ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳಿಗೆ ಹಿಜಾಬ್ ಮತ್ತು ಟೋಪಿ ಕಡ್ಡಾಯ, ವೈದ್ಯಕೀಯ ಕಾಲೇಜಿನಲ್ಲಿ ಹೀಗೊಂದು ಆದೇಶ

ಪಾಕಿಸ್ತಾನದ  ರಾಜಧಾನಿಯಲ್ಲಿ ವೈದ್ಯಕೀಯ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಪ್ರೇಮಿಗಳ ದಿನದ  ಮಾರ್ಗಸೂಚಿಗಳನ್ನು ಹೊರಡಿಸಿದೆ. 

Written by - Ranjitha R K | Last Updated : Feb 14, 2022, 10:25 AM IST
  • ವಿದ್ಯಾರ್ಥಿಗಳ ಮೇಲೆ ಕಾಲೇಜು ಸಿಬ್ಬಂದಿ ನಿಗಾ
  • ಕ್ಯಾಂಪಸ್‌ನಲ್ಲಿ ಗಸ್ತು ತಿರುಗಲಿರುವ ಕಾಲೇಜು ಸಿಬ್ಬಂದಿ
  • ಆದೇಶ ಪಾಲಿಸದಿದ್ದರೆ ಬೀಳುತ್ತದೆ ದಂಡ
 ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳಿಗೆ ಹಿಜಾಬ್ ಮತ್ತು ಟೋಪಿ ಕಡ್ಡಾಯ,  ವೈದ್ಯಕೀಯ ಕಾಲೇಜಿನಲ್ಲಿ ಹೀಗೊಂದು ಆದೇಶ title=
ವಿದ್ಯಾರ್ಥಿಗಳ ಮೇಲೆ ಕಾಲೇಜು ಸಿಬ್ಬಂದಿ ನಿಗಾ (file photo)

ಇಸ್ಲಾಮಾಬಾದ್ : ಪಾಕಿಸ್ತಾನದ (Pakistan) ರಾಜಧಾನಿಯಲ್ಲಿ ವೈದ್ಯಕೀಯ ಕಾಲೇಜು (Medical College) ತನ್ನ ವಿದ್ಯಾರ್ಥಿಗಳಿಗೆ ಪ್ರೇಮಿಗಳ ದಿನದ (Valentine's Day) ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳ ಪ್ರಕಾರ, ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸುವುದು ಕಡ್ಡಾಯ. ಹುಡುಗರು ಹುಡುಗಿಯರಿಂದ ಎರಡು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು ಮಾತ್ರವಲ್ಲ ಬಿಳಿ ಬಣ್ಣದ ನಮಾಜ್ ಟೋಪಿ ಧರಿಸುವಂತೆ ಸೂಚಿಸಲಾಗಿದೆ. 

ವಿದ್ಯಾರ್ಥಿಗಳು ' ಪ್ರೇಮಿಗಳ ದಿನ' ಆಚರಿಸಬಾರದು!
ವರದಿಯ ಪ್ರಕಾರ, ಇಸ್ಲಾಮಾಬಾದ್ ಇಂಟರ್‌ನ್ಯಾಷನಲ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು 'ಪ್ರೇಮಿಗಳ ದಿನ' (Valentine's Day) ಕಾರ್ಯಕ್ರಮಗಳನ್ನು ನಿಷೇಧಿಸಿ ಶನಿವಾರ ಆದೇಶ ಹೊರಡಿಸಿದೆ. ಪ್ರೇಮಿಗಳ ದಿನಾಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳನ್ನು ಆಚರಿಸದಂತೆ ಆದೇಶ ನೀಡಲಾಗಿದೆ.   

ಇದನ್ನೂ ಓದಿ : Europe on Verge of War: 'ಯುರೋಪ್ ಯುದ್ಧದಂಚಿನಲ್ಲಿದೆ', ಎಚ್ಚರಿಕೆ ನೀಡಿದ ಜರ್ಮನಿ ವಾಯ್ಸ್ ಚಾನ್ಸಲರ್

ಕಾಲೇಜಿನಲ್ಲಿ ಹೀಗೊಂದು ಆದೇಶ :
ಇಸ್ಲಾಮಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನ ಮಾರ್ಗಸೂಚಿಯ ಅನ್ವಯ, ವಿಶ್ವವಿದ್ಯಾಲಯದ ಡ್ರೆಸ್ ಕೋಡ್ ಪ್ರಕಾರ, ಹಿಜಾಬ್ ಧರಿಸಬೇಕು (Hijab). ತಲೆ, ಕುತ್ತಿಗೆ ಮತ್ತು ಎದೆಯ ಭಾಗವನ್ನು  ಸರಿಯಾಗಿ ಮುಚ್ಚಿರಬೇಕು. ಇದಲ್ಲದೇ ಎಲ್ಲಾ ವಿದ್ಯಾರ್ಥಿಗಳು ನಮಾಝ್ (Namaz) ವೇಳೆ ಧರಿಸುವ ಬಿಳಿ ಟೋಪಿ ಧರಿಸಬೇಕು.

ತಪ್ಪಿದರೆ ವಿದ್ಯಾರ್ಥಿಗಳಿಗೆ ದಂಡ :
ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಕಾಲೇಜು ಸಿಬ್ಬಂದಿ ಕಾಲೇಜು ಕ್ಯಾಂಪಸ್‌ನಲ್ಲಿ ಗಸ್ತು ತಿರುಗುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. 

ಇದನ್ನೂ ಓದಿ : Turkey: ವ್ಯಕ್ತಿಯೊಬ್ಬನ Covid-19 ವರದಿ 78 ಬಾರಿ ಸಕಾರಾತ್ಮಕ ಬಂದಿದೆಯಂತೆ! ಇದುವರೆಗೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ

ಇಸ್ಲಾಮಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜನ್ನು (Islamabad international medical college) 1996 ರಲ್ಲಿ ಸ್ಥಾಪಿಸಲಾಯಿತು.  ಈ ವೈದ್ಯಕೀಯ ಕಾಲೇಜು ರಿಫಾ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದೊಂದಿಗೆ  ಸಂಯೋಜಿತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News