Afghanistan Crisis: ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ (Taliban) ಆಕ್ರಮಿಸಿಕೊಂಡಿದೆ. ಈ ಕುರಿತಾದ ಮೂಲಗಳನ್ನು ನಂಬುವುದಾದರೆ, ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ (Ashraf Ghani) ಹಾಗೂ ಉಪಾಧ್ಯಕ್ಷ ಅಮರುಲ್ಲಾ ಸಾಲೆಹ್ (Amrullah Saleh) ದೇಶವನ್ನು ತೊರೆದು ಕಜಾಕಿಸ್ತಾನಕ್ಕೆ ರವಾನೆಯಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಭಾರತ ಸೇರಿದಂತೆ ಇತರೆ ರಾಷ್ಟ್ರಗಳು ತಮ್ಮ ತಮ್ಮ ದೇಶದ ನಾಗರಿಕರ ರಕ್ಷಣೆಯಲ್ಲಿ ತೊಡಗಿವೆ.
Breaking - Sources said President Ghani has left the country. pic.twitter.com/4bOgsSlzRR
— TOLOnews (@TOLOnews) August 15, 2021
ಯಾವುದೇ ಷರತ್ತಿಲ್ಲದೆ ಸರ್ಕಾರ ಸರೆಂಡರ್
ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, 'ಆಫ್ಘಾನಿಸ್ತಾನದ ಕೇಂದ್ರ ಸರ್ಕಾರ ಬೇಷರತ್ತಾಗಿ ಶರಣಾಗಬೇಕು ಎಂದು ನಾವು ಬಯಸಿದ್ದೆವು ಮತ್ತು ಅದು ಸಂಭವಿಸಿದೆ' ಎಂದಿದ್ದಾರೆ. ಭಾನುವಾರ ರಾಷ್ಟ್ರಪತಿ ನಿವಾಸದಲ್ಲಿ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆಯೇ ಬಳಿಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಯುಗ ಮರುಕಳಸಿದಂತಾಗಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ತಾಲಿಬಾನ್ ಮುಖಂಡ ಅಲಿ ಅಹ್ಮದ್ ಜಲಾಲಿ ಆಫ್ಘಾನಿಸ್ತಾನದ ಮುಂದಿನ ರಾಷ್ಟ್ರಪತಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಈ ಕುರಿತು ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.
ಅಮೇರಿಕಾದ ವಾಯುಸೇನೆಯ ನೆರವು ಕೂಡ ಕೆಲಸಕ್ಕೆ ಬಂದಿಲ್ಲ
ಈ ಕುರಿತು ಹೇಳಿಕೆ ನೀಡಿದ್ದ ಆಫ್ಘಾನಿಸ್ಥಾನದ ಮೂವರು ಅಧಿಕಾರಿಗಳು, ತಾಲಿಬಾನ್, ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ಕಲಾಕನ್, ಕಾರಾಬಾಗ್ ಹಾಗೂ ಪಘಮಾನ್ ಪ್ರಾಂತ್ಯಗಳಲ್ಲಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ತನ್ನ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿ ದೇಶದ ದೊಡ್ಡ ಭಾಗವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದಿದ್ದರು. ಯುಎಸ್ ಬೆಂಬಲದ ಹೊರತಾಗಿಯೂ ಕೂಡ ಆಫ್ಘಾನ್ ಭದ್ರತಾ ಪಡೆಗಳನ್ನು ಓಡಿಸಿ ತಾಲಿಬಾನ್ ಎಲ್ಲರನ್ನು ಅಚ್ಚರಿಗೊಳಿಸಿದೆ. ಅಮೇರಿಕಾ ಶತಕೋಟಿ ಡಾಲರ್ ಖರ್ಚು ಮಾಡಿದರೂ ಕೂಡ ಭದ್ರತಾ ಪಡೆಗಳ ಸ್ಥಿತಿ ಏಕೆ ಹದಗೆಟ್ಟಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಕೆಲವು ದಿನಗಳ ಹಿಂದೆ, ಅಮೆರಿಕಾದ ಸೇನೆ, ರಾಜಧಾನಿಯನ್ನು ತಾಲಿಬಾನ್ ಒಂದು ತಿಂಗಳೊಳಗೆ ವಶಕ್ಕೆ ಪಡೆಯುವ ಮುನ್ಸೂಚನೆ ನೀಡಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Afghanistan Crisis: ತಾಲಿಬಾನಿಗಳ ಮುಂದೆ ಕಾಬೂಲ್ ಸರೆಂಡರ್! ಅಧಿಕಾರ ಹಸ್ತಾಂತರಕ್ಕೆ ಮಾತುಕತೆ ಆರಂಭ !
ಏರ್ ಇಂಡಿಯಾ ಪೈಲಟ್ ಕೂಡ ತಮ್ಮ ಪ್ರಯಾಣ ಆರಂಭಿಸಿದ್ದಾರೆ
ಕಾಬುಲ್ ಹಾಗೂ ಅಫ್ಘಾನಿಸ್ತಾನದಲ್ಲಿರುವ ತನ್ನ ನೂರಾರು ಅಧಿಕಾರಿಗಳನ್ನು ಹಾಗೂ ನಾಗರಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಭಾರತ ಸರ್ಕಾರ ತುರ್ತು ಪ್ಲಾನ್ ಸಿದ್ಧಪಡಿಸಿದೆ. ಆಫ್ಥಾನಿಸ್ತಾನ್ ದಲ್ಲಿ ತಾಲಿಬಾನ್ ಪ್ರವೇಶದ ಸುದ್ದಿಗಳು ಪ್ರಕಟವಾಗುತ್ತಲೇ ಅಲ್ಲಿನ ಜನರಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಕಾಬೂಲ್ ನಿಂದ ದೆಹಲಿಗೆ ಏರ್ ಇಂಡಿಯಾ ವಿಮಾನ ಸುಮಾರು 129 ಯಾತ್ರಿಗಳನ್ನು ಹೊತ್ತು ತರುತ್ತಿದೆ. ಕಾಬೂಲ್ ನ ಭಾರತೀಯ ದೂತಾವಾಸದಲ್ಲಿರುವ ಅಧಿಕಾರಿಗಳನ್ನು ಹಾಗೂ ಭಾರತೀಯ ನಾಗರಿಕರ ಪ್ರಾಣವನ್ನು ಯಾವ ಕಾರಣಕ್ಕೂ ಕೂಡ ಅಪಾಯಕ್ಕೆ ತಳ್ಳುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ.
ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದ ತಾಲಿಬಾನ್
IAFನ -17 ವಿಮಾನ ಕೂಡ ಸಿದ್ಧಗೊಂಡಿದೆ
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಾಯು ಸೇನೆಯ ವಿಮಾನ c-17, ಗ್ಲೋಬ್ ಮಾಸ್ಟರ್ ನಲ್ಲಿರುವ ಒಂದು ಸಮೂಹದ ಜನರನ್ನು ಹಾಗೂ ನೌಕರರನ್ನು ರಕ್ಷಿಸಲು ಸಿದ್ಧಗೊಂಡಿದೆ. ಕಾಬೂಲ್ ನಿಂದ ದೊರೆಯುತ್ತಿರುವ ವರದಿಗಳ ಪ್ರಕಾರ, ತಾಲಿಬಾನ್ ಯೋಧರು ನಗರದ ಹೊರಭಾಗದಲ್ಲಿ ಈಗಾಗಲೇ ಎಂಟ್ರಿ ನೀಡಿದ್ದಾರೆ ಎನ್ನಲಾಗಿದ್ದು, ಇದರಿಂದ ಅಲ್ಲಿರುವ ಜನರ ಮನದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ-Afghanistan: ಕಾಬೂಲ್ ಅನ್ನು ನಾಲ್ಕು ದಿಕ್ಕುಗಳಿಂದಲೂ ಸುತ್ತುವರೆದಿರುವ ತಾಲಿಬಾನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ