ಸೌದಿ ಅರೇಬಿಯಾದಲ್ಲಿ ಸುಮಾರು 8000 ವರ್ಷಗಳಷ್ಟು ಹಳೆಯದಾದ ಧಾರ್ಮಿಕ ಸ್ಥಳ ಮತ್ತು ದೇವಾಲಯ ಪತ್ತೆಯಾಗಿದೆ. ರಿಯಾದ್‌ನ ನೈಋತ್ಯ ಭಾಗದಲ್ಲಿರುವ ಕರಾವಳಿ ನಗರದ ಉತ್ಖನನದಲ್ಲಿ ಈ ಐತಿಹಾಸಿಕ ದೇವಾಲಯದ ಶಾಸನಗಳು ಸೇರಿ ಅನೇಕ ಶಾಸನಗಳು ಕಂಡುಬಂದಿವೆ. ಸೌದಿ ಅರೇಬಿಯಾದ ಪುರಾತತ್ವ ಶಾಸ್ತ್ರಜ್ಞರ ತಂಡವು ಹೊಸ ತಂತ್ರಜ್ಞಾನದ ಯಂತ್ರಗಳೊಂದಿಗೆ ಅಲ್-ಫಾವ್ ಎಂಬ ಸ್ಥಳದಲ್ಲಿ ಈ ಧಾರ್ಮಿಕ ಕೇಂದ್ರವನ್ನು ಪತ್ತೆಹಚ್ಚಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಸ್ಪೀಟ್ ಆಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ಅಮಾನತು


ಈ ಸಂಶೋಧನೆಯಲ್ಲಿ ದೊರೆತ ಅವಶೇಷಗಳನ್ನು ಉನ್ನತ ಅಧ್ಯಯನಕ್ಕಾಗಿ ಕಳುಹಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಸಂಶೋಧನೆಯಲ್ಲಿ ಉತ್ತಮ ಗುಣಮಟ್ಟದ ವೈಮಾನಿಕ ಛಾಯಾಗ್ರಹಣ, ನಿಯಂತ್ರಣ ಬಿಂದುಗಳೊಂದಿಗೆ ಡ್ರೋನ್ ದೃಶ್ಯಗಳು, ರಿಮೋಟ್ ಸೆನ್ಸಿಂಗ್, ಲೇಸರ್ ಸೆನ್ಸಿಂಗ್ ಮತ್ತು ಇತರ ಹಲವು ಉಪಕರಣಗಳನ್ನು ಬಳಸಲಾಗಿದೆ.


'ಸೌದಿ ಗೆಜೆಟ್'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಲ್-ಫಾದ ಎಂಬ ಈ ಪ್ರಮುಖ ಪ್ರದೇಶವು ಕಳೆದ 40 ವರ್ಷಗಳಿಂದ ಪುರಾತತ್ವ ಇಲಾಖೆಯ ಜನರಿಗೆ ಹಾಟ್ ಸ್ಪಾಟ್ ಆಗಿದೆ. ಸಮೀಕ್ಷೆಯ ಸ್ಥಳದಲ್ಲಿ ಹಲವಾರು ಆವಿಷ್ಕಾರಗಳಳು ಕಂಡುಬಂದಿವೆ.  ಅದರಲ್ಲೂ ಬಲಿಪೀಠದ ಭಾಗಗಳ ಅವಶೇಷಗಳು ಸಹ ಇಲ್ಲಿ ಪತ್ತೆಯಾಹಿದ್ದು, ಅದು ಹೆಚ್ಚು ಆಕರ್ಷಣೀಯವಾಗಿದೆ. ಈ ಕುರುಹುಗಳು ಇಲ್ಲಿ ಜನರು ವಾಸಿಸುತ್ತಿದ್ದರು ಎಂದು ತೋರಿಸುತ್ತದೆ. 


ʼಅವರ ಜೀವನ ಆಚರಣೆಗಳಲ್ಲಿ ಪೂಜೆ ಮತ್ತು ಯಾಗವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರಬೇಕು. ಈ ದೇವಾಲಯದ ಹೆಸರನ್ನು ರಾಕ್-ಕಟ್ ದೇವಾಲಯ ಎಂದು ಹೇಳಲಾಗುತ್ತದೆ. ಇದು ತುವೈಕ್ ಪರ್ವತದ ಬದಿಯಲ್ಲಿದೆ. ಇದನ್ನು ಈಗ ಅಲ್-ಫಾವ್ ಎಂದು ಕರೆಯಲಾಗುತ್ತದೆ. ಇಲ್ಲಿಯವರೆಗಿನ ಫಲಿತಾಂಶಗಳ ಪ್ರಕಾರ, ಅಲ್-ಫಾದ ಜನರು ತುಂಬಾ ಧಾರ್ಮಿಕರಾಗಿದ್ದರು. ಉತ್ಖನನದಲ್ಲಿ ಒಂದು ಶಾಸನವು ಕಂಡುಬಂದಿದ್ದು, ಅದರಲ್ಲಿ ಅಲ್-ಫಾ, ಕಹಲ್ ದೇವತೆಯ ಅಸ್ತಿತ್ವ ದೃಢವಾಗಿದೆʼ ಎಂದು ಸಂಶೋಧಕರು ತಿಳಿಸಿದ್ದಾರೆ. 


ಈ ಸ್ಥಳದಲ್ಲಿ ಪ್ರಾಚೀನ ದೊಡ್ಡ ನಗರವನ್ನು ಕಂಡುಹಿಡಿಯಲಾಗಿದೆ. ಅದರ ಮೇಲೆ ಕೆಲವು ಗೋಪುರಗಳನ್ನು ನಿರ್ಮಿಸಲಾಗಿದೆ. ಈ ಸಂಶೋಧನೆಯ ಸಂದರ್ಭದಲ್ಲಿ, ವಿಶ್ವದ ಅತ್ಯಂತ ಒಣ ಭೂಮಿ ಮತ್ತು ಕಠಿಣ ಮರುಭೂಮಿ ಪರಿಸರದಲ್ಲಿ ಕಾಲುವೆಗಳು, ಜಲಮೂಲಗಳು ಮತ್ತು ನೂರಾರು ಹೊಂಡಗಳನ್ನು ಒಳಗೊಂಡಂತೆ ಸಂಕೀರ್ಣವಾದ ನೀರಾವರಿ ವ್ಯವಸ್ಥೆಗಳನ್ನು ಪ್ರದೇಶದಲ್ಲಿ ಬಹಿರಂಗಪಡಿಸಲಾಗಿದೆ. ಇಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಈ ಪ್ರದೇಶದಲ್ಲಿ ದೇವಾಲಯ ಮತ್ತು ಮೂರ್ತಿ ಪೂಜೆಯ ಸಂಸ್ಕೃತಿ ಇತ್ತು ಎಂಬುದು ಸಾಬೀತಾಗಿದೆ.


ಇದನ್ನೂ ಓದಿ: Commonwealth Games 2022: ಭಾರತದ ಪದಕ ಬೇಟೆ: ಹೀಗಿರಲಿದೆ ಮೂರನೇ ದಿನದ ವೇಳಾಪಟ್ಟಿ


ಪಕ್ಕದ ಜಮೀನಿನಲ್ಲಿ ಸ್ಮಶಾನ
ಇಲ್ಲಿನ ಉತ್ಖನನದಲ್ಲಿ ದೊರೆತ ಶಾಸನಗಳ ಅಧ್ಯಯನ ನಡೆಯುತ್ತಿದೆ. ಹೊಸ ತಂತ್ರಜ್ಞಾನವು ನವಶಿಲಾಯುಗದ ಮಾನವ ವಸಾಹತುಗಳ ಅವಶೇಷಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಸ್ಥಳದಲ್ಲಿ ಹೊಸ ಸಂಶೋಧನೆಯ ಸಮಯದಲ್ಲಿ, 2,807 ಸಮಾಧಿಗಳು ಈ ದೇವಾಲಯಕ್ಕೆ ಬಹಳ ಹತ್ತಿರದಲ್ಲಿವೆ. ಮೃತರು ಯಾವ ಧರ್ಮಕ್ಕೆ ಸೇರಿದವರು ಎಂಬ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಇಲ್ಲಿ ಕಂಡುಬರುವ ಸಮಾಧಿಗಳು ವಿಭಿನ್ನ ಕಾಲದವು ಎಂದು ಹೇಳಲಾಗುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.