20 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್: ಶಿಕ್ಷಕರ ನಿರ್ಲಕ್ಷ್ಯದಿಂದ ಶಾಲೆಗೆ ಭಾರಿ ನಷ್ಟ!

ಕೊಳಕ್ಕೆ ಬರುವ ನೀರನ್ನು ನಿರಂತರವಾಗಿ ಹೊರಬಿಟ್ಟರೆ ಕೊರೊನಾ ವೈರಸ್‍ನಿಂದ ಸುರಕ್ಷತೆ ಕಾಯ್ದುಕೊಳ್ಳಬಹುದು ಎಂದು ಆಲೋಚಿಸಿದ್ದೇ ಶಿಕ್ಷಕರ ಮಹಾಎಡವಟ್ಟಿಗೆ ಕಾರಣವಾಗಿದೆ.

Written by - Puttaraj K Alur | Last Updated : Apr 23, 2022, 06:46 AM IST
  • ಶಿಕ್ಷಕರ ಮಹಾಎಡವಟ್ಟಿಗೆ ಶಾಲೆಗೆ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್
  • ಕೊಳದಲ್ಲಿ ತಾಜಾ ನೀರು ಇದ್ದರೆ ಕೊರೊನಾ ಬರುವುದಿಲ್ಲವೆಂದು ಆಲೋಚಿಸಿದ್ದ ಶಿಕ್ಷಕ
  • ಕಳೆದ ಜೂನ್‌ನಿಂದ ಸೆಪ್ಟೆಂಬರ್ ಆರಂಭದವರೆಗೆ ನಲ್ಲಿ ಓಪನ್ ಮಾಡಿ ನೀರು ಹರಿಬಿಟ್ಟಿರುವ ಶಿಕ್ಷಕ
20 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್: ಶಿಕ್ಷಕರ ನಿರ್ಲಕ್ಷ್ಯದಿಂದ ಶಾಲೆಗೆ ಭಾರಿ ನಷ್ಟ! title=
20 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್!

ನವದೆಹಲಿ: ಶಿಕ್ಷಕರೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಶಾಲೆಗೆ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್ ಬಂದಿದೆ. ಕೊಳಕ್ಕೆ ಬರುವ ನೀರನ್ನು ನಿರಂತರವಾಗಿ ಹೊರಬಿಟ್ಟರೆ ಕೊರೊನಾ ವೈರಸ್‍ನಿಂದ ಸುರಕ್ಷತೆ ಕಾಯ್ದುಕೊಳ್ಳಬಹುದು ಎಂದು ಆಲೋಚಿಸಿದ್ದೇ ಶಿಕ್ಷಕರ ಮಹಾಎಡವಟ್ಟಿಗೆ ಕಾರಣವಾಗಿದೆ. ಕಳೆದ ಜೂನ್‌ನಿಂದ ಸೆಪ್ಟೆಂಬರ್ ಆರಂಭದವರೆಗೆ ನಲ್ಲಿಯನ್ನು ಓಪನ್ ಮಾಡಿ ನೀರು ಹರಿಬಿಟ್ಟಿದ್ದಾರೆ. ಈ ಘಟನೆ ಜಪಾನ್‍ನಲ್ಲಿ ನಡೆದಿದ್ದು, ಭಾರೀ ಸುದ್ದಿಯಾಗಿದೆ.

 2 ತಿಂಗಳಲ್ಲಿ ಇಷ್ಟೊಂದು ನೀರು ವ್ಯರ್ಥವಾಗಿದೆ!

ಪರಿಣಾಮ ಸುಮಾರು 2 ತಿಂಗಳಲ್ಲಿ 4,000 ಟನ್ ನೀರು ವ್ಯರ್ಥವಾಗಿ ನಲ್ಲಿಯಿಂದ ಹರಿದುಹೋಗಿದೆ. ವಾಸ್ತವವಾಗಿ ಈ ಶಾಲೆಯ ಶಿಕ್ಷಕರಿಗೆ ನೀರಿನ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ಈ ಶಿಕ್ಷಕರ ನಿರ್ಲಕ್ಷ್ಯದಿಂದ ಇಡೀ ಶಾಲೆಯೇ ನಷ್ಟ ಅನುಭವಿಸಬೇಕಾಗಿದೆ.

ಇದನ್ನೂ ಓದಿ: NRI: ಮಲೇಷ್ಯಾನಲ್ಲಿರುವ ಭಾರತೀಯ ಮೂಲದ ವಿಕಲಚೇತನ ವ್ಯಕ್ತಿಗೆ ಮುಂದಿನ ವಾರ ಗಲ್ಲುಶಿಕ್ಷೆ, ಕಾರಣ ಇಲ್ಲಿದೆ

ತಪ್ಪಾಗಿ ಅರ್ಥೈಸಿಕೊಂಡಿದ್ದೇ ಎಡವಟ್ಟಿಗೆ ಕಾರಣ

ವರದಿಯ ಪ್ರಕಾರ ಕೊಳದ ನೀರಿನ ಗುಣಮಟ್ಟವನ್ನು ಕ್ಲೋರಿನ್ ಮತ್ತು ಫಿಲ್ಟರಿಂಗ್ ಯಂತ್ರಗಳಿಂದ ನಿರ್ವಹಿಸಲಾಗುತ್ತದೆ. ಆದರೆ ಶಾಲಾ ಶಿಕ್ಷಕರು ಕೊಳಕ್ಕೆ ತಾಜಾನೀರು(Fresh Water) ಬರುವಂತೆ ಮಾಡಿದರೆ ಕೋವಿಡ್ ಅನ್ನು ತಪ್ಪಿಸಬಹುದು ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು. ಹೀಗೆ ತಿಳಿದುಕೊಂಡ ಅವರು ಕೊಳದ ನಲ್ಲಿಯನ್ನು ತೆರೆದುಬಿಟ್ಟಿದ್ದರು. ಹೀಗಾಗಿ ಅಪಾರ ಪ್ರಮಾಣದ ನೀರು ಹರಿದುಹೋಗಿದೆ.

ಗಮನಕ್ಕೆ ತಂದಿದ್ದ ಸಿಬ್ಬಂದಿ

ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ಗಮನಿಸಿದ ಕೆಲ ಸಿಬ್ಬಂದಿ ನಲ್ಲಿಯನ್ನು ಬಂದ್ ಮಾಡಿದ್ದಾರೆ. ಆದರೆ, ಇದರಿಂದ ಕೋಪಗೊಂಡ ಶಿಕ್ಷಕರು ಮತ್ತೆ ನಲ್ಲಿಯನ್ನು ತೆರೆದಿದ್ದಾರೆ. ಹೀಗಾಗಿ 4,000 ಟನ್ ನೀರು ವ್ಯರ್ಥವಾಗಿ ಹರಿದುಹೋಗಿದೆ. ಈ ಕೊಳವನ್ನು 11 ಬಾರಿ ಇಷ್ಟು ನೀರಿನಿಂದ ತುಂಬಿಸಬಹುದು.

ಇದನ್ನೂ ಓದಿ: Shocking Video: ಪತ್ನಿಯೊಂದಿಗೆ ಜಗಳವಾಡಿದ ಪತಿ, ಬೆಡ್ ಮೇಲೆ ಪತ್ನಿ ಮಾಡಿದ ಕೆಲಸ ನೋಡಿ ನೀವೂ ಬೆಚ್ಚಿಬೀಳುವಿರಿ

ಶಿಕ್ಷಕರೇ ಹಣ ಪಾವತಿಸಬೇಕಾಗಿದೆ  

ಈ ನಿರ್ಲಕ್ಷ್ಯಕ್ಕೆ ಸ್ಥಳೀಯ ಅಧಿಕಾರಿಗಳು ಶಾಲಾ ಶಿಕ್ಷಕರು ಹಾಗೂ ಇಬ್ಬರು ಮೇಲ್ವಿಚಾರಕರಿಗೆ 20,66,081 ರೂ. ಹಣ ಪಾವತಿಸುವಂತೆ ಆದೇಶಿಸಿದ್ದಾರೆ.  ಯೊಕೊಸುಕಾ ಅಧಿಕಾರಿಗಳು ನೀರಿನ ಈ ನಷ್ಟಕ್ಕೆ ನಿವಾಸಿಗಳ ಬಳಿ ಕ್ಷಮೆಯಾಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News