ವಾಷಿಂಗ್ಟನ್:  ಮುಂದಿನ ವರ್ಷ 2019ರ ಆರಂಭದಲ್ಲಿ ಇಸ್ರೇಲ್ನಲ್ಲಿರುವ ಯುಎಸ್ ರಾಯಭಾರಿ ಕಛೇರಿಯನ್ನು ಜೆರುಸಲೆಮ್ಗೆ ಸ್ಥಳಾಂತರಿಸಲು ಯೋಜನೆಯೊಂದನ್ನು ಟ್ರಂಪ್ ಆಡಳಿತ ರೂಪಿಸುತ್ತಿದೆ ಎಂದು ರಾಜ್ಯ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕಛೇರಿಯನ್ನು ಕಾರ್ಯಗತಗೊಳಿಸಲು ಕನಿಷ್ಠ ಮೂರು ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.ಈ ಮಧ್ಯೆ, ಮೂರು ಅಮೇರಿಕಾದ ಅಧಿಕಾರಿಗಳು ಟಿಲ್ಲರ್ಸನ್ ಪಶ್ಚಿಮ ಜೆರುಸಲೆಮ್ನಲ್ಲಿ ಅಸ್ತಿತ್ವದಲ್ಲಿರುವ ಯುಎಸ್ ರಾಯಭಾರಿ ಕಟ್ಟಡವನ್ನು ಸಧ್ಯ ಹಂಗಾಮಿ ರಾಯಭಾರ ಕಚೇರಿಯನ್ನಾಗಿ ನೇಮಿಸಬಹುದು ಎಂದು ಹೇಳಿದ್ದಾರೆ. 


ಅಮೆರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್ ಪ್ರಸ್ತಾಪವನ್ನು ತ್ವರಿತವಾಗಿ ಸ್ವೀಕರಿಸಲು ರಾಜ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ ಎಂದು  ಅಧಿಕಾರಿಗಳು ಹೇಳಿದ್ದಾರೆ.