ಸಿಯೋಲ್: ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಸಂಸ್ಥೆಯಲ್ಲಿ ಉತ್ತರ ಕೊರಿಯಾಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉತ್ತರ ಕೊರಿಯಾ ಅಣ್ವಸ್ತ್ರಗಳ ಮೂಲಕ ಯುಎಸ್ ಅನ್ನು ನಾಶ ಮಾಡುವುದಾಗಿ ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಯು.ಎಸ್. ಅಧ್ಯಕ್ಷ ಟ್ರಂಪ್, ವಿಶ್ವಸಂಸ್ಥೆಯಲ್ಲಿ ತನ್ನ ಮತ್ತು ತನ್ನ ಮಿತ್ರ ಪಕ್ಷಗಳ ಮೇಲೆ ಆಕ್ರಮಣ ಮಾಡಿದರೆ, ಯು ಎಸ್ ಉತ್ತರ ಕೊರಿಯಾವನ್ನು ಸಂಪೂರ್ಣ ನಾಶಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.  ಇದಕ್ಕೆ ಉತ್ತರ ನೀಡಿರುವ ಉತ್ತರ ಕೊರಿಯಾವು ಶತ್ರುಗಳು ಯುದ್ಧದ ಸ್ವಲ್ಪ ಮುನ್ಸೂಚನೆ ನೀಡಿದರು, ಮುಂಚಿತವಾಗಿ ದಾಳಿ ನಡೆಸಿ ಅವರನ್ನು ಮುಗಿಸಿ ಬಿಡುವುದಾಗಿ ಎಚ್ಚರಿಕೆ ನೀಡಿದೆ.


ಪ್ರಪಂಚದ ಪ್ರತ್ಯೇಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಉತ್ತರ ಕೊರಿಯಾ, ಅಮೇರಿಕಾವನ್ನು ನಾಶ ಪಡಿಸಲು ಆಕ್ರಮಣಕಾರಿಯಾದ ಪರಮಾಣು ಶಕ್ತಿಯನ್ನು ಹೊಂದಿದ್ದು, ಯುನೈಟೆಡ್ ಸ್ಟೇಟ್ಸ್ ನ ಮುಖ್ಯ ಭೂಭಾಗವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ ಎಂದೂ ಹೇಳಿದೆ. 


ಉತ್ತರ ಕೊರಿಯಾವು ಸೆಪ್ಟೆಂಬರ್ ನಲ್ಲಿ ರಾಕೆಟ್ ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಒಂದು ಸಣ್ಣ ಹೈಡ್ರೋಜನ್ ಬಾಂಬನ್ನು ಪರೀಕ್ಷಿಸಿದೆ. ವಿಶ್ವ ಸಮುದಾಯದ ಕಿರುಕುಳಗಳ ನಡುವೆಯೂ ಅತ್ಯಂತ ಬಲಶಾಲಿ ಪರಮಾಣು ದೇಶವಾಗಿ ಹೊರಹೊಮ್ಮಿದೆ. ದಿಗ್ಬಂಧನಗಳು ಮತ್ತು ಯುದ್ಧಕ್ಕೆ ನಾವು ಅಂಜುವುದಿಲ್ಲ ಎಂದು ಉತ್ತರ ಕೊರಿಯಾ ತಿಳಿಸಿದೆ.


ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾದ ವಿರುದ್ಧ ಯುನೈಟೆಡ್ ನೇಷನ್ಸ್ನಲ್ಲಿ ಬಲವಾದ ಭಾಷೆಯನ್ನು ಬಳಸಿದ್ದಾರೆ, ಅವರು ಉತ್ತರ ಕೊರಿಯಾವನ್ನು ಸಂಪೂರ್ಣವಾಗಿ ನಾಶಮಾಡುವ ಬಗ್ಗೆ ಎಚ್ಚರಿಸಿದ್ದಾರೆ. ಎಚ್ಚರಿಕೆಗಳ ಮೂಲಕ ಉತ್ತರ ಕೊರಿಯಾದ ನಿರ್ಧಾರವನ್ನು ಬದಲಾಯಿಸುವುದು ಯುಎಸ್ ನ ಹಗಲುಗನಸು ಎಂದು ಉತ್ತರ ಕೊರಿಯಾ ವ್ಯಂಗ್ಯವಾಡಿದೆ.