ವಾಷಿಂಗ್ಟನ್: ಕೋವಿಡ್ -19 ಪ್ರಕರಣಗಳ ಭಾರಿ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಭಾರತಕ್ಕೆ ಪ್ರಯಾಣಿಸದಂತೆ ಯುಎಸ್ ತನ್ನ ನಾಗರಿಕರಿಗೆ ಮನವಿ ಮಾಡಿದೆ ಮತ್ತು ಪ್ರಸ್ತುತ ಅಸ್ತಿತ್ವದಲ್ಲಿರುವ ವಿಮಾನಗಳಿಂದ ಭಾರತದಲ್ಲಿರುವ ಅಮೆರಿಕದ ನಾಗರೀಕರು ತಮ್ಮ ದೇಶಕ್ಕೆ ಮರಳಿ ಬರುವಂತೆ ಶುಕ್ರವಾರ ಯುಎಸ್ ಮನವಿ ಮಾಡಿದೆ. ಯುನೈಟೆಡ್ ಏರ್ಲೈನ್ಸ್ ಮತ್ತು ಏರ್ ಇಂಡಿಯಾ ಪ್ರಸ್ತುತ ಭಾರತದಿಂದ ಯುಎಸ್ಗೆ ವಾರಕ್ಕೊಮ್ಮೆ ನೇರ ವಿಮಾನಯಾನ ನಡೆಸುತ್ತಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಅನೇಕ ವಿಮಾನಯಾನ ಸಂಸ್ಥೆಗಳು ಪ್ರಯಾಣ ಸೌಲಭ್ಯಗಳನ್ನು ಒದಗಿಸುತ್ತಿವೆ:
ಏರ್ ಫ್ರಾನ್ಸ್, ಲುಫ್ಥಾನ್ಸ ಮತ್ತು ಕತಾರ್ ಏರ್ವೇಸ್ ಸಹ ಪ್ಯಾರಿಸ್, ಫ್ರಾಂಕ್‌ಫರ್ಟ್ ಮತ್ತು ದೋಹಾಗಳಿಗೆ ವಿಮಾನಯಾನ ಮಾಡುವ ಆಯ್ಕೆಯನ್ನು ಹೊಂದಿವೆ. ಭಾರತದಿಂದ ಬರಲು ಬಯಸುವ ಅಮೆರಿಕನ್ (America) ನಾಗರಿಕರಿಗೆ ವಿಮಾನಯಾನ ಮೂಲಕ ಟಿಕೆಟ್ ಕಾಯ್ದಿರಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ಹೆಲ್ತ್ ಅಲರ್ಟ್ ಹೇಳುತ್ತದೆ.


ಇದನ್ನೂ ಓದಿ- ಭಾರತದಲ್ಲಿನ ಕೊರೊನಾ ಸಾವುಗಳು ಹೃದಯ ವಿದ್ರಾವಕಾರಿ -ಕಮಲಾ ಹ್ಯಾರಿಸ್


ಕರೋನಾ ನಕಾರಾತ್ಮಕ ಪ್ರಮಾಣಪತ್ರ ಅಗತ್ಯವಿದೆ:
ಯುಎಸ್ಗೆ ಪ್ರಯಾಣಿಸುವ ಯಾರಾದರೂ (ಎರಡು ವರ್ಷ ಮತ್ತು ಮೇಲ್ಪಟ್ಟವರು) ಪ್ರವಾಸಕ್ಕೆ ಮೂರು ದಿನಗಳ ಮೊದಲು ಕೋವಿಡ್ -19 (Covid 19) ಅನ್ನು ಪರೀಕ್ಷಿಸುವುದು ಅವಶ್ಯಕ ಮತ್ತು ವಿಮಾನ ಹತ್ತುವ ಮೊದಲು ನಕಾರಾತ್ಮಕ ವರದಿ ಅಗತ್ಯ ಎಂದು ಅದು ಹೇಳಿದೆ. ಒಂದೊಮ್ಮೆ ಕರೋನಾ ಸೋಂಕಿಗೆ ತುತ್ತಾಗಿದ್ದವರು ಕೋವಿಡ್ -19 ನಿಂದ ಚೇತರಿಸಿಕೊಂಡಿರುವ ದಾಖಲಾತಿಗಳನ್ನು ತೋರಿಸಬೇಕಾಗುತ್ತದೆ.


ಇದನ್ನೂ ಓದಿ- Covid-19: ದೇಹದಲ್ಲಿ ಆಮ್ಲಜನಕದ ಮಟ್ಟ ಎಷ್ಟಿರಬೇಕು? ಕಡಿಮೆ Oxygen level ಗುರುತಿಸುವುದು ಹೇಗೆ?


ಹೆಚ್ಚುತ್ತಿರುವ ಕರೋನ ಪ್ರಕರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ:
ಯುಎಸ್ ತಲುಪಿದ ನಂತರ ಪ್ರಯಾಣಿಕರು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಅದು ಹೇಳಿದೆ. ವಾಸ್ತವವಾಗಿ ಭಾರತದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾಗಿದ್ದರಿಂದ ಅಮೆರಿಕ ಈ ವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಭಾರತಕ್ಕೆ ಪ್ರವಾಸ ಕುರಿತಂತೆ ಸಲಹೆಯನ್ನು ನೀಡಿತ್ತು ಮತ್ತು ಭಾರತಕ್ಕೆ ಪ್ರಯಾಣಿಸದಂತೆ ತನ್ನ ನಾಗರಿಕರಿಗೆ ಮನವಿ ಮಾಡಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.