Alibaba Founder Jack Ma Found - ಬಿಜಿಂಗ್: ಚೀನಾದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಜ್ಯಾಕ್ ಮಾ ಸುಮಾರು ಎರಡು ತಿಂಗಳ ಕಾಲ ಕಾಣೆಯಾದ ನಂತರ ಇದ್ದಕ್ಕಿದ್ದಂತೆ ವಿಶ್ವದ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಈ ಕುರಿತು ಚೀನಾದ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಜ್ಯಾಕ್ ಮಾ ಚೀನಾದ 100 ಗ್ರಾಮೀಣ ಶಿಕ್ಷಕರೊಂದಿಗೆ ಆನ್‌ಲೈನ್‌ನಲ್ಲಿ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ.


COMMERCIAL BREAK
SCROLL TO CONTINUE READING

ಎರಡು ತಿಂಗಳು ನಾಪತ್ತೆಯಾಗಿದ್ದ ಮಾ
ಚೀನಾ ಅಧ್ಯಕ್ಷ Xi Jinping ಅವರೊಂದಿಗಿನ ವಿವಾದದ ಬಳಿಕ ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ (Jack Ma) ನಾಪತ್ತೆಯಾಗಿದ್ದರು. ಬಳಿಕ ಇದೀಗ ಸುಮಾರು ಎರಡು ತಿಂಗಳು ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದಾದ ಬಳಿಕ ಚೀನಾದ ಕಮ್ಯೂನಿಸ್ಟ್ ಸರ್ಕಾರ ಅವರನ್ನು ಬಂಧಿಸಿ ಗೃಹಬಂಧನದಲ್ಲಿರಿಸಿರಬೇಕು ಎಂಬ ಊಹಾಪೋಹಗಳು ಕೇಳಿಬಂದಿದ್ದವು.


ಇಂಗ್ಲಿಷ್ ಶಿಕ್ಷಕರಾಗಿದ್ದ ಜಾಕ್ ಬಳಿಕ ಉದ್ಯಮಿಯಾಗಿದ್ದರು
ಜಾಕ್  ಮಾ ವಿಡಿಯೋ ಹಂಚಿಕೊಂಡಿರುವ ಗ್ಲೋಬಲ್ ಟೈಮ್ಸ್ (Global Times) ಅವರನ್ನು ಇಂಗ್ಲಿಷ್  ಶಿಕ್ಷಕನಿಂದ ಉದ್ಯಮಿ ಎಂದು ಹೇಳಿದೆ. ಈ ಕುರಿತು ಬರೆದಿರುವ ಗ್ಲೋಬಲ್ ಟೈಮ್ಸ್, 'ಇಂಗ್ಲಿಷ್ ಶಿಕ್ಷಕರಾಗಿ ಬಳಿಕ ಉದ್ಯಮಿಯಾಗಿರುವ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಬುಧವಾರ ವಿಡಿಯೋ ಲಿಂಕ್ ಮಾಧ್ಯಮದ ಮೂಲಕ ದೇಶದ ಸುಮಾರು 100 ಜನ ಗ್ರಾಮೀಣ ಶಿಕ್ಷಕರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಅವರು ಕೊವಿಡ್-19 ಮಹಾಮಾರಿಯ ಅಂತ್ಯದ ಬಳಿಕ ನಾವು ಪುನಃ ಭೇಟಿಯಾಗೋಣ ಎಂದು ಅವರು ಹೇಳಿದ್ದಾರೆ' ಎಂದಿದೆ.


Xi Jinping
ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕಳೆದ ವರ್ಷ ಶಾಂಘೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜ್ಯಾಕ್ ಮಾ ಸರ್ಕಾರವನ್ನು ಟೀಕಿಸಿದ್ದರು. ಅವರು ಚೀನಾದ 'ಬಡ್ಡಿ ತಿನ್ನುವ' ಹಣಕಾಸು ನಿಯಂತ್ರಕರು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಗುರಿಯಾಗಿಸಿದ್ದರು. ವ್ಯವಹಾರದಲ್ಲಿ ಹೊಸ ಪ್ರಯತ್ನಗಳನ್ನು  ಪ್ರಾರಂಭಿಸುವದನ್ನು ನಿಗ್ರಹಿಸಲು ಪ್ರಯತ್ನ ಮಾಡುವ ಇಂತಹ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ಜ್ಯಾಕ್ ಮಾ ಸರ್ಕಾರದಿಂದ ಒತ್ತಾಯಿಸಿದ್ದರು. ಅವರು ಜಾಗತಿಕ ಬ್ಯಾಂಕಿಂಗ್ ನಿಯಮಗಳನ್ನು 'ಓಲ್ಡ್ ಪೀಪಲ್ಸ್ ಕ್ಲಬ್' ಎಂದೂ ಕೂಡ ಟೀಕಿಸಿದ್ದರು.


ಇದನ್ನು ಓದಿ-Jack Ma Missing: China ಕೋಟ್ಯಾಧೀಶ Jack Ma ನಾಪತ್ತೆ, ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರಂತೆ


ಹಲವು ರೀತಿಯ ಬ್ಯಾನ್ ವಿಧಿಸಲಾಗಿದೆ
ಜ್ಯಾಕ್ ಮಾ (ಎಲ್ಲರೂ ಕರೋನಾ ಸಂಕಷ್ಟದಲ್ಲಿದ್ದಾಗ ಚೀನಾ ಬಿಲಿಯನೇರ್‌ಗಳ ಸಂಪತ್ತು ಏಕೆ ಹೆಚ್ಚುತ್ತಲೇ ಇತ್ತು?


ದೇಶ ತೊರೆಯುವ ಎಚ್ಚರಿಕೆ
ಜ್ಯಾಕ್ ಮಾ ಅವರ ಅಲಿಬಾಬಾ ಗ್ರೂಪ್ ವಿರುದ್ಧ ನಡೆಯುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೆ ಚೀನಾವನ್ನು ಬಿಡಬೇಡಿ ಎಂದು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಸರ್ಕಾರ ಹೇಳಿತ್ತು.ಇದರ ನಂತರ, ಜ್ಯಾಕ್ ಮಾ ನವೆಂಬರ್‌ನಲ್ಲಿ ತಮ್ಮ ಟಿವಿ ಶೋ 'ಆಫ್ರಿಕಾ ಬ್ಯುಸಿನೆಸ್ ಹೀರೋಸ್' ಫೈನಲ್‌ಗೆ ಮುನ್ನ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಅಷ್ಟೇ ಅಲ್ಲ, ಅವರ ಚಿತ್ರವನ್ನೂ ಪ್ರದರ್ಶನದಿಂದ ತೆಗೆದುಹಾಕಲಾಗಿದೆ. ವೇಳಾಪಟ್ಟಿ ವಿವಾದದಿಂದಾಗಿ ಜ್ಯಾಕ್ ಮಾ ನ್ಯಾಯಾಧೀಶರ ಸಮಿತಿಯ ಭಾಗವಲ್ಲ ಎಂದು ಅಲಿಬಾಬಾ ಗ್ರೂಪ್ ವಕ್ತಾರರು ತಿಳಿಸಿದ್ದಾರೆ. ಆದರೂ ಕೂಡ ಫೈನಲ್‌ಗೆ ಹಲವು ವಾರಗಳ ಮೊದಲು, ಜ್ಯಾಕ್ ಮಾ ಅವರು ಟ್ವೀಟ್ ಮಾಡಿದ್ದು, ಎಲ್ಲ ಸ್ಪರ್ಧಿಗಳನ್ನು ಭೇಟಿಯಾಗಲು ಕಾತರರಾಗಿರುವುದಾಗಿ ಹೇಳಿದ್ದಾರೆ. 


ಇದನ್ನು ಓದಿ-ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಅಲಿಬಾಬಾ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದ ಜ್ಯಾಕ್ ಮಾ


ಈ ಮೊದಲು ಕೂಡ ಇಂತಹ ಘಟನೆಗಳು ನಡೆದಿದ್ದವು
ಜಾಕ್ ಮಾ ಅವರ ಸಾಮಾಜಿಕ ಖಾತೆಗಳ ಮೇಲೂ ಕೂಡ ಯಾವುದೇ ಚಟುವಟಿಕೆ ಕಂಡುಬಂದಿಲ್ಲ. ಇದಕ್ಕೂ ಮೊದಲು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯರಾಗಿದ್ದರು. ಸರ್ಕಾರದ ವಿರುದ್ಧ ಧ್ವನಿ ಎತ್ತಿದವರು ಕಣ್ಮರೆಯಾದ ಘಟನೆ ಇದೆ ಮೊದಲಲ್ಲ. ರಾಷ್ಟ್ರಪತಿ ಜಿನ್ ಪಿಂಗ್ ಅವರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಉದ್ಯಮಿ ರೇನ್ ಝಿಕಿಯಾಂಗ್ ಕೂಡ ನಾಪತ್ತೆಯಾಗಿದ್ದರು. ಕೊರೊನಾ ಮಹಾಮಾರಿಯ ವಿಷಯದಲ್ಲಿ ಅವರು ಜಿನ್ ಪಿಂಗ್ ಅವರನ್ನು ಟೀಕಿಸಿದ್ದರು. ಬಳಿಕ ಅವರನ್ನು 18 ವರ್ಷಗಳ ಕಾಲ ಜೈಲಿಗಟ್ಟಲಾಗಿದೆ. ಚೀನಾದ ಮತ್ತೋರ್ವ ಕೋಟ್ಯಾಧೀಶ ಶಿಯಾನ್ ಝಿಆನ್ಹುವಾ ಕೂಡ 2017 ರಿಂದ ಗೃಹಬಂಧನದಲ್ಲಿದ್ದಾರೆ.


ಇದನ್ನು ಓದಿ- ಗಡಿ ಉದ್ವಿಗ್ನತೆ ನಡುವೆಯೂ ಮತ್ತೆ ಒಂದೇ ವೇದಿಕೆಯಲ್ಲಿ ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಜಿಂಗ್ಪಿನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.