ಲಂಡನ್: ಜೋಸಿ ಬರ್ಡ್ಸ್ ಎನ್ನುವ 93 ವರ್ಷದ ಮಹಿಳೆಯೊಬ್ಬಳು ಯುಕೆಯಲ್ಲಿ ಯಾವುದೇ ಅಪರಾಧ ಮಾಡದ ಕಾರಣ ಬಂಧನಕ್ಕೊಳಗಾಗಿದ್ದಾಳೆ. ಅಷ್ಟಕ್ಕೂ ಈ ವೃದ್ದೆಯನ್ನು ಪೊಲೀಸರು ಬಂಧಿಸಲು ಕಾರಣವೇನು ಗೊತ್ತೇ?  ಹಾಗಾದರೆ ಮುಂದೆ ಓದಿ ..


COMMERCIAL BREAK
SCROLL TO CONTINUE READING

ಆ ವೃದ್ದೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರು ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದಲು ಬಯಸಿದ್ದಳು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈಗ ಮೊಮ್ಮಗಳ ಕೋರಿಕೆಯ ಮೇರೆಗೆ ಯುಕೆ ನ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈಗ ಪೋಲೀಸರ ಕ್ರಮಕ್ಕೆ ಮೊಮ್ಮಗಳು ಪಾಮ್ ಸ್ಮಿತ್ ಟ್ವಿಟ್ಟರ್ ನಲ್ಲಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. 


ಸ್ಮಿತ್ ತನ್ನ ಅಜ್ಜಿಯ ಆರೋಗ್ಯವು ಏರುಪೇರು ಆಗುತ್ತಿದ್ದು, ಅವಳು ತನ್ನ ಜೀವನದುದ್ದಕ್ಕೂ ಚೆನ್ನಾಗಿದ್ದಿದ್ದರಿಂದ ನೆನಪಿಡುವ ಅನುಭವವನ್ನು ಹೊಂದಬೇಕೆಂದು ಆ ವೃದ್ದೆ ಬಯಸಿದ್ದಳು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವಳು ವಯಸ್ಸಾದರೂ ತಮ್ಮನ್ನು ಬಂಧಿಸಬೇಕೆಂದು ವಿನಂತಿಸಿಕೊಡುತ್ತಿದ್ದಳು. ಈ ಹಿನ್ನಲೆಯಲ್ಲಿ ಪೊಲೀಸರು 93 ವರ್ಷದ ವೃದ್ದೆಯನ್ನು ಬಂಧಿಸಿದ್ದಾರೆ. ಈಗ ಆ ಅಜ್ಜಿ ಪೋಲೀಸರ ಬಂಧನದಿಂದ ಸಂತಸಗೊಂಡಿದ್ದಾಳೆ ಎನ್ನಲಾಗಿದೆ.