ಕೊರೊನಾ (Corona) ಆರಂಭವಾದಾಗಿನಿಂದ ಜನರು ಹೆಚ್ಚು ಮನೆಯಲ್ಲೇ ಇರುವಂತಾಗಿದೆ. ಹಲವರು ಹಲವು ರೀತಿಯ ಅಭ್ಯಾಸಗಳನ್ನು, ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ಈ ಸಮಯವನ್ನು ಸರಿಯಾಗಿ ಬಳಸಿಕೊಂಡ ಅನೇಕ ಜನರು ಸಾಧನೆಗಳನ್ನು ಸಹ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Missiles Attack: Iraq ನ ಅಮೆರಿಕಾದ ದೂತಾವಾಸದ ಮೇಲೆ 12 ಮಿಸೈಲ್ ಗಳಿಂದ ದಾಳಿ, ಇರಾನ್ ಹೇಳಿದ್ದೇನು?


ಅಂತೆಯೇ ಇಲ್ಲೊಬ್ಬರು ವ್ಯಕ್ತಿ ತಮ್ಮ ಹವ್ಯಾಸದಿಂದ ಗಿನ್ನೀಸ್​ ರೆಕಾರ್ಡ್​ (Guinness record) ಅನ್ನೇ ಮಾಡಿದ್ದಾರೆ. ಒಂದೇ ಒಂದು ಗಿಡದಲ್ಲಿ 1,269 ಟೊಮೆಟೊಗಳನ್ನೂ ಬೆಳೆಸುವ ಮೂಲಕ ಇಲ್ಲೋರ್ವ ವ್ಯಕ್ತಿ ಗಿನ್ನಿಸ್​ ದಾಖಲೆ ಬರೆದಿದ್ದಾರೆ. 


ಹೌದು, 2021ರಲ್ಲಿ ಯುಕೆಯ ನಿವಾಸಿ ಡೌಗ್ಲಾಸ್​ ಸ್ಮಿತ್​ ಎನ್ನುವವರು ತಮ್ಮ ಮನೆಯ ಟೆರೇಸ್​ ಮೇಲೆ ಟೊಮೆಟೊ (Tomato) ಗಿಡವನ್ನು ನೆಟ್ಟು ಒಂದೆ ಗಿಡದಲ್ಲಿ 839 ಟೊಮೆಟೋ ಹಣ್ಣಗಳನ್ನು ಬೆಳೆಸಿ ದಾಖಲೆ ನಿರ್ಮಿಸಿದ್ದರು.


ಇದೀಗ ಅದೇ ವ್ಯಕ್ತಿ ಒಂದೇ ಗಿಡದಲ್ಲಿ 1269 ಟೊಮೆಟೋ ಹಣ್ಣಗಳನ್ನು ಬೆಳೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ತಮ್ಮದೇ ಹಳೆಯ ದಾಖಲೆಯನ್ನು ಮುರಿದಿದ್ದಾರೆ. 


ಸದ್ಯ ಇವರು ಬೆಳೆದ ಟೊಮೆಟೊ ಗಿಡದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ (Viral Photo) ಆಗಿದೆ. 2021ರ ಸೆಪ್ಟೆಂಬರ್​ನಲ್ಲಿ  ಟೊಮೆಟೊವನ್ನು ನೆಟ್ಟು ಬೆಳೆಸಲು ಆರಂಭಿಸಿದ್ದರು. ಇದೀಗ 1200ಕ್ಕೂ ಹೆಚ್ಚು ಟೊಮೆಟೊ ಹಣ್ಣಗಳನ್ನು ಬೆಳೆಸಿದ್ದಾರೆ. 2022 ಮಾರ್ಚ್​ 9 ರಂದು ಗಿನ್ನಿಸ್​ ವಲ್ರ್ಡ್​ ರೆಕಾರ್ಡ್​​ ಅಧಿಕೃತವಾಗಿ ಹೊಸ ದಾಖಲೆ ನಿರ್ಮಿಸಿರುವುದರ ಕುರಿತು ಖಚಿತಪಡಿಸಿದೆ.


ಇದನ್ನೂ ಓದಿ: Big Wonder - ಗಾಳಿಯಿಂದ ವಜ್ರ ತಯಾರಿಸಿದ ಕಂಪನಿ ! ಸುದ್ದಿ ಓದಿ... ನೀವೂ ನಿಬ್ಬೇರಗಾಗುವಿರಿ


ಸ್ಮಿತ್​ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ  ಮನೆಯ ಹಿತ್ತಲಿನಲ್ಲಿ 21 ಅಡಿ ಎತ್ತರದ​ ಸೂರ್ಯಕಾಂತಿ ಗಿಡವನ್ನು ಬೆಳೆದು ದಾಖಲೆ ನಿರ್ಮಿಸಿದ್ದರು. ಇದೀಗ ಒಂದೇ ಗಿಡದಲ್ಲಿ 1269 ಟೊಮೆಟೊಗಳನ್ನು ಬೆಳೆದು ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.