Viral News: ಮನೆಯೊಳಗೆ ಇವುಗಳನ್ನು ನೋಡಿ ಹೌಹಾರಿದ ಮಹಿಳೆ, ಏನಿವು ನೋಡಿ

ಮಹಿಳೆಯ ಮನೆಯಲ್ಲಿ ಪತ್ತೆಯಾಗಿರುವ ಹಾವುಗಳನ್ನು ಪೆಸಿಫಿಕ್ ರಾಟ್ಲರ್ ಗಳು ಎಂದು ಗುರುತಿಸಲಾಗಿದೆ. ಇವುಗಳನ್ನು ಉತ್ತರ ಕ್ಯಾಲಿಫೋರ್ನಿಯಾದ ಅತ್ಯಂತ ಮಾರಕ ಹಾವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

Written by - Puttaraj K Alur | Last Updated : Oct 18, 2021, 12:52 PM IST
  • ಉತ್ತರ ಕ್ಯಾಲಿಫೋರ್ನಿಯಾದ ಮನೆಯಲ್ಲಿ 92 ಹಾವುಗಳು ಪತ್ತೆ
  • ಮನೆಯಲ್ಲಿ ಹಾವುಗಳ ಗುಂಪು ಕಂಡು ಹೌಹಾರಿದ ಮಹಿಳೆ
  • ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಉರಗ ರಕ್ಷಣಾ ಸಂಸ್ಥೆ
Viral News: ಮನೆಯೊಳಗೆ ಇವುಗಳನ್ನು ನೋಡಿ ಹೌಹಾರಿದ ಮಹಿಳೆ, ಏನಿವು ನೋಡಿ  title=
ಪೆಸಿಫಿಕ್ ರಾಟ್ಲರ್ ಹಾವುಗಳ ರಕ್ಷಣೆ

ನವದೆಹಲಿ: ಉತ್ತರ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬಳು ತನ್ನ ಮನೆಯೊಳಗೆ ಹಾವುಗಳ ಗುಂಪನ್ನು ಕಂಡು ಆಘಾತಕ್ಕೊಳಗಾಗಿದ್ದಾಳೆ. ಸಾಂಟಾ ರೋಸಾ(
Santa Rosa) ನಿವಾಸದೊಳಗೆ ಬರೋಬ್ಬರಿ 92 ಹಾವುಗಳು ಪತ್ತೆಯಾಗಿವೆ. ಭಾರೀ ಸಂಖ್ಯೆಯಲ್ಲಿ ಹಾವುಗಳಿರುವುದನ್ನು ಕಂಡು ಹೌಹಾರಿದ ಮಹಿಳೆ ಸೋನೊಮಾ ಕೌಂಟಿ ರೆಪ್ಟೈಲ್ ರೆಸ್ಕ್ಯೂ(Sonoma County Reptile Rescue)ಎಂಬ ಹಾವು ರಕ್ಷಿಸುವ ಸಂಸ್ಥೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.  

ಮಹಿಳೆಯ ಮನೆಯಲ್ಲಿ ಪತ್ತೆಯಾಗಿರುವ ಹಾವು(Rattle Snakes)ಗಳನ್ನು ಸೋನೋಮಾ ಕೌಂಟಿ ರೆಪ್ಟೈಲ್ ರೆಸ್ಕ್ಯೂನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಹಾವುಗಳ ಗುಂಪು ಕಂಡ ನೆಟಿಜನ್ ಗಳು ಅಚ್ಚರಿಯ ಜೊತೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.   

ಇದನ್ನೂ ಓದಿ: World's Most Haunted Forest: ಇದುವೇ ವಿಶ್ವದ ಅತ್ಯಂತ ನಿಗೂಢ ಕಾಡು, ಒಳಗೆ ಹೋದವರು ಯಾರು ವಾಪಸ್ ಬಂದಿಲ್ವಂತೆ!

‘ಮಹಿಳೆಯೊಬ್ಬರು ನಮಗೆ ಕರೆ ಮಾಡಿ ತಮ್ಮ ಮನೆಯೊಳಗೆ ಹಾವು(Snakes)ಗಳಿವೆ ಬೇಗ ಬನ್ನಿ ಎಂದು ಹೇಳಿದರು. 3 ಗಂಟೆ 45 ನಿಮಿಷಗಳ ಯಶಸ್ವಿ ಕಾರ್ಯಾಚರಣೆಯ ನಂತರ ನಾವು ಈ ಹಾವುಗಳನ್ನು ರಕ್ಷಿಸಿದ್ದೇವೆ’ ಎಂದು ಫೋಟೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ಹಾವುಗಳ ಪೈಕಿ 59 ಮರಿಗಳು ಮತ್ತು 22 ದೊಡ್ಡ ಹಾವುಗಳಿರುವುದು ಗೊತ್ತಾಗಿದೆ. ಇಷ್ಟು ಸಂಖ್ಯೆಯ ಹಾವುಗಳು ಮನೆಯಲ್ಲಿ ಹೇಗೆ ಇದ್ದವು ಎಂಬುದು ನಮಗೂ ಆಶ್ಚರ್ಯವಾಗಿದೆ ಅಂತಾ ಹಾವು ರಕ್ಷಿಸಿದವರು ತಿಳಿಸಿದ್ದಾರೆ.   

ಸೊನೊಮಾ ಕೌಂಟಿ ರೆಪ್ಟೈಲ್ ರೆಸ್ಕ್ಯೂ ಸಂಸ್ಥೆಯ ನಿರ್ದೇಶಕ ವುಲ್ಫ್ ಪ್ರಕಾರ, ‘ಆತಂಕದಿಂದಲೇ ಮಹಿಳೆಯೊಬ್ಬರು ನಮಗೆ ಕರೆ ಮಾಡಿದ್ದರು. ನಮ್ಮ ಮನೆಯಲ್ಲಿ ಹಾವು ಇವೆ ಬೇಗ ಬೇಗ ಬನ್ನಿ.. ನನಗೆ ತುಂಬಾ ಭಯವಾಗಿದೆ ಅಂತಾ ಹೇಳಿದರು. ಕೂಡಲೇ ನಾವು ಆ ಮನೆಗೆ ಭೇಟಿ ನೀಡಿದೆವು. ಒಂದಾದ ಮೇಲೊಂದರಂತೆ ಹಾವುಗಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದೆವು. ಸುರಕ್ಷತಾ ಕೈಗವುಸುಗಳನ್ನು ಧರಿಸಿ, ಉದ್ದವಾದ ಕೋಲು ಹಿಡಿದು ಎರಡು ಬಕೆಟ್ ಗಳಲ್ಲಿ ಹಾವುಗಳನ್ನು ರಕ್ಷಿಸಿ ಸಂಗ್ರಹಿಸಲಾಯಿತು’ ಎಂದು ಹೇಳಿದ್ದಾರೆ.

 Snake-2.jpg

ಇದನ್ನೂ ಓದಿ: ನವೆಂಬರ್ 8 ರಿಂದ ಪೂರ್ಣ ಲಸಿಕೆ ಪಡೆದ ವಿದೇಶಿ ಪ್ರವಾಸಿಗರಿಗೆ ಅಮೇರಿಕಾ ಅನುಮತಿ

ಮಹಿಳೆಯ ಮನೆಯಲ್ಲಿ ಪತ್ತೆಯಾಗಿರುವ ಹಾವುಗಳನ್ನು ಪೆಸಿಫಿಕ್ ರಾಟ್ಲರ್(Pacific Rattle Snakes)ಗಳು ಎಂದು ಗುರುತಿಸಲಾಗಿದೆ. ಇವುಗಳನ್ನು ಉತ್ತರ ಕ್ಯಾಲಿಫೋರ್ನಿಯಾದ ಅತ್ಯಂತ ಮಾರಕ ಹಾವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಮೊಟ್ಟೆ ಇಡುವ ಈ ಹಾವುಗಳು ಬೆಚ್ಚಗಿನ ಸ್ಥಳಗಳಲ್ಲಿ ಅಡಗಿಕೊಳ್ಳಲು ಸುರಕ್ಷಿತ ಪ್ರದೇಶಗಳನ್ನು ಹುಡುಕುತ್ತವೆ. ವರ್ಷದಿಂದ ವರ್ಷಕ್ಕೆ ಅದೇ ಸ್ಥಳಕ್ಕೆ ಅವು ಮರಳಿ ಬರುತ್ತವೆ. ಹೀಗಾಗಿ ಮಹಿಳೆಯ ಮನೆಯನ್ನು ತಮ್ಮ ಅವಾಸಸ್ಥಾನವನ್ನಾಗಿ ಮಾಡಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News