ಟೆಹ್ರಾನ್: ಇರಾನ್‌ನ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಪ್ರಮಾಣದಲ್ಲಿ 5.9 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದಿಂದಾಗಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದರೆ, 120 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಪ್ರೆಸ್ ಟಿವಿಯ ವರದಿಯ ಪ್ರಕಾರ, ಪ್ರಾಂತೀಯ ರಾಜಧಾನಿ ಟ್ಯಾಬ್ರೆಜ್‌ನಿಂದ 120 ಕಿಲೋಮೀಟರ್ ದೂರದಲ್ಲಿ 8 ಕಿಲೋಮೀಟರ್ ಆಳದಲ್ಲಿ ಭೂಕಂಪ  ಸಂಭವಿಸಿದೆ. 


ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ (ಇಎಂಎಸ್ಸಿ) ಪ್ರಕಾರ, ಸುಮಾರು 20 ಮಿಲಿಯನ್ ಜನರು ಇರಾನ್ ಮತ್ತು ನೆರೆಯ ಟರ್ಕಿಯಲ್ಲಿ ಭೂಕಂಪಗಳ ನಡುಕವನ್ನು ಅನುಭವಿಸಿದರು.


ಪೂರ್ವ ಅಜೆರ್ಬೈಜಾನ್‌ನ ಕ್ರೈಸಿಸ್ ಮ್ಯಾನೇಜ್‌ಮೆಂಟ್ ಸೆಂಟರ್ ಮುಖ್ಯಸ್ಥ ಮೊಹಮ್ಮದ್ ಬಕಾರ್ ಹಾನರ್ ಅವರನ್ನು ಉಲ್ಲೇಖಿಸಿ ಪ್ರೆಸ್ ಟಿವಿ, ಕನಿಷ್ಠ ಎಂಟು ರಕ್ಷಣಾ ತಂಡಗಳನ್ನು ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.


ಆರಂಭಿಕ ವರದಿಗಳು ಮಿಯಾನೆ ನಗರದ ಕನಿಷ್ಠ ಮೂರು ಹಳ್ಳಿಗಳಲ್ಲಿ ಮನೆಗಳು ಮತ್ತು ಕಟ್ಟಡಗಳಿಗೆ ಹೆಚ್ಚು ಹಾನಿ ಉಂಟಾಗಿದೆ ಎಂದು ದೃಢಪಡಿಸಿವೆ.