ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ: ಪೆಟ್ರೋಲ್-ಡೀಸೆಲ್ ಬೆಲೆಗಳ ಮೇಲೆ ಭಾರೀ ಪರಿಣಾಮ!

ದೇಶಾದ್ಯಂತ ಹಣದುಬ್ಬರವು ಆಕಾಶದೆತ್ತರಕ್ಕೆ ಏರಿರುವಾಗ, ಪೋರ್ಟ್ ಬ್ಲೇರ್‌ನಲ್ಲಿ ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವಾಗುತ್ತಿದೆ. ಪೋರ್ಟ್ ಬ್ಲೇರ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 84.10 ರೂ ಮತ್ತು ಡೀಸೆಲ್ 79.74 ರೂ.ಗೆ ಮಾರಾಟವಾಗುತ್ತಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂ., ಡೀಸೆಲ್ ಮೇಲೆ 3 ರೂ. ಪರಿಹಾರ ನೀಡಿತ್ತು.

Written by - Bhavishya Shetty | Last Updated : Jul 31, 2022, 08:44 AM IST
  • ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ
  • ಅತ್ಯಂತ ಕಡಿಮೆ ಬೆಲೆಯ ಪೆಟ್ರೋಲ್ ಮತ್ತು ಡೀಸೆಲ್
  • ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂ ಪರಿಹಾರ ನೀಡಿದೆ
ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ: ಪೆಟ್ರೋಲ್-ಡೀಸೆಲ್ ಬೆಲೆಗಳ ಮೇಲೆ ಭಾರೀ ಪರಿಣಾಮ! title=
Petrol Diesel Price

ಸರ್ಕಾರಿ ತೈಲ ಕಂಪನಿಗಳು ಇಂದು (ಜುಲೈ 31) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದೆ. ಸುಮಾರು ಎರಡೂವರೆ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಳೆದ ಬಾರಿ ಕೇಂದ್ರದ ಮೋದಿ ಸರ್ಕಾರವು ಮೇ 21 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದಾದ ನಂತರ ದೇಶಾದ್ಯಂತ ಪೆಟ್ರೋಲ್ 9.50 ರೂ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 7 ರೂ. ಇಳಿಕೆಯಾಗಿತ್ತು. 

ಇದನ್ನೂ ಓದಿ: ಶೂಟಿಂಗ್ ನಲ್ಲಿ 4 ಚಿನ್ನ, 2 ಕಂಚಿನ ಪದಕ ಗೆದ್ದ ತಮಿಳು ನಟ ಅಜಿತ್

ಅತ್ಯಂತ ಕಡಿಮೆ ಬೆಲೆಯ ಪೆಟ್ರೋಲ್ ಮತ್ತು ಡೀಸೆಲ್: 
ದೇಶಾದ್ಯಂತ ಹಣದುಬ್ಬರವು ಆಕಾಶದೆತ್ತರಕ್ಕೆ ಏರಿರುವಾಗ, ಪೋರ್ಟ್ ಬ್ಲೇರ್‌ನಲ್ಲಿ ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವಾಗುತ್ತಿದೆ. ಪೋರ್ಟ್ ಬ್ಲೇರ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 84.10 ರೂ ಮತ್ತು ಡೀಸೆಲ್ 79.74 ರೂ.ಗೆ ಮಾರಾಟವಾಗುತ್ತಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂ., ಡೀಸೆಲ್ ಮೇಲೆ 3 ರೂ. ಪರಿಹಾರ ನೀಡಿತ್ತು.

ನಿಮ್ಮ ನಗರದ ತೈಲ ಬೆಲೆ ತಿಳಿದಿದೆಯೇ?

ದೆಹಲಿ: ಪೆಟ್ರೋಲ್ 96.72 ರೂ ಮತ್ತು ಡೀಸೆಲ್ ಲೀಟರ್‌ಗೆ 89.62 ರೂ
ಮುಂಬೈ:  ಪೆಟ್ರೋಲ್ 111.35 ರೂ ಮತ್ತು ಡೀಸೆಲ್ ಲೀಟರ್‌ಗೆ 97.28 ರೂ
ಚೆನ್ನೈ:  ಪೆಟ್ರೋಲ್ 102.63 ರೂ ಮತ್ತು ಡೀಸೆಲ್ ಲೀಟರ್‌ಗೆ 94.24 ರೂ
ಕೋಲ್ಕತ್ತಾ:  ಪೆಟ್ರೋಲ್ 106.03 ರೂ ಮತ್ತು ಡೀಸೆಲ್ ಲೀಟರ್‌ಗೆ 92.76 ರೂ
ನೋಯ್ಡಾ: ಪೆಟ್ರೋಲ್ 96.57 ರೂ ಮತ್ತು ಡೀಸೆಲ್ ಲೀಟರ್‌ಗೆ 89.96 ರೂ
ಲಕ್ನೋ: ಪೆಟ್ರೋಲ್ 96.57 ರೂ ಮತ್ತು ಡೀಸೆಲ್ ಲೀಟರ್‌ಗೆ 89.76 ರೂ.
ಜೈಪುರ: ಪೆಟ್ರೋಲ್ 108.48 ರೂ ಮತ್ತು ಡೀಸೆಲ್ ಲೀಟರ್‌ಗೆ 93.72 ರೂ
ತಿರುವನಂತಪುರ: ಪೆಟ್ರೋಲ್ 107.71 ರೂ ಮತ್ತು ಡೀಸೆಲ್ ಲೀಟರ್‌ಗೆ 96.52 ರೂ.
ಪೋರ್ಟ್ ಬ್ಲೇರ್‌: ಪೆಟ್ರೋಲ್ ರೂ 84.10 ಮತ್ತು ಡೀಸೆಲ್ ಲೀಟರ್‌ಗೆ ರೂ 79.74
ಪಾಟ್ನಾ: ಪೆಟ್ರೋಲ್ ರೂ 107.24 ಮತ್ತು ಡೀಸೆಲ್ ಲೀಟರ್‌ಗೆ ರೂ 94.04
ಗುರುಗ್ರಾಮ: 97.18 ರೂ. ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ 90.05 ರೂ
ಬೆಂಗಳೂರು:  ಪೆಟ್ರೋಲ್ 101.94 ರೂ ಮತ್ತು ಡೀಸೆಲ್ ಲೀಟರ್‌ಗೆ 87.89 ರೂ.
ಭುವನೇಶ್ವರ: ಪೆಟ್ರೋಲ್ ರೂ 103.19 ಮತ್ತು ಡೀಸೆಲ್ ಲೀಟರ್‌ಗೆ ರೂ 94.76
ಚಂಡೀಗಢ:  ಪೆಟ್ರೋಲ್ 96.20 ರೂ ಮತ್ತು ಡೀಸೆಲ್ ಲೀಟರ್‌ಗೆ 84.26 ರೂ
ಹೈದರಾಬಾದ್‌: ಪೆಟ್ರೋಲ್ 109.66 ರೂ ಮತ್ತು ಡೀಸೆಲ್ ಲೀಟರ್‌ಗೆ 97.82 ರೂ

ಇದನ್ನೂ ಓದಿ: Commonwealth Games 2022 : ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 4ನೇ ಪದಕ : ಬೆಳ್ಳಿಗೆ ಮುತ್ತಿಕ್ಕಿದ ಬಿಂದಿಯಾರಾಣಿ!

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News