತವಾಗಿರುವ ಹಲವು ವರ್ಷಗಳ ಹಿಂದೆಯೇ ಊಹಿಸಿದ್ದರು ಎನ್ನಲಾಗುತ್ತದೆ. ಅವರ ಮತ್ತೊಂದು ಭವಿಷ್ಯ ಇದೀಗ ವಿಶ್ವಾದ್ಯಂತ ಜನರನ್ನು ಹೆದರಿಸುತ್ತಿದೆ. ಅವರು 2023 ರ ಅಂತ್ಯದ ವೇಳೆಗೆ ಪರಮಾಣು ದುರಂತದ ಭವಿಷ್ಯ ನುಡಿದಿದ್ದಾರೆ.


COMMERCIAL BREAK
SCROLL TO CONTINUE READING

ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೂ ಕರೆಯಲ್ಪಡುವ ಅಂಧ ಮಹಿಳೆ ಬಾಬಾ ವೆಂಗಾ 1996 ರಲ್ಲಿ ನಿಧನರಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಅವರ ಮರಣ ಹೊಂದುವ ಮೊದಲು ಅವರು ಪ್ರಪಂಚದಲ್ಲಿ ನಡೆಯಬೇಕಿರುವ ವಿವಿಧ ಘಟನೆಗಳನ್ನು ಊಹಿಸಿದ್ದಾರೆ. ಫುಕುಶಿಮಾ ಪರಮಾಣು ಸೋರಿಕೆ ಸೇರಿದಂತೆ ಅವುಗಳಲ್ಲಿ ಬಹುತೇಕ ಘಟನೆಗಳು ನಿಜ ಸಾಬೀತಾಗಿವೆ. 


ಅವನ ಅನುಯಾಯಿಗಳು ಇತ್ತೀಚೆಗೆ ಹೇಳಿಕೊಂಡ ಮತ್ತೊಂದು ಭವಿಷ್ಯವಾಣಿ ಎಂದರೆ ಅದು "ಪರಮಾಣು ದುರಂತದ ವಿಪತ್ತು" ಮುನ್ಸೂಚಿಸುತ್ತದೆ, ಅವರು ಹೇಳಿರುವ ಪ್ರಕಾರ "ವಿಷಕಾರಿ ಮೋಡಗಳು ಏಷ್ಯಾವನ್ನು ಆವರಿಷಲಿವೆ" ಇದಲ್ಲದೆ, 2023 ರಲ್ಲಿ ಪ್ರಬಲ ಸೌರ ಚಂಡಮಾರುತವು ಹವಾಮಾನವನ್ನು ತತ್ತರಿಸಲಿದೆ ಮತ್ತು 2023 ರಲ್ಲಿ ವಿಶ್ವದ ಸೂಪರ್ ಪವರ್ ಒಂದು ಜೈವಿಕ ಅಸ್ತ್ರವನ್ನು ಬಳಸಲಿದೆ  ಎಂದು ಬಾಬಾ ವೆಂಗಾ ಭವಿಷ್ಯ ನುಡಿದಿದ್ದಾರೆ, ಇದು ನೂರಾರು ಸಾವಿರ ಸಾವುಗಳಿಗೆ ಕಾರಣವಾಗಬಹುದು ಎನ್ನಲಾಗಿದೆ.


ಕೆಲವು ಜನರು ಸೌರ ಸುನಾಮಿ ಸನ್ನಿಹಿತವಾಗುತ್ತಿದೆ ಎಂದು ಅವರ ಮಾತುಗಳನ್ನು ಅರ್ಥೈಸಿದ್ದು, ಇದು ಪ್ರಮುಖ ತಂತ್ರಜ್ಞಾನ ವೈಫಲ್ಯಕ್ಕೆ ಕಾರಣವಾಗಬಹುದು ಎಂದಿದ್ದಾರೆ. ಅದರಲ್ಲಿಯೂ ವಿಶೇಷವಾಗಿ, ಈ ರೀತಿಯ ಸಣ್ಣ ಬಿರುಗಾಳಿಗಳು ಯಾವುದೇ ಸಮಸ್ಯೆಗಳನ್ನು ಉಂಟುಮಾಡದೆ ಆಗಾಗ್ಗೆ ಸಂಭವಿಸುತ್ತವೆ. ಇದಲ್ಲದೇ, ಬಾಬಾ ವೆಂಗಾ ಅವರು ಬ್ರಿಟನ್ ರಾಣಿ ಡಯಾನಾ ಸಾವು, ಭಾರತದ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ, ಸುನಾಮಿ, ಕೊರೊನಾವೈರಸ್, ರಷ್ಯಾ-ಉಕ್ರೇನ್ ಯುದ್ಧದಂತಹ ವಿವಿಧ ಘಟನೆಗಳನ್ನು ಜೀವಂತವಾಗಿರುವಾಗಲೇ ತಮ್ಮ ತಮ್ಮ ಅನುಯಾಯಿಗಳ ಮುಂದೆ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. 


2023 ರಲ್ಲಿ ನೈಸರ್ಗಿಕ ಪರಿಕಲ್ಪನೆಯನ್ನು ನಿಷೇಧಿಸಲಾಗುವುದು ಮತ್ತು ಮಕ್ಕಳು ಪ್ರಯೋಗಾಲಯಗಳಲ್ಲಿ ಬೆಳೆಯಲಿವೆ ಎಂದು ಬಾಬಾ ವೆಂಗಾ ಭವಿಷ್ಯ ನುಡಿದಿದ್ದಾರೆ. ಯಾರು ಜನಿಸಬೇಕೆಂದು ವಿಶ್ವ ನಾಯಕರು ಆಯ್ಕೆ ಮಾಡುತ್ತಾರೆ ಮತ್ತು ಪೋಷಕರು ತಮ್ಮ ಸಂತಾನದ ಗುಣಲಕ್ಷಣಗಳು ಮತ್ತು ನೋಟವನ್ನು ಕಸ್ಟಮೈಸ್ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ-ಉತ್ತರಾ ಫಾಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಅಪಾರ ಧನಕೀರ್ತಿ-ಲಾಭ ಪ್ರಾಪ್ತಿ!


12 ನೇ ವಯಸ್ಸಿನಲ್ಲಿ ರೊಮೇನಿಯಾದಲ್ಲಿ ಧೂಳಿನ ಚಂಡಮಾರುತದ ಸಮಯದಲ್ಲಿ ಬಾಬಾ ವೆಂಗಾ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಈ ಅವಧಿಯಲ್ಲಿ ಅವರಿಗೆ ತಮ್ಮ ಶಕ್ತಿಯ ಅರಿವಾಯಿತು ಎಂದು ಅವರ ಅನುಯಾಯಿಗಳು ಹೇಳುತ್ತಾರೆ.


ಇದನ್ನೂ ಓದಿ-ವರ್ಷದ ಬಳಿಕ ತುಲಾ ರಾಶಿಯಲ್ಲಿ ಸೂರ್ಯ-ಮಂಗಳರ ಮೈತ್ರಿ, ಈ ರಾಶಿಗಳ ಜನರಿಗೆ ಧನ ಕುಬೇರ-ಲಕ್ಷ್ಮಿ ಕೃಪಾಯೋಗ!


(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಲು ಕೋರಲಾಗುತ್ತದೆ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ