Missiles Attack: Iraq ನ ಅಮೆರಿಕಾದ ದೂತಾವಾಸದ ಮೇಲೆ 12 ಮಿಸೈಲ್ ಗಳಿಂದ ದಾಳಿ, ಇರಾನ್ ಹೇಳಿದ್ದೇನು?

Missiles Strike - ಈ ಕುರಿತು ಮಾಹಿತಿ ನೀಡಿರುವ ಅಮೆರಿಕಾದ ರಕ್ಷಣಾ ಅಧಿಕಾರಿಯೊಬ್ಬರು, ಇರಾಕ್ ನಲ್ಲಿ ಇರಾನ್ (Iran) ವತಿಯಿಂದ ಮಿಸೈಲ್ ದಾಳಿಗಳನ್ನು ನಡೆಸಲಾಗಿದೆ ಎಂದಿದ್ದಾರೆ. ಆದರೆ, ಈ ದಾಳಿಯಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾದ ಸಂಭವಿಸಿಲ್ಲ.  

Written by - Nitin Tabib | Last Updated : Mar 13, 2022, 12:06 PM IST
  • ಇರಾಕ್ ನಲ್ಲಿರುವ ಅಮೆರಿಕಾದ ದೂತಾವಾಸದ ಮೇಲೆ 12 ಕ್ಷಿಪಣಿಗಳ ಮೂಲಕ ದಾಳಿ
  • ದಾಳಿಯಲ್ಲಿ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ
  • ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್‌ನಿಂದ ಹಾರಿಸಲಾಗಿದೆ ಎಂದು ಇರಾಕಿನ ಅಧಿಕಾರಿಗಳು ಆರೋಪಿಸಿದ್ದಾರೆ
Missiles Attack: Iraq ನ ಅಮೆರಿಕಾದ ದೂತಾವಾಸದ ಮೇಲೆ 12 ಮಿಸೈಲ್ ಗಳಿಂದ ದಾಳಿ, ಇರಾನ್ ಹೇಳಿದ್ದೇನು? title=
US Consulate In Iraq Attacked (Representational Image)

Missile Attack - ಇರಾಕ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿ (Us Consulate) ಬಳಿ 12 ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ. ಇರಾಕ್‌ನ (Iraq) ಉತ್ತರ ನಗರವಾದ ಇರ್ಬಿಲ್ (Irbil) ನಲ್ಲಿರುವ ಯುಎಸ್ ವಾಣಿಜ್ಯ ದೂತಾವಾಸದ ಮೇಲೆ 12 ಕ್ಷಿಪಣಿಗಳಿಂದ ದಾಳಿ (Ballestic Missiles Attack) ನಡೆಸಲಾಗಿದೆ ಎಂದು ಇರಾಕಿನ ಭದ್ರತಾ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ. ಪ್ರಸ್ತುತ, ದಾಳಿಯಲ್ಲಿ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಕ್ಷಿಪಣಿ ದಾಳಿ ಮತ್ತು ಅದರಿಂದ ಉಂಟಾದ ಹಾನಿಯ ಬಗ್ಗೆ ಇರಾಕ್ ಮತ್ತು ಯುಎಸ್ ಅಧಿಕಾರಿಗಳು ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. US ಸರ್ಕಾರದ ಯಾವುದೇ ಸೌಕರ್ಯಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಮತ್ತೋರ್ವ  US ಅಧಿಕಾರಿ ಹೇಳಿದ್ದಾರೆ. ಕಾನ್ಸುಲೇಟ್ ಕಟ್ಟಡವನ್ನೇ ಗುರಿಯಾಗಿಸಿಕೊಂಡಿರುವ ಯಾವುದೇ ಸಂಕೇತಗಳು ದೊರೆತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ನಗರಗಳಲ್ಲೆಡೆ ಲಾಕ್ ಡೌನ್ ಜಾರಿ

ಇರಾಕ್ ನ ಅಮೆರಿಕಾದ ದೂತವಾಸದ ಮೇಲೆ 12 ಕ್ಷಿಪಣಿಗಳಿಂದ ದಾಳಿ
ಕ್ಷಿಪಣಿ ದಾಳಿಯ ಬಳಿಕ ಮಾತನಾಡಿರುವ ಬಾಗ್ದಾದ್‌ನಲ್ಲಿರುವ ಇರಾಕಿನ ಅಧಿಕಾರಿಯೊಬ್ಬರು ಅನೇಕ ಕ್ಷಿಪಣಿಗಳು ಯುಎಸ್ ವಾಣಿಜ್ಯ ದೂತಾವಾಸವನ್ನು ಗುರಿಯಾಗಿಸಿವೆ ಎಂದು ಹೇಳಿದ್ದಾರೆ, ಅಸೋಸಿಯೇಟೆಡ್ ಪ್ರೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಈ ಅನಾಮಧೇಯ ಸ್ಥಿತಿಯ ಕುರಿತು ಮಾತನಾಡಿರುವ US ರಕ್ಷಣಾ ಅಧಿಕಾರಿಯೊಬ್ಬರು, ಎಷ್ಟು ಕ್ಷಿಪಣಿಗಳನ್ನು ಹಾರಿಸಲಾಗಿದೆ ಮತ್ತು ಅವು ನಿಜವಾಗಿ ಎಲ್ಲಿ ಬಂದಿವೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಹೇಳಿದ್ದಾರೆ. ದಾಳಿಯಿಂದ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳಿಲ್ಲ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್‌ನಿಂದ ಹಾರಿಸಲಾಗಿದೆ ಎಂದು ಇರಾಕಿನ ಅಧಿಕಾರಿಗಳು ಆರೋಪಿಸಿದ್ದಾರೆ. ಈ ದಾಳಿಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಘಟನೆಯನ್ನು ಇರಾಕಿ ಸರ್ಕಾರ ಮತ್ತು ಕುರ್ದಿಶ್ ಪ್ರಾದೇಶಿಕ ಸರ್ಕಾರವು ತನಿಖೆ ನಡೆಸುತ್ತಿದೆ.

ಇದನ್ನೂ ಓದಿ-Ukrain-Russia Crisis: ರಷ್ಯಾ ಗಡಿಗೆ ಸೈನಿಕರನ್ನು ಕಳುಹಿಸಿದ US, ಮೂರನೇ ವಿಶ್ವ ಯುದ್ಧದ ಕುರಿತು Biden ಹೇಳಿದ್ದೇನು?

ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
ಇರಾಕ್‌ನಲ್ಲಿನ ದಾಳಿಯು ಸಿರಿಯಾದ ಡಮಾಸ್ಕಸ್ ಬಳಿ ಇಸ್ರೇಲಿ ದಾಳಿಯ ಹಲವು ದಿನಗಳ ನಂತರ ನಡೆದಿದೆ ಎಂಬುದು ಇಲ್ಲಿ ಉಲ್ಲೇಖನೀಯ, ಇದರಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಸದಸ್ಯರು ಮೃತಪಟ್ಟಿದ್ದರು. ಬುಧವಾರ ನಡೆದ ದಾಳಿಯನ್ನು ಇರಾನ್ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ದಾಳಿಯಿಂದ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಇರಾಕ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಈ ಯುಎಸ್ ಕಾನ್ಸುಲೇಟ್ ಕಟ್ಟಡವು ಹೊಸದಾಗಿ ನಿರ್ಮಿಸಲಾಗಿದ್ದು, ಪ್ರಸ್ತುತ ಖಾಲಿಯಾಗಿದೆ.

ಇದನ್ನೂ ಓದಿ-Big Wonder - ಗಾಳಿಯಿಂದ ವಜ್ರ ತಯಾರಿಸಿದ ಕಂಪನಿ ! ಸುದ್ದಿ ಓದಿ... ನೀವೂ ನಿಬ್ಬೇರಗಾಗುವಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News