Earthquake Hits Japan: ಉತ್ತರ ಜಪಾನ್‌ನ ಹೊಕ್ಕೈಡೊದಲ್ಲಿ ಇಂದು  6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ. ಮಂಗಳವಾರ ಮಧ್ಯಾಹ್ನ ಜಪಾನ್‌ನ ಹೊಕ್ಕೈಡೊದಲ್ಲಿ ಭೂಕಂಪನವು ರಿಕ್ಟರ್ ಮಾಪಕದಲ್ಲಿ 6.1 ರಷ್ಟಿತ್ತು. ಆದರೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ಭೂಕಂಪವು 6:18 pm (0918 GMT) 20 ಕಿಲೋಮೀಟರ್ (12 ಮೈಲಿ) ಆಳದಲ್ಲಿ ಈ ಭೂಕಂಪ ಅಪ್ಪಳಿಸಿದೆ ಎಂದು ಹೇಳಲಾಗಿದೆ. 


ಇದನ್ನೂ ಓದಿ- Martial Law: ಮತ್ತೆ ಸೇನೆಯ 'ಕೈ' ಗೆ ಪಾಕಿಸ್ತಾನ! ಏನಿದು ಮಾರ್ಷಲ್ ಲಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌


ರಿಕ್ಟರ್ ಮಾಪಕದಲ್ಲಿ 6.1 ರ ತೀವ್ರತೆಯು ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಲಾಗಿದ್ದರೂ, ಮಾಧ್ಯಮ ವರದಿಗಳ ಪ್ರಕಾರ, ಇದುವರೆಗೂ ಯಾವುದೇ ಆಸ್ತಿ, ಪ್ರಾಣ ಹಾನಿಯ ಬಗ್ಗೆ ವರದಿಯಾಗಿಲ್ಲ. 


ಗಮನಾರ್ಹವಾಗಿ, ಜಪಾನ್‌ನ ಉತ್ತರ ದ್ವೀಪ ಹೊಕ್ಕೈಡೊದಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಫೆಬ್ರವರಿ 25 ರಂದು ಹೊಕ್ಕೈಡೋದ ಪೂರ್ವ ಭಾಗದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿತ್ತು. 


ಇದನ್ನೂ ಓದಿ- Vira Video: ಚಿರತೆಯಿಂದ ಸೂರ್ಯ ನಮಸ್ಕಾರ : ವಿಡಿಯೋ ಸಖತ್ ವೈರಲ್‌ 


ಇದಲ್ಲದೆ, ಈ ತಿಂಗಳ ಆರಂಭದಲ್ಲಿ, ರಿಕ್ಟರ್ ಮಾಪಕದಲ್ಲಿ 7.4 ಅಳತೆಯ ಪ್ರಬಲ ಭೂಕಂಪವು ಫುಕುಶಿಮಾ ಪ್ರಾಂತ್ಯದ ಪೂರ್ವಕ್ಕೆ ಅಪ್ಪಳಿಸಿತು. ಈ ವರ್ಷದ ಜನವರಿ 21 ರಂದು, ನೈಋತ್ಯ ಜಪಾನ್‌ನಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿ 13 ಜನರು ಗಾಯಗೊಂಡಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.