ಭೀಕರ ದೃಶ್ಯ: ವಿಮಾನದ ಟೈರ್ ಮೇಲೆ ಹತ್ತಿದ್ದ ಅಫ್ಘಾನ್ ಪ್ರಜೆಗಳು ಕೆಳಗೆಬಿದ್ದು ಸಾವು..!
ಅಘ್ಘಾನಿಸ್ತಾನ ತೊರೆದು ಬೇರೆ ದೇಶಗಳಿಗೆ ತೆರಲು ಅಲ್ಲಿ ನ ಪ್ರಜೆಗಳು ಸರ್ವಪ್ರಯತ್ನ ನಡೆಸುತ್ತಿದ್ದಾರೆ.
ಕಾಬೂಲ್: ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಘ್ಘಾನಿಸ್ತಾನ(Afghanistan)ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದೆ. ತಾಲಿಬಾನ್ ಭಯೋತ್ಪಾದಕರ ಅಟ್ಟಹಾಸಕ್ಕೆ ಹೆದರಿಕೊಂಡಿರುವ ಅಫ್ಘಾನ್ ನಾಗರಿಕರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾವಿರಾರು ಜನರು ದಾಂಗುಡಿ ಇಟ್ಟಿದ್ದಾರೆ. ಹೇಗಾದರೂ ಮಾಡಿ ಜೀವ ಊಳಿಸಿಕೊಂಡರೆ ಸಾಕಪ್ಪ ಎಂದು ದಂಡು ದಂಡಾಗಿ ಜನರು ವಿಮಾನ ನಿಲ್ದಾಣದತ್ತ ಮುಖಮಾಡಿದ್ದಾರೆ.
ಅಘ್ಘಾನಿಸ್ತಾನ(Afghanistan) ತೊರೆದು ಬೇರೆ ದೇಶಗಳಿಗೆ ತೆರಲು ಅಲ್ಲಿ ನ ಪ್ರಜೆಗಳು ಸರ್ವಪ್ರಯತ್ನ ನಡೆಸುತ್ತಿದ್ದಾರೆ. ಯಾವಾಗ ತಾಲಿಬಾನ್(Taliban)ಕಾಬೂಲ್ ಅನ್ನು ವಶಪಡಿಸಿಕೊಂಡಿತೋ ಅಫ್ಘಾನ್ ಜನರು ಹತಾಶರಾಗಿದ್ದಾರೆ. ಇಡೀ ದೇಶವೇ ತಾಲಿಬಾನ್ ನಿಯಂತ್ರಣದಲ್ಲಿರುವುದರಿಂದ ಇನ್ನೂ ನಮಗೆ ಉಳಿಗಾಲವಿಲ್ಲವೆಂದು ದೇಶ ತೊರೆಯಲು ಜನರು ನಿರ್ಧರಿಸಿದ್ದಾರೆ. ಹೀಗಾಗಿ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೇರಲು ಹರಸಾಹಸಪಡುತ್ತಿದ್ದಾರೆ.
Afghanistan: ತಾಲಿಬಾನ್ ಸರ್ಕಾರ ರಚನೆ; ಕಾಬೂಲ್‌ನಿಂದ ವಾಣಿಜ್ಯ ವಿಮಾನ ಹಾರಾಟ ನಿಷೇಧ
ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Hamid Karzai International Airport)ದಲ್ಲಿ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಸೋಮವಾರದಿಂದ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಟೇಕಾಫ್ ಆಗುತ್ತಿರುವ ಇತರ ದೇಶದ ವಿಮಾನಗಳನ್ನು ಹತ್ತಲು ಜನರು ಮುಗಿಬಿದ್ದಿದ್ದಾರೆ. ಇಂದು ಅಮೆರಿಕಾದ ವಿಮಾನ ಹತ್ತಲು ಪ್ರಯತ್ನಿಸಿ ವಿಫಲವಾದ ಕೆಲ ಅಫ್ಘಾನ್ ನಾಗರಿಕರು ವಿಮಾನದ ಟೈರ್ ಮೇಲೆ ಹತ್ತಿ ಕುಳಿತುಕೊಂಡಿದ್ದಾರೆ. ವಿಮಾನ ಆಗಸಕ್ಕೆ ಚಿಮ್ಮಿದ ಬಳಿಕ ಮಧ್ಯಭಾಗದಿಂದ ಇಬ್ಬರು ಕೆಳಗೆ ಬೀಳುತ್ತಿರುವ ಭೀಕರ ದೃಶ್ಯ ಸೆರೆಯಾಗಿದೆ.
ತಾಲಿಬಾನ್ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷ..?
ಕಾಬೂಲ್(Kabul)ನಿಂದ ತನ್ನ ಸಿಬ್ಬಂದಿ ಮತ್ತು ನಾಗರಿಕರನ್ನು ಸ್ಥಳಾಂತರಿಸುತ್ತಿದ್ದ ಅಮೆರಿಕದ ವಾಯುಪಡೆಯ ವಿಮಾನದಿಂದ ಇಬ್ಬರು ಅಫ್ಘಾನ್ ನಾಗರಿಕರು ಕೆಳಗೆಬಿದ್ದು ಸಾವನ್ನಪ್ಪಿದರು ಅಂತಾ ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದು ವಿಡಿಯೋದಲ್ಲಿ ಟೇಕಾಫ್ ಆಗುತ್ತಿರುವ ಅಮೆರಿಕದ ಮಿಲಿಟರಿ ವಿಮಾನವನ್ನು ಏರಲು ಅನೇಕ ಜನರು ಪ್ರಯತ್ನಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವಿಡಿಯೋಗಳು ನೋಡಲು ಭಯಾನಕವಾಗಿದ್ದು, ಅಫ್ಘಾನ್ ಪ್ರಜೆಗಳಿಗೆ ಬಂದೊದಗಿರುವ ದುಸ್ಥಿತಿಯನ್ನು ತಿಳಿಸುವಂತಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ