ಗ್ರಹಗಳ ರಾಜ ಎಂದೇ ಹೆಸರುವಾಸಿಯಾಗಿರುವ ಸೂರ್ಯ ದೇವ ಒಂದು ನಿಶ್ಚಿತ ಅವಧಿಯ ಬಳಿಕ ತನ್ನ ರಾಶಿ ಪರಿವರ್ತಿಸುವಂತೆ, ತನ್ನ ನಕ್ಷತ್ರವನ್ನು ಕೂಡ ಪರಿವರ್ತಿಸುತ್ತಾನೆ. ಹೀಗಿರುವಾಗ ಇದೀಗ ಆತ ತನ್ನ ಸ್ವನಕ್ಷತ್ರವಾಗಿರುವ ಉತ್ತರಾ ಫಾಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸುತ್ತಿದ್ದಾನೆ. ಸೂರ್ಯನ ಈ ಸ್ವನಕ್ಷತ್ರ ಗೋಚರ ಯಾವ ರಾಶಿಗಳ ಜನರಿಗೆ ಅತ್ಯಂತ ಮಂಗಳಕರವಾಗಿದೆ ತಿಳಿದುಕೊಳ್ಳೋಣ ಬನ್ನಿ,
ಸಾಮಾನ್ಯವಾಗಿ ಗ್ರಹಗಳ ರಾಜ ಸೂರ್ಯನನ್ನು ಆತ್ಮಕಾರಕ ಎಂದು ಜೋತಿಷ್ಯ ಶಾಷ್ಟ್ರದಲ್ಲಿ ಹೇಳಲಾಗಿದೆ. ಆತ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿ ಹಾಗೂ ನಕ್ಷತ್ರ ಎರಡನ್ನೂ ಪರಿವರ್ತಿಸುತ್ತಾನೆ. ಆತನ ಈ ಸ್ಥಿತಿಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸುತ್ತದೆ. ಹೀಗಿರುವಾಗ ಸೂರ್ಯ ದೇವ ಸೆಪ್ಟೆಂಬರ್ 14 2023 ರಂದು ಬೆಳಗ್ಗೆ 3 ಗಂಟೆ 38 ನಿಮಿಷಕ್ಕೆ ತನ್ನ ಸ್ವನಕ್ಷತ್ರವಾಗಿರುವ ಉತ್ತರಾ ಫಾಲ್ಗುಣಿ ನಕ್ಷತ್ರದಲ್ಲಿ ಗೋಚರಿಸಲಿದ್ದಾನೆ. ಅಂದರೆ, ಈ ನಕ್ಷತ್ರಕ್ಕೆ ಸೂರ್ಯನೆ ಅಧಿಪತಿ. ಉತ್ತರಾ ಫಾಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಗೋಚಾರದಿಂದ ಯಾವ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ, ಉತ್ತರಾ ಫಾಲ್ಗುಣಿ ನಕ್ಷತ್ರ ಒಟ್ಟು 27 ನಕ್ಷತ್ರಗಳ ಪೈಕಿ 12ನೇ ನಕ್ಷತ್ರ.
ಇದನ್ನೂ ಓದಿ-ವರ್ಷದ ಬಳಿಕ ತುಲಾ ರಾಶಿಯಲ್ಲಿ ಸೂರ್ಯ-ಮಂಗಳರ ಮೈತ್ರಿ, ಈ ರಾಶಿಗಳ ಜನರಿಗೆ ಧನ ಕುಬೇರ-ಲಕ್ಷ್ಮಿ ಕೃಪಾಯೋಗ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸೂರ್ಯನ ಸ್ವನಕ್ಷತ್ರ ಗೋಚರದಿಂದ ಹಲವು ರಾಶಿಗಳ ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನೊಂದೆಡೆ ಅವರ ಜೀವನದಲ್ಲಿ ಅಹಂಕಾರ ಕೂಡ ಸ್ಥಾನ ಪಡೆದುಕೊಳ್ಳುತ್ತದೆ. ಆದರೆ, ಸ್ವಲ್ಪ ಯೋಚನೆಯಿಂದ ಮುಂದಕ್ಕೆ ಸಾಗಿದರೆ, ತನ್ನ ಪ್ರಭಾವಶಾಲಿ ವ್ಯಕ್ತಿತ್ವದ ಕಾರಣ ಪ್ರತಿಯೊಬ್ಬರ ಫೇವರಿಟ್ ಎನಿಸಿಕೊಳ್ಳುತ್ತಾರೆ.
ಮಿಥುನ ರಾಶಿ: ಸೂರ್ಯನ ಉತ್ತರಾ ಫಾಲ್ಗುಣಿ ನಕ್ಷತ್ರ ಪ್ರವೇಶ ನಿಮ್ಮ ಆತ್ಮವಿಶ್ವಾಸವನ್ನು ಅಪಾರ ಹೆಚ್ಚಿಸಲಿದೆ. ನಿಂತುಹೋದ ಕೆಲಸ ಕಾರ್ಯಗಳಿಗೆ ಪುನಃ ವೇಗ ಸಿಗಲಿದೆ. ಹಲವು ಡೀಲ್ ಗಳನ್ನು ಅಂತಿಮಗೊಳಿಸುವಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾಲ ಉತ್ತಮವಾಗಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಆತ್ಮವಿಶ್ವಾಸ ಹಾಗೂ ನೇತೃತ್ವದ ಗುಣಗಳಿಂದ ಪ್ರಭಾವಿತರಾಗುವರು. ಇದರಿಂದ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಕಠಿಣ ಪರಿಶ್ರಮದ ಲಾಭ ನಿಮಗೆ ಸಿಗಲಿದೆ. ಹೂಡಿಕೆ ಕೂಡ ನಿಮಗೆ ಸಾಕಷ್ಟು ಲಾಭ ತಂದು ಕೊಡಲಿದೆ. ಉತ್ತಮ ಆದಾಯ ನಿಮ್ಮದಾಗಲಿದೆ. ಅಪ್ರತ್ಯಕ್ಷವಾಗಿ ನಿಮಗೆ ಧನಪ್ರಾಪ್ತಿಯಾಗಲಿದೆ ಹಾಗೂ ಯಾವುದಾದರೊಂದು ರೀತಿಯಲ್ಲಿ ಆರ್ಥಿಕ ಲಾಭ ನಿಮ್ಮದಾಗಲಿದೆ. ಇದಲ್ಲದೆ ಯಾತ್ರೆಯಿಂದ ಕೂಡ ನಿಮಗೆ ಲಾಭವಾಗಲಿದೆ.
ಸಿಂಹ ರಾಶಿ: ನಿಮ್ಮ ಜಾತಕದ ಮೊದಲ ಭಾವಕ್ಕೆ ಸೂರ್ಯ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಸೂರ್ಯನ ಈ ಸ್ವನಕ್ಷತ್ರ ಗೋಚರ ನಿಮಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಜನರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಈ ಜಾತಕದವರಿಗೆ ನೇತೃತ್ವ ಕೌಶಲ್ಯ, ಆಕರ್ಷಕ ವ್ಯಕ್ತಿತ್ವ ಪ್ರಾಪ್ತಿಯಾಗಲಿದೆ. ಹೀಗಿರುವಾಗ ಸಾಮಾಜಿಕ ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಶಾಂತಿಯಿಂದ ನೀವು ಕೈಗೊಂಡ ನಿರ್ಧಾರಗಳು ಸರಿ ಸಾಬೀತಾಗಳಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರತಿಯೊಬ್ಬರು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಪೂರ್ಣಗೊಳ್ಳಲಿದೆ.
ಧನು ರಾಶಿ- ನಿಮ್ಮ ಗೋಚರ ಜಾತಕದ ನವಮ ಭಾವಕ್ಕೆ ಸೂರ್ಯ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಸೂರ್ಯನ ಈ ಸ್ವನಕ್ಷತ್ರ ಗೋಚರ ನಿಮ್ಮ ಧನ-ಧಾನ್ಯವನ್ನು ಹೆಚ್ಚಿಸಲಿದೆ. ಇತರ ಮೇಲೆ ದಯೆ ತೋರುವಿರಿ ಮತ್ತು ಸಂವೇದನೆಯನ್ನು ವ್ಯಕ್ತಪಡಿಸುವಿರಿ. ಹೀಗಿರುವಾಗ ಎಲ್ಲರ ಪ್ರೀತಿಗೆ ನೀವು ಪಾತ್ರರಾಗುವಿರಿ. ಪ್ರತಿಯೊಬ್ಬರು ನಿಮ್ಮ ಕುರಿತು ಪ್ರಶಂಸೆಯ ಮಾತುಗಳನ್ನಾಡಲಿದ್ದಾರೆ. ವೃತ್ತಿಜೀವನದಲ್ಲಿಯೂ ಕೂಡ ನಿಮಗೆ ಆಕಸ್ಮಿಕ ಲಾಭ ಉಂಟಾಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಪ್ರತಿಷ್ಠೆ ಹಲವು ಪಟ್ಟು ಹೆಚ್ಚಾಗಲಿದೆ. ಅಧಿಕಾರ ಸ್ಥಾನದಲ್ಲಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)