ಅಮೆರಿಕದ ಅರ್ಥಶಾಸ್ತ್ರಜ್ಞ ಮಿಲ್ಗ್ರೋಮ್ ಮತ್ತು ವಿಲ್ಸನ್ ಅವರಿಗೆ ಈ ಸಾಲಿನ ನೊಬೆಲ್ ಪ್ರಶಸ್ತಿ
ಅಮೆರಿಕದ ಪಾಲ್ ಆರ್. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಅವರಿಗೆ ಈ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. `ಹರಾಜು ಸಿದ್ಧಾಂತವನ್ನು ಸುಧಾರಿಸುವುದು ಮತ್ತು ಹೊಸ ಹರಾಜು ರೂಪದ ಆವಿಷ್ಕಾರ` ಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಸ್ಟಾಕ್ಹೋಮ್: ಅಮೆರಿಕದ ಅರ್ಥಶಾಸ್ತ್ರಜ್ಞರಾದ ಪಾಲ್ ಆರ್. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಅವರಿಗೆ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. 'ಹರಾಜು ಸಿದ್ಧಾಂತ ಮತ್ತು ಹೊಸ ಹರಾಜು ರೂಪದ ಆವಿಷ್ಕಾರ'ಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪಾಲ್ ಆರ್. ಮಿಲ್ಗ್ರೋಮ್ ಹರಾಜಿಗೆ ಸಂಬಂಧಪಟ್ಟ ಸಾಮಾನ್ಯ ಸಿದ್ಧಾಂತವನ್ನು ರೂಪಿಸಿದ್ದಾರೆ. ರಾಬರ್ಟ್ ಬಿ. ವಿಲ್ಸನ್ ತರ್ಕಬದ್ಧ ಬಿಡ್ದಾರರು ಹೇಗೆ ಬಿಡ್ ಮಾಡುವಾಗ ಚಾಕಚಕ್ಯತೆ ತೋರುತ್ತಾರೆ, ಅಂದಾಜಿಗಿಂತ ಅವರು ಕಡಿಮೆ ಏಕೆ ಬಿಡ್ ಮಾಡುತ್ತಾರೆ ಎಂಬುದರ ಬಗ್ಗೆ ತೋರಿಸಿಕೊಟ್ಟಿದ್ದಾರೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಸೆಕ್ರೆಟರಿ ಜನರಲ್ ಗೋರನ್ ಹ್ಯಾನ್ಸನ್ ಸ್ಟಾಕ್ಹೋಮ್ನಲ್ಲಿ ಅರ್ಥಶಾಸ್ತ್ರದಲ್ಲಿ ಹರಾಜು ಸಿದ್ದಾಂತದ ಸುಧಾರಣೆಗಳು ಹಾಗೂ ಹೊಸ ಹರಾಜು ಸ್ವರೂಪಗಳ ಅವಿಷ್ಕಾರಗಳಿಗಾಗಿ ಈ ಇಬ್ಬರನ್ನು ನೊಬೆಲ್‌ಗೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ (Nobel Prize) ವಿಜೇತರ ಹೆಸರನ್ನು ಘೋಷಿಸಿದರು.
ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಗೆ ನೊಬೆಲ್ ಪ್ರಶಸ್ತಿ
ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಕೋವಿಡ್ -19 (Covdi 19) ಸಾಂಕ್ರಾಮಿಕ ರೋಗದಿಂದಾಗಿ ವಿಶ್ವವು ಎರಡನೆಯ ಮಹಾಯುದ್ಧದ ನಂತರ ಭೀಕರ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅರ್ಥಶಾಸ್ತ್ರ ಕ್ಷೇತ್ರದಲ್ಲಿ ನೀಡಲಾಗುವ ಪ್ರಶಸ್ತಿಯನ್ನು ತಾಂತ್ರಿಕವಾಗಿ 'ಸ್ವೀರೆಜ್ ರಿಕ್ಸ್‌ಬ್ಯಾಂಕ್ ಪ್ರಶಸ್ತಿ' ಎಂದು ಕರೆಯಲಾಗುತ್ತದೆ ಮತ್ತು ಇದನ್ನು ವಿಜ್ಞಾನಿ ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1969ರಲ್ಲಿ ಸ್ಥಾಪಿಸಲಾಯಿತು ಮತ್ತು ಈಗ ಇದನ್ನು ನೊಬೆಲ್ ಬಹುಮಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ವಿಲಿಯಂ ನಾರ್ಡಸ್, ಪಾಲ್ ರೋಮರ್‌ಗೆ ನೊಬೆಲ್ ಗೌರವ
ಪ್ರಶಸ್ತಿಯಲ್ಲಿ 8.27 ಕೋಟಿ ರೂಪಾಯಿ ಮತ್ತು ಚಿನ್ನದ ಪದಕ!
ಕಳೆದ ವರ್ಷ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಬ್ಬರು ಸಂಶೋಧಕರಿಗೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಒಬ್ಬರಿಗೆ ಜಾಗತಿಕ ಬಡತನವನ್ನು ಕಡಿಮೆ ಮಾಡುವ ಪ್ರಯತ್ನಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯು ಚಿನ್ನದ ಪದಕ ಮತ್ತು ಒಂದು ಕೋಟಿ ಸ್ವೀಡಿಷ್ ಕ್ರೋನಾವನ್ನು (ಸುಮಾರು 8.27 ಕೋಟಿ ರೂಪಾಯಿಗಳು) ಒಳಗೊಂಡಿದೆ.