ಸೆಪ್ಟೆಂಬರ್ 12 ರಂದು ಪಾಪುವಾ ನ್ಯೂ ಗಿನಿ ರಾಷ್ಟ್ರದಲ್ಲಿ ಸಂಭವಿಸಿದ ಭಾರೀ ಭೂಕಂಪನಕ್ಕೆ ಐದು ಮಂದಿ ಪ್ರಾಣಪಕ್ಷಿ ಹಾರಿಹೋಗಿದೆ. 7.6 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿವೆ.  


COMMERCIAL BREAK
SCROLL TO CONTINUE READING

7.6 ತೀವ್ರತೆಯ ಭೂಕಂಪವು ಕೆನಾಂಟು ಪಟ್ಟಣದ ಬಳಿ 90 ಕಿ.ಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದ ಸಮಯದಲ್ಲಿ ಉಂಟಾದ ಭಯಾನಕ ದೃಶ್ಯವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ರಸ್ತೆಗಳಲ್ಲಿ ದೊಡ್ಡ ಬಿರುಕುಗಳು, ಹಾನಿಗೊಳಗಾದ ಕಾರುಗಳು ಮತ್ತು ಹೆದ್ದಾರಿಗಳಲ್ಲಿ ಅಲ್ಲಲ್ಲಿ ಅವಶೇಷಗಳು ಕಂಡುಬರುತ್ತವೆ, ಭಯಭೀತರಾದ ಜನರು ಅತ್ತಿಂದಿತ್ತ ಓಡಾಡುವುದನ್ನು ಕಾಣಬಹುದು.


ಇದನ್ನೂ ಓದಿ: Viral Video: ಸ್ನಾನಕ್ಕೆಂದು ಹೊರಟ ಮಹಿಳೆಯನ್ನ ಬಾತ್ ರೂಂನಲ್ಲಿ ಸ್ವಾಗತಿಸಿದ್ದು 12 ಅಡಿ ಉದ್ದದ ಹೆಬ್ಬಾವು!


ಎಎನ್‌ಐ ಪ್ರಕಾರ, ಭೂಕಂಪನದಿಂದ ಭೂಕುಸಿತವೂ ಉಂಟಾಗಿದೆ. ಪಾಪುವಾ ನ್ಯೂ ಗಿನಿ ಭಾಗಗಳಲ್ಲಿ ವಿದ್ಯುತ್ ಕಡಿತವು ವರದಿಯಾಗಿದೆ.  ಭೂಕಂಪನದ ಅನುಭವವು  ಕೇಂದ್ರಬಿಂದುವಿನ ಸಮೀಪವಿರುವ ಕೌಂಟಿಗಳ ನಗರಗಳಿಂದ ಪೋರ್ಟ್ ಮೊರೆಸ್ಬಿಯ ರಾಜಧಾನಿಯವರೆಗೆ ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಯುಎಸ್ ಜಿಯೋಲಾಜಿಕಲ್ ಸರ್ವೆ ಸುನಾಮಿ ಎಚ್ಚರಿಕೆಯನ್ನು ನೀಡಿದ್ದು,  ಆ ಬಳಿಕ ಈ ಭೂಕಂಪನ ಸಂಭವಿಸಿದೆ.


Earthquake : 6.8 ತೀವ್ರತೆಯ ಭೂಕಂಪ, 46 ಜನರ ದುರ್ಮರಣ


ಪಾಪುವಾ ನ್ಯೂ ಗಿನಿ ರಾಷ್ಟ್ರವು ಪೆಸಿಫಿಕ್ ಮಹಾಸಾಗರದ "ರಿಂಗ್ ಆಫ್ ಫೈರ್" ನ ಉದ್ದಕ್ಕೂ ನೆಲೆಗೊಂಡಿದೆ. ಇದೇ ಕಾರಣದಿಂದ ಭೂಕಂಪಗಳಿಗೆ ಒಳಗಾಗುತ್ತದೆ. 2018 ರಲ್ಲಿ, ದೇಶದ ದೂರದ ಎತ್ತರದ ಪ್ರದೇಶಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪವು 60 ಕ್ಕೂ ಹೆಚ್ಚು ಜನರನ್ನು ಪ್ರಾಣವನ್ನು ಪಡೆದಿತ್ತು. ಇದರಿಂದಾಗಿ ಅದೆಷ್ಟೋ ಜನರು ಬೀದಿಪಾಲಾಗಿದ್ದರು. ಎಎನ್ಐ ಪ್ರಕಾರ, 1900 ರಿಂದ ನ್ಯೂ ಗಿನಿಯಾದಲ್ಲಿ ಸುಮಾರು 22 ಬಾರಿ ಭೂಕಂಪನ ಸಂಭವಿಸಿದ್ದು, 7.5 ತೀವ್ರತೆಯು ಹೆಚ್ಚಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.