ಲಂಡನ್: ಕೊರೊನಾವೈರಸ್ ಲಸಿಕೆ ತಯಾರಿಸುವ ಅಸ್ಟ್ರಾಜೆನೆಕಾ (AstraZeneca) ಕಂಪನಿಯು ಭಾರಿ ಭರವಸೆ ಮೂಡಿಸುವ ಹೇಳಿಕೆಯನ್ನು ನೀಡಿದೆ. COVID-19 ಲಸಿಕೆ ಪ್ರಯೋಗದ ಅಂತಿಮ ಹಂತದ ಫಲಿತಾಂಶಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಎಂದು ಅಸ್ಟ್ರಾಜೆನೆಕಾ ಹೇಳಿಕೊಂಡಿದೆ. ಕರೋನಾ ವೈರಸ್ ತಡೆಗಟ್ಟುವಲ್ಲಿ ಲಸಿಕೆಯ ಸಣ್ಣ ಪ್ರಮಾಣದ ಡೋಸ್ ಕೂಡ ಹೆಚ್ಚು ಪರಿಣಾಮಕಾರಿ ತೋರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಡಿಸೆಂಬರ್ 2020 ರ ವೇಳೆಗೆ ಭಾರತಕ್ಕೆ 100 ಮಿಲಿಯನ್ ಅಸ್ಟ್ರಾಜೆನೆಕಾದ COVID-19 ಲಸಿಕೆ


ಲಸಿಕೆಯ ಅರ್ಧ ಡೋಸ್ ಕೂಡ ಪರಿಣಾಮಕಾರಿಯಾಗಿದೆ
ಅಸ್ಟ್ರಾಜೆನಿಕಾ ಹಾಗೂ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಶೇ.70 ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಕುರಿತು ಹೇಳಿಕೆ ನೀಡಿರುವ ವಿಜ್ಞಾನಿ ಡಾ. ಆಂಡ್ರ್ಯೂ ಪೋಲಾರ್ಡ್ ವಿಜ್ಞಾನಿಗಳು ಫಲಿತಾಂಶಗಳಿಂದ ತುಂಬಾ ಸಂತುಷ್ಟರಾಗಿದ್ದಾರೆ ಎಂದಿದ್ದಾರೆ. ಲಸಿಕೆಯ ಎರಡು ಡೋಸ್ ನೀಡುವ ಬದಲು ಈ ಲಸಿಕೆಯ ಅರ್ಧ ಡೋಸ್ ನೀಡಿದರೂ ಕೂಡ ಇದು ಶೇ.90 ರಷ್ಟು ಪರಿಣಾಮಕಾರಿ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.


ಇದನ್ನು ಓದಿ-ಅಸ್ಟ್ರಾಜೆನೆಕಾ COVID-19 ಪ್ರಾಯೋಗಿಕ ಲಸಿಕೆ ಸೇವಿಸಿದ ವ್ಯಕ್ತಿ ಸಾವು


ಫೈಜರ್ ಹಾಗೂ ಮಾಡರ್ನಾ ಕೂಡ ಭರವಸೆ ವ್ಯಕ್ತಪಡಿಸಿವೆ
ನಮ್ಮ ಬಳಿ ಹಲವು ಜೀವಗಳನ್ನು ಉಳಿಸುವ ಪರಿಣಾಮಕಾರಿ ಲಸಿಕೆ ಇದೆ ಎಂದು ಈ ಪ್ರಯೋಗಗಳ ನಿಷ್ಕರ್ಷಗಳು ಸಾಬೀತುಪಡಿಸಿವೆ ಎಂದು ಅಸ್ಟ್ರಾಜೆನೆಕಾ ಹೇಳಿದೆ. ಕಳೆದ ವಾರ ಇತರೆ ಎರಡು ಔಷಧಿ ತಯಾರಕ ಕಂಪನಿಗಳಾದ ಫೈಜರ್ ಹಾಗೂ ಮಾಡರ್ನಾ ಕೂಡ ತಮ್ಮ ಕೊವಿಡ್ 19 ಲಸಿಕೆ ಶೇ.95 ರಷ್ಟು ಪರಿಣಾಮಕಾರಿಯಾಗಿವೆ ಎಂದು ಹೇಳಿಕೊಂಡಿದೆ.