ಕಾಬೂಲ್: Kabul Airport Firing - ಅಫ್ಘಾನಿಸ್ತಾನ್ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದೆ.  ತಾಲಿಬಾನಿ ಉಗ್ರರ ಭಯದಿಂದಾಗಿ ಜನರು ಹೇಗಾದರೂ ಮಾಡಿ ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಜನರಿಗೆ ಅಫ್ಘಾನಿಸ್ತಾನದಿಂದ (Afghanistan) ಕೇವಲ ಒಂದು ದಾರಿ ಮಾತ್ರ ಉಳಿದಿದೆ. ಅದೇ ಕಾಬೂಲ್ ವಿಮಾನ ನಿಲ್ದಾಣ. ಇಂತಹ ಪರಿಸ್ಥಿತಿಯಲ್ಲಿ, ವಿಮಾನ ನಿಲ್ದಾಣದಲ್ಲಿ ಭಾರೀ ಜನಸಂದಣಿ ಜಮಾಯಿಸಿದೆ. ಏತನ್ಮಧ್ಯೆ, ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಹೋರಾಟಗಾರರು ಹಿಜಾಬ್ ಇಲ್ಲದೆ ಮಹಿಳೆಯರ ಮೇಲೆ ಗುಂಡು ಹಾರಿಸಿದರು ಎಂದು ಟೊಲೊ ನ್ಯೂಸ್ ಉಲ್ಲೇಖಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸೈನಿಕರು ಕೂಡ ಗುಂಡು ಹಾರಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಗುಂಡಿನ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯನ್ನು ತಾಲಿಬಾನ್ ಖಚಿತಪಡಿಸಿಲ್ಲ. ಪ್ರಸ್ತುತ ವಿಮಾನ ನಿಲ್ದಾಣವು ಅಮೆರಿಕದ ಸೈನಿಕರ ನಿಯಂತ್ರಣದಲ್ಲಿದೆ.


COMMERCIAL BREAK
SCROLL TO CONTINUE READING

ಕಾಬೂಲ್ ತೊರೆಯಲು ಯತ್ನಿಸುತ್ತಿರುವ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ವಿಸಾ, ಪಾಸ್ಪೋರ್ಟ್ ಅಥವಾ ಟಿಕೆಟ್ ಇಲ್ಲದೆಯೇ ಕಾಬೂಲ್ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಾರೆ. ಮೊಬೈಲ್ ರಿಚಾರ್ಜ್ ಮಾಡಲು ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ಜನರು ಇಂಟರ್ನೆಟ್ ಹಾಗೂ ಕಾಲ್ ಕ್ರೆಡಿಟ್ ಅನ್ನು ತುರ್ತು ಪರಿಸ್ಥಿತಿಗಾಗಿ ಉಳಿಸುತ್ತಿದ್ದಾರೆ. ಕಾಬೂಲ್ ರಸ್ತೆಗಳಲ್ಲಿ ತಾಲಿಬಾನ್ (Taliban)ಹೋರಾಟಗಾರರು (Taliban Terrorists) ಅಲೆದಾಡುತ್ತಿದ್ದಾರೆ. ಹಲವೆಡೆ ಲೂಟಿಯ ವರದಿಗಳು ಕೇಳಿ ಬರುತ್ತಿವೆ. ಆಗಸ್ಟ್ 17 ರಂದು ಬೆಳಿಗ್ಗೆ 8 ಗಂಟೆಯವರೆಗೆ ಸಾಮಾನ್ಯ ನಾಗರಿಕರನ್ನು ಗೃಹ ಬಂಧನದಲ್ಲಿರಲು ಕೋರಲಾಗಿದೆ.


Afghanistan: ತಾಲಿಬಾನ್ ಸರ್ಕಾರ ರಚನೆ; ಕಾಬೂಲ್‌ನಿಂದ ವಾಣಿಜ್ಯ ವಿಮಾನ ಹಾರಾಟ ನಿಷೇಧ


ಅಪಾಯಕಾರಿ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ ತಾಲಿಬಾನ್
ಏತನ್ಮಧ್ಯೆ ಅಫ್ಘಾನಿಸ್ಥಾನದ ಜೈಲುಗಳಲ್ಲಿ ಬಂದಿಯಾಗಿರುವ ಅಪಾಯಕಾರಿ ಅಪರಾಧಿಗಳನ್ನು ಹಾಗೂ ಉಗ್ರರನ್ನು ತಾಲಿಬಾನ್ ಬಂಧಮುಕ್ತಗೊಳಿಸಿದೆ. ಆದರೆ, ಬಲವಂತವಾಗಿ ಯಾರ ಮನೆಗೂ ಕೂಡ ಪ್ರವೇಶಿಸದಂತೆ ತನ್ನ ಯೋಧರಿಗೆ ತಾಲಿಬಾನ್ ಕಟ್ಟುನಿಟ್ಟಿನ ಆದೇಶ ನೀಡಿದೆ. 


ಇದನ್ನೂ ಓದಿ-ತಾಲಿಬಾನ್ ಮುಂದೆ ಮಂಡಿಯೂರಿದ ಅಫ್ಘಾನಿಸ್ತಾನ, ದೇಶ ತೊರೆದ ಅಧ್ಯಕ್ಷ Ashraf Ghani


ಏರ್ಪೋರ್ಟ್ ಮೇಲೆ 6 ಸಾವಿರ ಸೈನಿಕರನ್ನು ನಿಯೋಜಿಸಿದ ಅಮೇರಿಕಾ
ಈ ಕುರಿತು ಹೇಳಿಕೆ ನೀಡಿರುವ ಅಮೇರಿಕಾ, ಅಫ್ಘಾನಿಸ್ತಾನ್ ಏರ್ಪೋರ್ಟ್ ನಲ್ಲಿ 6 ಸಾವಿರ ಸೈನಿಕರನ್ನು ನಿಯೋಜಿಸಿರುವುದಾಗಿ ಹೇಳಿದೆ. ನಾಗರಿಕರು ಸುರಕ್ಷಿತವಾಗಿ ಹೊರ ಹೋಗುವುದನ್ನು ಸುನಿಶ್ಚಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೇರಿಕಾ ಹೇಳಿದೆ. ಪ್ರಸ್ತುತ ಕಾಬೂಲ್ ಏರ್ಪೋರ್ಟ್ ನಲ್ಲಿ ನೂಕುನುಗ್ಗಲಿನ ಸ್ಥಿತಿ ಇದೆ. ದೇಶವನ್ನು ತೊರೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಏರ್ಪೋರ್ಟ್ ತಲುಪಿದ್ದಾರೆ. ಇವರಲ್ಲಿ ಹಲವರು ಯಾವುದೇ ಲಗೇಜ್ ಇಲ್ಲದೆ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. 


ಇದನ್ನೂ ಓದಿ-ತಾಲಿಬಾನ್ ಶ್ರೀಮಂತಿಕೆ ಎಷ್ಟು?, ಭಯೋತ್ಪಾದಕ ಸಂಘಟನೆಗೆ ಬರುವ ಹಣದ ಮೂಲ ಯಾವುದು ಗೊತ್ತೇ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ