Food Crisis: ಮುಂದಿನ 27 ವರ್ಷಗಳಲ್ಲಿ ಇಡೀ ವಿಶ್ವದಲ್ಲಿನ ಆಹಾರವೇ ಮುಗಿದು ಹೋಗಲಿದೆಯಂತೆ!
The World Count Report: 2017ಕ್ಕೆ ಹೋಲಿಸಿದರೆ 2050ರಲ್ಲಿ ಆಹಾರದ ಬೇಡಿಕೆ ಶೇ.70ರಷ್ಟು ಹೆಚ್ಚಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಧಾನ್ಯ ಮುಗಿದ ನಂತರ ಮಾಂಸ ತಿನ್ನುವುದು ಕೂಡ ಒಂದು ಆಯ್ಕೆಯಾಗಿ ಉಳಿಯುವುದಿಲ್ಲ ಎನ್ನಲಾಗಿದೆ.
ನವದೆಹಲಿ: Food On Earth - ಎರಡು ಹೊತ್ತಿನ ಊಟಕ್ಕೆ ಮನುಷ್ಯ ಏನೆಲ್ಲಾ ಕಸರತ್ತು ಮಾಡುವುದಿಲ್ಲ. ಅದಕ್ಕಾಗಿ ಆತ ತನ್ನ ಹಗಲಿರುಳು ದುಡಿಯುತ್ತಾನೆ. ತನ್ನ ಕುಟುಂಬಕ್ಕೆ ಎರಡು ಹೊತ್ತಿನ ಊಟ ಸಿಗಬೇಕು ಎಂಬುವುದೇ ಅದರ ಹಿಂದಿನ ಉದ್ದೇಶವಾಗಿರುತ್ತದೆ. ಆದರೆ, ಈ ಆಹಾರ ಇನ್ನು ಕೆಲವೇ ವರ್ಷಗಳಲ್ಲಿ ಮುಗಿದು ಹೋಗಲಿದೆ ಮತ್ತು ವಿಶ್ವದಲ್ಲಿ ಭಾರಿ ಧಾನ್ಯ ಸಂಕಟ ಎದುರಾಗಲಿದ್ದು, ಎರಡು ಹೊತ್ತಿನ ಊಟ ಬಿಡಿ, ಒಪ್ಪತ್ತಿನ ಊಟಕ್ಕೂ ಕೂಡ ಮನುಷ್ಯ ಪರದಾಡುವ ಸ್ಥಿತಿ ಎದುರಾಗಲಿದೆ ಎನ್ನಲಾಗಿದೆ. ಕೋಟ್ಯಾಂತರ ರೂಪಾಯಿ ಹಣವಿದ್ದರು ಕೂಡ ಮನುಷ್ಯ ಆಹಾರ ಖರೀದಿಸಲು ಪರದಾಡುವ ಸ್ಥಿತಿ ಬಂದೊದಗಲಿದೆ ಎನ್ನಲಾಗಿದೆ.
2050 ರ ವೇಳೆಗೆ ಧಾನ್ಯವು ಖಾಲಿಯಾಗುತ್ತದೆ
ಸಾಮಾಜಿಕ ಮತ್ತು ಆರ್ಥಿಕ ಡೇಟಾ ಮೇಲೆ ನಿಗಾ ಇಡುವ ಸಂಸ್ಥೆಯಾದ ದಿ ವರ್ಲ್ಡ್ ಕೌಂಟ್ ವರದಿಯ ಪ್ರಕಾರ, ಇಡೀ ವಿಶ್ವದಲ್ಲಿ ಇಂತಹ ಧಾನ್ಯ ಬಿಕ್ಕಟ್ಟು ಉಂಟಾಗಲಿದ್ದು, 2050 ರ ವೇಳೆಗೆ ಇಡೀ ಜಗತ್ತಿನಲ್ಲಿ ಆಹಾರ ಧಾನ್ಯಗಳು ಭಾರಿ ಕೊರತೆ ಎದುರಾಗಲಿದೆ ಎನ್ನಲಾಗಿದೆ. ತನ್ನ ವರದಿಯನ್ನು ಬಿಡುಗಡೆ ಮಾಡುವುದರ ಜೊತೆಗೆ, ದಿ ವರ್ಲ್ಡ್ ಕೌಂಟ್ ತನ್ನ ವೆಬ್‌ಸೈಟ್‌ನಲ್ಲಿ ಧಾನ್ಯ ಅಂತ್ಯವಾಗುವ ಕೌಂಟ್‌ಡೌನ್ ಕೂಡ ಹಂಚಿಕೊಂಡಿದೆ. ಈ ಕೌಂಟ್‌ಡೌನ್ ಪ್ರಕಾರ, ಭೂಮಿಯಿಂದ ಧಾನ್ಯವು ಕೊನೆಗೊಳ್ಳಲು 27 ವರ್ಷಗಳು ಮಾತ್ರ ಉಳಿದಿವೆ ಎನ್ನಲಾಗಿದೆ.
ಇದನ್ನೂ ಓದಿ-ಟ್ವಿಟರ್ ನಂತರ ಕೋಕಾ-ಕೋಲಾ ಖರೀದಿಗೆ ಮುಂದಾದ ಎಲೋನ್ ಮಸ್ಕ್!
ಧಾನ್ಯ ಬೇಡಿಕೆ ಶೇ.70 ರಷ್ಟು ಹೆಚ್ಚಾಗಲಿದೆ
ದಿ ವರ್ಡ್ ಕೌಂಟ್ ವರದಿಯ ಪ್ರಕಾರ 2050ರವರೆಗೆ ವಿಶ್ವದ ಒಟ್ಟು ಜನಸಂಖ್ಯೆ 1000 ಕೋಟಿ ಗಡಿ ದಾಟಲಿದೆ. ಹೀಗಿರುವಾಗ 2017ಕ್ಕೆ ಹೋಲಿಸಿದರೆ 2050 ರಲ್ಲಿ ಧಾನ್ಯ ಬೇಡಿಕೆ ಶೇ.70ರಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. ಭೂಮಿಯು ಪ್ರತಿ ವರ್ಷ 7500 ಮಿಲಿಯನ್ ಟನ್ ಫಲವತ್ತಾದ ಮಣ್ಣನ್ನು ಕಳೆದುಕೊಳ್ಳುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಜಗತ್ತಿನಲ್ಲಿ ಕಳೆದ 40 ವರ್ಷಗಳಲ್ಲಿ, ಒಟ್ಟು ಭೂಮಿಯ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಇದೇ ವೇಳೆ, ಆಹಾರದ ಬೇಡಿಕೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಮುಂದಿನ 40 ವರ್ಷಗಳಲ್ಲಿ ಭೂಮಿಯ ಜನರ ಆಹಾರದ ಅಗತ್ಯಗಳನ್ನು ಪೂರೈಸಲು, ಕಳೆದ 8 ಸಾವಿರ ವರ್ಷಗಳಲ್ಲಿ ಉತ್ಪಾದನೆಯಾದ ಒಟ್ಟು ಧಾನ್ಯದ ಅಗತ್ಯತೆ ಬೀಳಲಿದೆ ಎನ್ನಲಾಗಿದೆ. ಅಂದರೆ ಒಂದೆಡೆ ವಿಶ್ವದಲ್ಲಿ ಪ್ರತಿ ವರ್ಷ ಫಲವತ್ತಾದ ಭೂಮಿ ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ, ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ-Shocking Video: ಎರಡು ಅಪಾಯಕಾರಿ ಹೆಬ್ಬಾವುಗಳನ್ನು ಭುಜದ ಮೇಲೆ ಹೊತ್ತು ಡಾನ್ಸ್ ಮಾಡಿದ ವ್ಯಕ್ತಿ, ಮುಂದೇನಾಯ್ತು?
ಧಾನ್ಯ ಮುಗಿದ ಬಳಿಕ ಮಾಂಸ ಕೂಡ ಆಯ್ಕೆಯಾಗಿ ಉಳಿಯುವುದಿಲ್ಲ
ದಿ ವರ್ಲ್ಡ್ ಕೌಂಟ್ ವರದಿಯ ಪ್ರಕಾರ ಇಡೀ ವಿಶ್ವದಲ್ಲಿನ ಧಾನ್ಯ ಮುಗಿದುಹೋದ ಬಳಿಕ ಮಾಂಸ ತಿನ್ನುವುದು ಕೂಡ ಒಂದು ಆಯ್ಕೆಯಾಗಿ ಉಳಿಯುವುದಿಲ್ಲ ಎನ್ನಲಾಗಿದೆ. ಏಕೆಂದರೆ ಮಾಂಸವನ್ನು ತಯಾರಿಸಲು ಮೆಕ್ಕೆ ಜೋಳಕ್ಕಿಂತ 75 ಪಟ್ಟು ಹೆಚ್ಚು ಶಕ್ತಿಯ ಅಗತ್ಯವಿರುತ್ತದೆ ಮತ್ತು ಇದನ್ನು ಉತ್ಪಾದಿಸುವುದು ಅಸಾಧ್ಯವಾದ ಕೆಲಸವಾಗಿದೆ. ವರ್ಲ್ಡ್ ಕೌಂಟ್ ತನ್ನ ವರದಿಯಲ್ಲಿ 2030 ರ ವೇಳೆಗೆ ಅಕ್ಕಿಯ ಬೆಲೆ ಶೇ. 130 ರಷ್ಟು ಮತ್ತು ಮೆಕ್ಕೆಜೋಳದ ಬೆಲೆ ಶೇ. 180 ರಷ್ಟು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದೆ. ಅಷ್ಟೇ ಅಲ್ಲ ಪ್ರಸ್ತುತ ಇಡೀ ಜಗತ್ತು ಯಾವ ಅಂಚಿನಲ್ಲಿ ನಿಂತಿದೆ ಎಂದರೆ, ಭವಿಷ್ಯದಲ್ಲಿ ಯುದ್ಧಗಳು ಕೂಡ ಆಹಾರ ಮತ್ತು ನೀರನ್ನು ಆಧರಿಸಿ ನಡೆಯಲಿವೆ ಎಂದು ಅದು ಹೇಳಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.