ಕೋವಿಡ್ ಬಳಿಕ ಮತ್ತೊಂದು ವೈರಸ್, ಚೀನಾದಲ್ಲಿ ವಿನಾಶ ಸೃಷ್ಟಿಸುತ್ತಿದೆ ಈ ಸೋಂಕು!
China Virus: ಕೋವಿಡ್ ಬಳಿಕ ಮತ್ತೊಂದು ವೈರಸ್ ಕಾಣಿಸಿಕೊಂಡಿದ್ದು, ಚೀನಾದಲ್ಲಿ ಮತ್ತೆ ವೈರಸ್ ನಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಈ ಸೋಂಕು ಚೀನಾದಲ್ಲಿ ವಿನಾಶವನ್ನು ಸೃಷ್ಟಿಸುತ್ತಿದೆ
Another Virus in china after Covid : ಪ್ರಸ್ತುತ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ನಿಂದ ಚೀನಾ ಸಂಪೂರ್ಣವಾಗಿ ತತ್ತರಿಸಿದೆ. ಈ ಸೋಂಕಿನಲ್ಲಿ ಜ್ವರ ತರಹದ ಲಕ್ಷಣಗಳು ಕಂಡುಬರುತ್ತವೆ. ಇದು ಕೂಡ ಕೋವಿಡ್ -19 ಅನ್ನು ಹೋಲುತ್ತವೆ.
ಕೋವಿಡ್ ವೈರಸ್ ಜಗತ್ತನ್ನು ಅಲುಗಾಡಿಸಿದ ಐದು ವರ್ಷಗಳ ಬಳಿಕ ಇದೀಗ ಚೀನಾದಲ್ಲಿ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿರುವ ಕುರಿತು ವರದಿಯಾಗಿದೆ. ಅದುವೇ, 'ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್' ಈ ವರ್ಷ ಆರಂಭದಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್ ಇದು. ನೆರೆಯ ರಾಷ್ಟ್ರಗಳು ಈ ವೈರಸ್ ಪತ್ತೆ ಮಾಡುವ ನಿಟ್ಟಿನಲ್ಲಿ ಸ್ಕ್ರೀನಿಂಗ್ ಹಾಗೂ ಪ್ರತ್ಯೇಕತೆಯ ಪ್ರೋಟೋಕಾಲ್‌ಗಳನ್ನು ಘೋಷಿಸಲು ಮುಂದಾಗಿವೆ.ಇದನ್ನು ಓದಿ:ಜೋ ಬೈಡನ್ ಕುಟುಂಬಕ್ಕೆ ಮೋದಿ ನೀಡಿದ ದುಬಾರಿ ಗಿಫ್ಟ್ ಯಾವುದು ಗೊತ್ತಾ?
ಚೀನಾದ ಆರೋಗ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಈ ಎಚ್ ಎಂಪಿವಿ ವೈರಸ್ ಚೀನಾದ ಉತ್ತರ ಭಾಗದಲ್ಲಿ ವೇಗವಾಗಿ ಹರಡುತ್ತಿದೆ. ಅಲ್ಲದೇ ಸಾವಿರಾರು ಸಂಖ್ಯೆಯ ಜನರು ಉಸಿರಾಟದ ತೊಂದರೆಗೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದೆ. ಈ ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ ಎಲ್ಲಾ ವಯೋಮಾನದವರ ಮೇಲೂ ಪರಿಣಾಮ ಬೀರುತ್ತಿದ್ದು, ಮುಖ್ಯವಾಗಿ ಮಕ್ಕಳಿಗೆ ಹೆಚ್ಚು ಮಾರಕವಾಗಿರುವುದರಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ.
ಈ ಎಚ್ ಎಂಪಿವಿ ಸೋಂಕಿನ ಬಗ್ಗೆ ಏಷ್ಯಾದಲ್ಲಿ ಆರೋಗ್ಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮತ್ತೊಂದೆಡೆ ಚೀನಾ ಸೋಂಕು ತಡೆಗೆ ಕಠಿಣ ಕ್ರಮ ಜಾರಿಗೊಳಿಸಲು ಮುಂದಾಗಿದೆ. ಇದನ್ನು ಓದಿ:ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಡೇಟ್ ಫಿಕ್ಸ್! ಈ ದಿನ ನಡೆಯಲಿದೆ ಕ್ಲೈಮಾಕ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.