ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಪಸಂಖ್ಯಾತ ಹಿಂದೂಗಳು ತಮ್ಮ ರಕ್ಷಣೆಗಾಗಿ ಪರದಾಡುವಂತಾಗಿದೆ. ಧರ್ಮನಿಂದನೆ ಮಾಡಲಾಗಿದೆ ಎಂಬ ಪೋಸ್ಟ್​ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಬಾಂಗ್ಲಾದಲ್ಲಿ ಕಳೆದ ವಾರ ದುರ್ಗಾ ಪೂಜೆ(Durga Puja Violence)ಯ ವೇಳೆ ದೇವಾಲಯದ ಮೇಲೆ ದಾಳಿ ನಡೆದಿತ್ತು. ಈ ಹಿಂಸಾಚಾರದ ವಿರುದ್ಧ ಅಲ್ಪಸಂಖ್ಯಾತ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆಗಳ ಮಧ್ಯೆಯೇ 66 ಹಿಂದೂಗಳ ಮನೆಗಳನ್ನು ದ್ವಂಸಗೊಳಿಸಿದ್ದು,  20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ(Hindu Homes Torched) ವರದಿಯಾಗಿದೆ.  


COMMERCIAL BREAK
SCROLL TO CONTINUE READING

ಬಾಂಗ್ಲಾ ರಾಜಧಾನಿ ಢಾಕಾ(Dhaka)ದಿಂದ ಸುಮಾರು 255 ಕಿಮೀ ದೂರದಲ್ಲಿರುವ ಹಳ್ಳಿಯಲ್ಲಿ ಭಾನುವಾರ ತಡರಾತ್ರಿ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಫೇಸ್‌ಬುಕ್ ಪೋಸ್ಟ್‌ ನಲ್ಲಿ ಹಳ್ಳಿಯ ಹಿಂದೂ ಯುವಕ ‘ಧರ್ಮವನ್ನು ಅವಹೇಳನ ಮಾಡಿದ್ದಾರೆ’ ಎಂಬ ವದಂತಿಯಿಂದ ಉದ್ವಿಗ್ನತೆ ಹೆಚ್ಚಾದ ಕಾರಣ ಪೊಲೀಸರು ಮೀನುಗಾರರ ಕಾಲೋನಿಗೆ ಧಾವಿಸಿದರು ಎಂದು ಪೊಲೀಸ್ ಸುಪರಿಟೆಂಡೆಟ್ ಮೊಹಮ್ಮದ್ ಖಮರುಜ್ಜಮನ್ ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: Mystery Island: ಎಲ್ಲಿದೆ ಈ ಭಯಾನಕ ನಡುಗಡ್ಡೆ, Google Mapನಲ್ಲಿ ನೋಡಿದ ಜನರು ಭಯಬೀತರಾಗಿ ಹೇಳಿದ್ದೇನು ಗೊತ್ತಾ?


ಆ ವ್ಯಕ್ತಿಯ ಮನೆಯ ಸುತ್ತಲೂ ಪೊಲೀಸರು ಕಾವಲು ಕಾಯುತ್ತಿದ್ದಂತೆ ದಾಳಿಕೋರರು ಹತ್ತಿರದ ಇತರ ಮನೆಗಳಿಗೆ ಬೆಂಕಿ ಹಚ್ಚಿದರು(Bangladesh violence) ಎಂದು ವರದಿ ಹೇಳಿದೆ. ಅಗ್ನಿಶಾಮಕ ಸೇವಾ ನಿಯಂತ್ರಣ ಕೊಠಡಿ ಸ್ಥಳದಿಂದ ಬಂದ ವರದಿಯ ಪ್ರಕಾರ, 29 ವಸತಿ ಗೃಹಗಳು, 2 ಅಡುಗೆಕೋಣೆಗಳು, 2 ಕೊಟ್ಟಿಗೆಗಳು ಮತ್ತು 15 ವಿವಿಧ ಜನರಿಗೆ ಸೇರಿದ 20 ಒಣಹುಲ್ಲಿನ ಬಣವೆಗಳನ್ನು ಸುಟ್ಟುಹಾಕಲಾಗಿದೆ ಎಂದು ತಿಳಿದುಬಂದಿದೆ. ಅಲ್ಲಿದ್ದ ಜನರ ಗುಂಪು ಈ ಬೆಂಕಿ ಹಚ್ಚಿದೆ ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ರಾತ್ರಿ 8.45ಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ಕರೆ ಬಂದಿತ್ತು. ಬೆಳಗ್ಗೆ 4.10ರ ಹೊತ್ತಿಗೆ ಬೆಂಕಿಯನ್ನು ನಂದಿಸಲಾಯಿತು ಎಂದು ವರದಿ ಹೇಳಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.  


ಹೆಚ್ಚುತ್ತಿರುವ ಕೋಮು ಉದ್ವಿಗ್ನತೆ, 4 ಹಿಂದೂಗಳು ಸಾವು


ಬಾಂಗ್ಲಾದೇಶದ ಚಿತ್ತಗಾಂಗ್ ವಿಭಾಗದ ಕುಮಿಲ್ಲಾದಲ್ಲಿನ ದುರ್ಗಾ ಪೂಜಾ(Durga Puja Violence) ಸ್ಥಳದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಹೆಚ್ಚುತ್ತಿರುವ ಕೋಮು ಉದ್ವೇಗದ ನಡುವೆ ಬೆಂಕಿ ಹಚ್ಚಲಾಗಿದೆ. ಇದು ಹಿಂದೂ ದೇವಾಲಯಗಳ ಮೇಲೆ ದಾಳಿ ಹಾಗೂ ವಿಧ್ವಂಸಕರು ಮತ್ತು ಪೋಲಿಸರ ನಡುವೆ ಘರ್ಷಣೆಗೆ ಕಾರಣವಾಗಿದೆ.  ಮೌಲ್ವಿಬಜಾರ್, ಗಾಜಿಪುರ, ಚಪೈನವಾಬ್ಗಂಜ್, ಫೆನಿ ಮತ್ತು ಇತರ ಜಿಲ್ಲೆಗಳಲ್ಲಿ ಗಲಭೆಗಳು ನಡೆದಿವೆ. ದಾಳಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ದ್ವೇಷದ ಹರಡುವಿಕೆಗೆ ಸಂಬಂಧಿಸಿದಂತೆ ಹತ್ತಾರು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಚಾಂದ್‌ಪುರ್ ಮತ್ತು ನೋಖಾಲಿಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 4 ಹಿಂದೂ ಭಕ್ತರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ.


ಇದನ್ನೂ ಓದಿ: Viral News: ಮನೆಯೊಳಗೆ ಇವುಗಳನ್ನು ನೋಡಿ ಹೌಹಾರಿದ ಮಹಿಳೆ, ಏನಿವು ನೋಡಿ


ಈ ದಾಳಿಗಳಲ್ಲಿ ಹಿಂದೂ ಸಮುದಾಯದ 559 ಮನೆಗಳು ಮತ್ತು 442 ಅಂಗಡಿಗಳು ಮತ್ತು ವ್ಯಾಪಾರಸಂಸ್ಥೆಗಳ ಮೇಲೆ ದಾಂಧಲೆ ನಡೆದಿದೆ. ಇದೇ ಅವಧಿಯಲ್ಲಿ ಕನಿಷ್ಠ 1,678 ವಿಧ್ವಂಸಕ ಕೃತ್ಯ ಮತ್ತು ಹಿಂದೂ ದೇವಾಲಯಗಳು, ವಿಗ್ರಹಗಳು ಮತ್ತು ಪೂಜಾ ಸ್ಥಳಗಳ ಮೇಲೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ. ಈ ಘಟನೆಗಳಲ್ಲಿ ಹಿಂದೂ ಸಮುದಾಯದ 11 ನಾಗರಿಕರು ಸಾವನ್ನಪ್ಪಿದ್ದರೆ, ಇನ್ನೂ 862 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹಿಂಸಾಚಾರದ ಹಿಂದೆ ಇರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಿಂದೂ ದೇವಾಲಯಗಳು ಮತ್ತು ದುರ್ಗಾ ಪೂಜಾ ವೇದಿಕೆಗಳ ಮೇಲೆ ದಾಳಿ ನಡೆಸಿರುವ ಯಾರೊಬ್ಬರನ್ನು ರಕ್ಷಿಸುವುದಿಲ್ಲ, ಆರೋಪಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ