Good News: Coronavirus Triple Mutant, ತನ್ನಷ್ಟಕ್ಕೆ ತಾನೇ ನಾಶವಾದ ಟ್ರಿಪಲ್ ಮ್ಯೂಟಂಟ್

Coronavirus Third Mutant Ended Itself - ದೇಶಾದ್ಯಂತ ಹಾಹಾಕಾರ ಸೃಷ್ಟಿಸಿರುವ ಕೊರೊನಾ ವೈರಸ್(Coronavirus) ನ ಎರಡನೇ ಅಲೆಯ ಒಂದು ತಿಂಗಳ ಬಳಿಕವೂ ಕೂಡ ಅಲೆ ನಿಲ್ಲುವ ಮಾತೆ ಎತ್ತುತ್ತಿಲ್ಲ. 

Written by - Nitin Tabib | Last Updated : May 7, 2021, 10:27 PM IST
  • ತನ್ನಷ್ಟಕ್ಕೆ ತಾನೇ ನಾಶವಾದ ಕೊರೊನಾ ಮೂರನೇ ರೂಪಾಂತರಿ.
  • ಈ ರೂಪಾಂತರಿ ಪಶ್ಚಿಮ ಬಂಗಾಳದಲ್ಲಿ ಮೊದಲು ಕಂಡುಬಂದಿತ್ತು.
  • ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ ಪತ್ತೆಯಾದ N440K ರೂಪಾಂತರಿ ಇದೀಗ ವೇಗ ಪಡೆದುಕೊಂಡಿದೆ.
Good News: Coronavirus Triple Mutant, ತನ್ನಷ್ಟಕ್ಕೆ ತಾನೇ ನಾಶವಾದ ಟ್ರಿಪಲ್ ಮ್ಯೂಟಂಟ್ title=
Coronavirus Third Mutant Ended Itself (File Photo)

ನವದೆಹಲಿ: Coronavirus Third Mutant Ended Itself - ದೇಶಾದ್ಯಂತ ಹಾಹಾಕಾರ ಸೃಷ್ಟಿಸಿರುವ ಕೊರೊನಾ ವೈರಸ್(Coronavirus) ನ ಎರಡನೇ ಅಲೆಯ ಒಂದು ತಿಂಗಳ ಬಳಿಕವೂ ಕೂಡ ಅಲೆ ನಿಲ್ಲುವ ಮಾತೆ ಎತ್ತುತ್ತಿಲ್ಲ. ನಿತ್ಯ ದಾಖಲೆಯ ಪ್ರಮಾಣದಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕಳೆದ ಹಲವು ದಿನಗಳಿಂದ ನಿತ್ಯ 3000 ಕ್ಕೂ ಅಧಿಕ ಜನರು ಈ ಮಾರಕ ವೈರಸ್ ದಾಳಿಗೆ ಬಲಿಯಾಗುತ್ತಿದ್ದಾರೆ. ಏತನ್ಮಧ್ಯೆ ಕೊರೊನಾ ವೈರಸ್ ನ ಎರಡನೇ ಮ್ಯೂಟೆಂಟ್ (Coronavirus Second Mutant) ಬಳಿಕ ಇದೀಗ ಕೊರೊನಾ ವೈರಸ್ ನ ಮೂರನೇ ಮ್ಯೂಟೆಂಟ್ ಅಂದರೆ ಮೂರನೇ ರೂಪಾಂತರಿ ವೈರಸ್ (Coronavirus Third Mutant) ಜನರ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ವರದಿಗಳ ಪ್ರಕಾರ ಬಿ.1.1.618 ಇದೀಗ ನಷ್ಟವಾಗಿದೆ (Corona Triple Mutation Variant Ended Itself). ಭಾರತೀಯ ವಿಜ್ಞಾನಿಗಳ ಪ್ರಕಾರ ಈ ಮೂರನೇ ರೂಪಾಂತರಿ ಪಶ್ಚಿಮ ಬಂಗಾಳದಲ್ಲಿ ಪತೆಯಾಗಿತ್ತು. ಆದರೆ, ಜಿನೋಮ್ ಸಿಕ್ವೇನ್ಸಿಂಗ್ ನ ತಾಜಾ ಅಂಕಿ-ಅಂಶಗಳ ಪ್ರಕಾರ, ಇದು ಇದೀಗ ಕಣ್ಮರೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಇದೀಗ ಎರಡನೇ ರೂಪಾಂತರಿ ಬಿ 1.1. 617 ಭಾರಿಯಾಗಿ ಪರಿಣಮಿಸುತ್ತಿದೆ.

ಸೆಂಟರ್ ಫಾರ್ ಸೆಲ್ಯೂಲಾರ ಅಂಡ್ ಮಾಲಿಕ್ಯೂಲರ್ ಬಯಾಲಾಜಿ (CCMB) ನಿರ್ದೇಶಕ ಡಾ. ರಾಕೇಶ್ ಮಿಶ್ರಾ ಹೇಳುವ ಪ್ರಕಾರ, ಪಶ್ಚಿಮ ಬಂಗಾಳ ಅಥವಾ ದೇಶದ ಅನ್ಯ ಯಾವುದೇ ಭಾಗಗಳಲ್ಲಿ ಇದೀಗ ಮೂರನೇ ರೂಪಾಂತರಿ ಸೋಂಕಿನ ಪ್ರಕರಣಗಳು ವರದಿಯಾಗುತ್ತಿಲ್ಲ . ಆದರೆ, ರಾಜ್ಯಗಳಿಂದ ಪಡೆಯಲಾಗಿರುವ ಜಿನೋಮ್ ಸಿಕ್ವೆನ್ಸಿಂಗ್ ನಮೂನೆಗಳಲ್ಲಿ ಮೂರನೇ ರೂಪಾಂತರಿಯ ಜಾಗವನ್ನು ಎರಡನೇ ರೂಪಾಂತರಿ ಪಡೆದುಕೊಳ್ಳುತ್ತಿದೆ ಹಾಗೂ ಇದು ಅಪಾರ ವೇಗದಲ್ಲಿ ಹರಡುತ್ತಿದೆ. ಯಾವುದೇ ಒಂದು ರೂಪಾಂತರಿ ಯಾಕೆ ವೇಗವಾಗಿ ಹರಡುತ್ತದೆ ಇದರ ಹಿಂದೆ ಹಲವು ಕಾರಣಗಳಿರಬಹುದು. ಆದರೆ, ಸೋಂಕು ಜಾಸ್ತಿಯಾಗುತ್ತಿರುವುದು ಒಂದು ಪ್ರಮುಖ ಕಾರಣವಾಗುವ ಸಾಧ್ಯತೆ ಇದೆ. ಯಾವುದೇ ಒಂದು ರೂಪಾಂತರಿ ವೇಗವಾಗಿ ಹರಡಿದರೆ, ಇನ್ನೊಂದು ಕ್ರಮೇಣವಾಗಿ ಶಕ್ತಿ ಕಳೆದುಕೊಳ್ಳುತ್ತದೆ. ಇದುವರೆಗೆ ಬರುತ್ತಿರುವ ಫಲಿತಾಂಶಗಳಿಂದ ಮೂರನೇ ರೂಪಾಂತರಿ ಕೊರೊನಾ ವೈರಸ್ ಪ್ರಸ್ತುತ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದೇ ಹೇಳಬಹುದು ಎಂದು ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ- Coronavirus 3rd Wave ತಡೆಯುವುದು ಹೇಗೆ? ಪ್ರಧಾನಿಗಳ ಪ್ರಮುಖ ವೈಜ್ಞಾನಿಕ ಸಲಹೆಗಾರರ ಸಲಹೆ ಇದು

ನೈಸರ್ಗಿಕ ಕಾರಣಗಳಿಂದ ಬದಲಾವಣೆ
ನೈಸರ್ಗಿಕ ಕಾರಣಗಳಿಂದ ವೈರಸ್ (Coronavirus) ನಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಇದು ಒಂದು ಅಥವಾ ಹೆಚ್ಚಿನದಾಗಿರಬಹುದು. ಬಿ. 1.1. 618 ನಲ್ಲಿ  ಮೂರು ಬದಲಾವಣೆಗಳನ್ನು ಗಮನಿಸಲಾಗಿದೆ. ಮೊದಲನೆಯದಾಗಿ ಇ 484 ಕೆ ಮತ್ತು ಎರಡನೇದಾಗಿ ಡಿ 614 ಜಿ. ಮೂರನೆಯ ಬದಲಾವಣೆಯಲ್ಲಿ ಇದರಲ್ಲಿನ H146DEL ಮತ್ತು Y445DEL ಎಂಬ ಎರಡು ಜೀನ್‌ಗಳು ಕಾಣೆಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಮಾರ್ಚ್ ಕೊನೆಯಲ್ಲಿ ಮತ್ತು ಏಪ್ರಿಲ್ ಆರಂಭದಲ್ಲಿ ಈ ಸೋಂಕು ಕಂಡುಬಂದಿತ್ತು. ದೇಶದಲ್ಲಿ ಯುಕೆ ರೂಪಾಂತರದ ಪ್ರಭಾವ ಕೂಡ ಏಕಾಏಕಿ ಕಡಿಮೆಯಾಗುತ್ತಿದೆ ಎಂದು ಇತ್ತೀಚೆಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC)ಹೇಳಿತ್ತು. ದಕ್ಷಿಣ ಆಫ್ರಿಕಾದ ರೂಪಾಂತರವಿದೆ ಆದರೆ ಹರಡುವಿಕೆ ಸೀಮಿತವಾಗಿದೆ. ಬ್ರೆಜಿಲಿಯನ್ ರೂಪಾಂತರಿಯ  ಕೇವಲ ಒಂದು ಅಥವಾ ಎರಡು ಪ್ರಕರಣಗಳು ಮಾತ್ರ ಇದುವರೆಗೆ ಕಂಡುಬಂದಿವೆ.

ಇದನ್ನೂ ಓದಿ- ಮೇ 10 ರಿಂದ 25 ರವರೆಗೆ ಕರ್ನಾಟಕ ಸಂಪೂರ್ಣ ಲಾಕ್ ಡೌನ್

ಆಂಧ್ರಪ್ರದೇಶದಲ್ಲಿ ದೊರೆತಿದೆ ಮತ್ತೊಂದು ಹೊಸ ರೂಪಾಂತರಿ
ಇತ್ತೀಚೆಗಷ್ಟೇ ಹೊಸ ರೂಪಾಂತರಿಯೊಂದನ್ನು ಪತ್ತೆಹಚ್ಚಲಾಗಿದ್ದು, ಇದು ಈ ವರೆಗಿನ ರೂಪಾಂತರಿಗಿಂತ 10 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ.  ಹೈದ್ರಾಬಾದ್ ಹಾಗೂ ಗಾಝಿಯಾಬಾದ್ ವಿಜ್ಞಾನಿಗಳ ತಂಡ ಈ ನೂತನ ರೂಪಾಂತರಿ N440K ಅನ್ನು ಪತ್ತೆಹಚ್ಚಿದೆ. ಈ ಹೊಸ ರೂಪಾಂತರಿಯ ಕಾರಣ ದೇಶದ ಹಲವು ಭಾಗಗಳಲ್ಲಿ ಕೊರೊನಾ ಸೋಂಕು ಇನ್ನಷ್ಟು ವೇಗವಾಗಿ ಹರಡುತ್ತಿರುವುದು ಕಂಡುಬಂದಿದೆ. ಈ ರೂಪಾಂತರಿ ಮೊಟ್ಟಮೊದಲ ಬಾರಿಗೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಪತ್ತೆಯಾಗಿತ್ತು ಎಂದು ವಿಜ್ಞಾನಿಗಳ ತಂಡ ಹೇಳಿದೆ. ಇದನ್ನು AP ರೂಪಾಂತರಿ ಎಂದೂ ಕೂಡ ಕರೆಯಲಾಗುತ್ತಿದೆ. ಇದೀಗ ಈ ರೂಪಾಂತರಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ. ಎರಡನೇ ಅಲೆಯ ವೇಳೆ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಂಡುಬಂದ ಸೋಂಕಿತರ ಸಂಖ್ಯೆಯಲ್ಲಿ 1/3 ಪ್ರಕರಣಗಳು ರೂಪಾಂತರಿ ಪ್ರಕರಣಗಳಾಗಿವೆ ಹಾಗೂ ಇದು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ.

ಇದನ್ನೂ ಓದಿ-ಬೋಳು ತಲೆಯವರಿಗೆ ಕರೋನಾ ವೈರಸ್ ಅಪಾಯ ಹೆಚ್ಚು ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News