Alert: Coronavirus ನಿಂದ ಪುರುಷರಲ್ಲಿ ನಪುಂಸಕತ್ವ ಬರುವ ಸಾಧ್ಯತೆ ಎಂದ ಅಧ್ಯಯನ
Coronavirus Alert - ಈ ಕುರಿತು ನಡೆಸಲಾಗಿರುವ ಅಧ್ಯಯನವೊಂದು ಕೊರೊನಾ ವೈರಸ್ ಪುರುಷರ ಖಾಸಗಿ ಅಂಗಗಳ ಮೇಲೆ ಪ್ರಭಾವ ಬೀರುತ್ತಿದ್ದು, ಕೊವಿಡ್-19 ಗೆ ಸೊಂಕಿತರಾಗಿರುವ ಪುರುಷರಲ್ಲಿ ನಪುಂಸಕತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ನವದೆಹಲಿ: Coronavirus Alert - ಕೊರೊನಾ ವೈರಸ್ ನಿಂದ ಚೇತರಿಸಿಕೊಂಡ ಜನರರಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಇತ್ತೀಚೆಗಷ್ಟೇ ನಡೆಸಲಾಗಿರುವ ಒಂದು ಅಧ್ಯಯನ ಪುರುಷರ ಖಾಸಗಿ ಅಂಗದ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದ ಪುರುಷರಲ್ಲಿ ನಪುಂಸಕತ್ವ ಬರುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಕೊರೊನಾ ಲಸಿಕೆ ಹಾಕಿಸಿಕೊಂಡವರಲ್ಲಿ ನಪುಂಸಕತ್ವ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗಿತ್ತು. ಆದರೆ, ಬಳಿಕ ವೈದ್ಯರು ಆ ಕುರಿತಾದ ಸಾಧ್ಯತೆಯನ್ನು ಸಂಪೂರ್ಣ ಅಲ್ಲಗಳೆದಿದ್ದಾರೆ.
ಯುನಿವರ್ಸಿಟಿ ಆಫ್ ಮಿಯಾಮಿ (University Of Miami) ಅಧ್ಯಯನದಲ್ಲಿ ಈ ಅಂಶ ಬಹಿರಂಗ
ಯುನಿವರ್ಸಿಟಿ ಆಫ್ ಮಿಯಾಮಿ ಅಧ್ಯಯನಕಾರರು ವರ್ಲ್ಸ್ ಜರ್ನಲ್ ಆಫ್ ಮೆನ್ಸ್ ಹೆಲ್ತ್ ನಲ್ಲಿ ಪ್ರಕಟಿಸಿರುವ ಅಧ್ಯಯನದ ಪ್ರಕಾರ, ವಿಜಾನಿಗಳು ಕೊರೊನಾ ವೈರಸ್ ನಿಂದ ಸೋಂಕಿತರಾಗಿರುವ ಹಾಗೂ ಸೋಂಕಿತರಾಗಲಿರುವ ಪುರುಷರಲ್ಲಿ ಕೋಶಗಳಲ್ಲಿ ಅಂತರ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-ನಿಮ್ಮ ಜೀವನದ ಈ ವಿಚಾರಗಳ ಬಗ್ಗೆ ಯಾವತ್ತೂ ಇನ್ನೊಬ್ಬರೊಂದಿಗೆ ಚರ್ಚಿಸದಿರಿ
ಪುರುಷರಲ್ಲಿ ಯಾಕೆ ಕಂಡು ಬರುತ್ತಿದೆ ನಪುಂಸಕತೆ
ಅಧ್ಯಯನದ ಪ್ರಕಾರ, ಕೊರೊನಾ ವೈರಸ್(Coronavirus) ಶರೀರದಲ್ಲಿ ನರಗಳಿಗೆ ಹಾನಿ ತಲುಪುಸುತ್ತದೆ, ಇದರಿಂದ ದೇಹದ ಹಲವು ಅಂಗಗಳಿಗೆ ರಕ್ತ ಸಂಚಾರ ಕುಂಠಿತಗೊಳ್ಳುತ್ತದೆ (Post Corona Effect). ಈ ಅಂಗಗಳಲ್ಲಿ ಪುರುಷರ (Men) ಖಾಸಗಿ ಅಂಗ ಕೂಡ ಶಾಮೀಲಾಗಿದೆ. ರಕ್ತ ಸಂಚಾರ ಕುಂಠಿತಗೊಳ್ಳುವುರರಿಂದ ಪುರುಷರಲ್ಲಿ ಇರೆಕ್ಟೈಲ್ ಡಿಸ್ಫಂಕ್ಷನ್ ಸಮಸ್ಯೆ ಎದುರಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ- Garlic-Pistachios Benefits : ಕೊರೋನಾ ಟೈಂನಲ್ಲಿ ಪುರುಷರು ಈ ಎರಡನ್ನ ತಪ್ಪದೇ ಸೇವಿಸಿ : ಇಲ್ಲಿದೆ ಪ್ರಯೋಜನಗಳು!
ಕೊರೊನಾ ಸೋಂಕಿನ ಬಳಿಕ ಕಾಣಿಸಿಕೊಂಡ ನಪುನ್ಸತ್ವದ (Post Covid Problems) ಸಮಸ್ಯೆ
ಈ ಅಧ್ಯಯನದ ನೇತೃತ್ವವನ್ನು ಸಹಾಯಕ ಪ್ರಾಧ್ಯಾಪಕ ಮತ್ತು ಮಿಯಾಮಿ ವಿಶ್ವವಿದ್ಯಾಲಯದ ಮಿಲ್ಲರ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂತಾನೋತ್ಪತ್ತಿ ಮೂತ್ರಶಾಸ್ತ್ರ ಕಾರ್ಯಕ್ರಮದ ನಿರ್ದೇಶಕ ರಂಜಿತ್ ರಾಮಾಸಾಮಿ ವಹಿಸಿದ್ದರು. ಡಾ. ರಂಜಿತ್ ರಮಾಸಾಮಿ ಹೇಳುವ ಪ್ರಕಾರ, 'ಕೋವಿಡ್ (Covid-19) ಸೋಂಕಿಗೆ ಒಳಗಾದ ನಂತರ ಪುರುಷರು ಇರೆಕ್ಟೈಲ್ ಡಿಸ್ಫಂಕ್ಷನ್ (ನಪುಂಸಕತೆ) ಬಗ್ಗೆ ದೂರು ನೀಡಲು ಪ್ರಾರಂಭಿಸಿದ್ದನ್ನು ನಾವು ನೋಡಿದ್ದೇವೆ ಮತ್ತು ಈ ನಪುಂಸಕತೆ ವೈರಸ್ ಪ್ರತಿಕೂಲ ಪರಿಣಾಮ ಇರುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.