ನವದೆಹಲಿ:  Aerosol Vaccine - ಕೊರೊನಾ ವೈರಸ್ (Coronavirus) ಕುರಿತು ಪ್ರತಿದಿನ ಒಂದಷ್ಟು ಸಂಶೋಧನೆ ಮತ್ತು ಅಧ್ಯಯನಗಳು ನಡೆಯುತ್ತಿವೆ. ಕರೋನಾ ಲಸಿಕೆಯನ್ನೂ ಕೂಡ ವಿಜ್ಞಾನಿಗಳು ತಯಾರಿಸಿದ್ದಾರೆ. ಇದರಿಂದಾಗಿ ಕೊರೊನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಸಿಕ್ಕಂತಾಗಿದೆ. ಭಾರತದಲ್ಲಿಯೂ ಹೆಚ್ಚಿನ ಜನರು ಕರೋನಾ ಲಸಿಕೆ ಪಡೆದಿದ್ದಾರೆ. ನೀವು ಲಸಿಕೆಯನ್ನು ಪಡೆದಿದ್ದರೆ, ಅದನ್ನು ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ ಎಂಬ ಸಂಗತಿ ನಿಮಗೂ ತಿಳಿದಿರುತ್ತದೆ. ಆದರೆ ಕೆನಡಾದ ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಕೋವಿಡ್-19 ವಿರೋಧಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ಅಧ್ಯಯನವನ್ನು Journal cell ನಲ್ಲಿ ಪ್ರಕಟಿಸಲಾಗಿದೆ
Journal cell ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನದಲ್ಲಿ ಇದನ್ನು ಹೇಳಲಾಗಿದೆ. ಈ ಅಧ್ಯಯನದ ಪ್ರಕಾರ, ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯವು ಇನ್ಹೇಲ್ಡ್ ಲಸಿಕೆಯನ್ನು  (Inhaled vaccine) ಸಿದ್ಧಪಡಿಸಿದೆ. ಹೊಸ ಇನ್ಹೇಲ್ಡ್ ಲಸಿಕೆಯು ಕರೋನದ ಎಲ್ಲಾ ರೂಪಾಂತರಗಳ ಮೇಲೆ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಲಸಿಕೆಯನ್ನು ಉಸಿರಾಟದ ಮೂಲಕ ತೆಗೆದುಕೊಳ್ಳಬಹುದಾದ ಕಾರಣ ಇದನ್ನು ಏರೋಸಾಲ್ ಲಸಿಕೆ (Aerosol vaccine) ಎಂದೂ ಕರೆಯುತ್ತಾರೆ. ಕೊರೊನಾವೈರಸ್ (Coronavirus) ವಿರುದ್ಧ ರಕ್ಷಣೆ ಒದಗಿಸಲು ಇದು ನೇರವಾಗಿ ಶ್ವಾಸಕೋಶ ಮತ್ತು ಉಸಿರಾಟದ ಪ್ರದೇಶವನ್ನು ಗುರಿಯಾಗಿಸುತ್ತದೆ. ಆದ್ದರಿಂದ ಇದು ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು.


ಇದನ್ನೂ ಓದಿ-ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳಿಗೆ ಹಿಜಾಬ್ ಮತ್ತು ಟೋಪಿ ಕಡ್ಡಾಯ, ವೈದ್ಯಕೀಯ ಕಾಲೇಜಿನಲ್ಲಿ ಹೀಗೊಂದು ಆದೇಶ


ಲಸಿಕೆ ವಿಶೇಷ ರೀತಿಯ ಪ್ರತಿರಕ್ಷೆಯನ್ನು ನೀಡುತ್ತದೆ
ಇದೊಂದು ಪ್ರಾಣಿಗಳ ಮಾಡೆಲ್ ಮೇಲೆ ಆಧಾರಿತ ಅಧ್ಯಯನವಾಗಿದೆ ಎಂದು ಜರ್ನಲ್ ನಲ್ಲಿ ಹೇಳಲಾಗಿದೆ. ನಮ್ಮ ಪಾಲುದಾರ ವೆಬ್‌ಸೈಟ್ WION ಪ್ರಕಾರ,  ಹೆಚ್ಚಿನ ಲಸಿಕೆಗಳು ಕರೋನದ ಸ್ಪೈಕ್ ಪ್ರೋಟೀನ್ ಅನ್ನು ಗುರಿಯಾಗಿಸುತ್ತವೆ, ಈ ಸ್ಪೈಕ್ ಪ್ರೋಟೀನ್ ಮೂಲಕ ವೈರಾಣು ದೇಹವನ್ನು ಪ್ರವೇಶಿಸುತ್ತದೆ. ವೈರಸ್ ರೂಪಾಂತರಿಗಳು ಹೆಚ್ಚಾದರೆ ಲಸಿಕೆ ಕಡಿಮೆ ಪರಿಣಾಮಕಾರಿ ಎಂದು ಸಾಬೀತಾಗಬಹುದು. ಆದರೆ ನಮ್ಮ ಲಸಿಕೆ ವೈರಸ್‌ನ ವಿವಿಧ ಭಾಗಗಳನ್ನು ಗುರಿಯಾಗಿಸುತ್ತದೆ ಎಂದು ಇದನ್ನು ಸಿದ್ಧಪಡಿಸಿದ ಸಂಶೋಧಕರು ಹೇಳುತ್ತಾರೆ. ಈ ಲಸಿಕೆಯು ವಿಶೇಷ ರೀತಿಯ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ, ಇದು ಕರೋನಾದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ಷಣೆ ನೀಡುತ್ತದೆ ಎಂಬುದು ಅವರ ಅಭಿಪ್ರಾಯ.


ಇದನ್ನೂ ಓದಿ-Europe on Verge of War: 'ಯುರೋಪ್ ಯುದ್ಧದಂಚಿನಲ್ಲಿದೆ', ಎಚ್ಚರಿಕೆ ನೀಡಿದ ಜರ್ಮನಿ ವಾಯ್ಸ್ ಚಾನ್ಸಲರ್


ಕಡಿಮೆ ಪ್ರಮಾಣ ನೀಡಿದರೆ ಸಾಕು ಕೆಲಸ ಮಾಡುತ್ತದೆ
ಸಂಶೋಧಕರ ಪ್ರಕಾರ, ಇನ್ಹೇಲ್ ಲಸಿಕೆಯಲ್ಲಿ ಔಷಧದ ಕೆಲವೇ ಪ್ರಮಾಣಗಳ ಅಗತ್ಯವಿದೆ. ಪ್ರಸ್ತುತ ಸೂಜಿ ಲಸಿಕೆಯಲ್ಲಿನ ಕೇವಲ ಶೇ.1ರಷ್ಟು ಪ್ರಮಾಣ ಮಾತ್ರ ಇದರಲ್ಲಿ ಸಾಕಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಇದೇ ವೇಳೆ, ಕಳೆದ ವರ್ಷ ಬಂದ ಚೈನೀಸ್ ಇನ್ಹೇಲ್ ಲಸಿಕೆಯಾಗಿರುವ ಇಂಟ್ರಾವೆನಸ್ ಲಸಿಕೆಯ ಹೋಲಿಕೆಯಲ್ಲಿ ಅದರ  ಐದನೇ ಒಂದು ಭಾಗ ಮಾತ್ರ ಇದರಲ್ಲಿ ಅಗತ್ಯ ಬೀಳುತ್ತದೆ.


ಇದನ್ನೂ ಓದಿ-Turkey: ವ್ಯಕ್ತಿಯೊಬ್ಬನ Covid-19 ವರದಿ 78 ಬಾರಿ ಸಕಾರಾತ್ಮಕ ಬಂದಿದೆಯಂತೆ! ಇದುವರೆಗೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.