ಅಸ್ಟ್ರಾಜೆನೆಕಾ COVID-19 ಪ್ರಾಯೋಗಿಕ ಲಸಿಕೆ ಸೇವಿಸಿದ ವ್ಯಕ್ತಿ ಸಾವು

ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ COVID-19 ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲಿ ಸ್ವಯಂ ಸೇವಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಬ್ರೆಜಿಲ್ ಆರೋಗ್ಯ ಪ್ರಾಧಿಕಾರ ಅನ್ವಿಸಾ ಬುಧವಾರ ಹೇಳಿದ್ದಾರೆ.

Last Updated : Oct 22, 2020, 10:27 AM IST
 ಅಸ್ಟ್ರಾಜೆನೆಕಾ COVID-19 ಪ್ರಾಯೋಗಿಕ ಲಸಿಕೆ ಸೇವಿಸಿದ ವ್ಯಕ್ತಿ ಸಾವು  title=
Photo Courtesy: Reuters

ನವದೆಹಲಿ: ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ COVID-19 ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲಿ ಸ್ವಯಂ ಸೇವಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಬ್ರೆಜಿಲ್ ಆರೋಗ್ಯ ಪ್ರಾಧಿಕಾರ ಅನ್ವಿಸಾ ಬುಧವಾರ ಹೇಳಿದ್ದಾರೆ.

ಆದಾಗ್ಯೂ ಪರೀಕ್ಷೆಯನ್ನು ಮುಂದುವರಿಸುವ ಯೋಜನೆಯನ್ನು ಆಕ್ಸ್‌ಫರ್ಡ್ ದೃಢಪಡಿಸಿದೆ, ಸಾವನ್ನಪ್ಪಿದ ಸ್ವಯಂಸೇವಕನು COVID-19 ಲಸಿಕೆ ಪಡೆದಿದ್ದಾನೆ ಎನ್ನಲಾಗಿದೆ.

ಕರೋನಾದಿಂದ ಚೇತರಿಸಿಕೊಂಡ ಬಳಿಕವೂ ಆಸ್ಪತ್ರೆಗೆ ಸುತ್ತಾಡುತ್ತಿರುವ ಜನ, ಕಾರಣ...!

ಫೆಡರಲ್ ಯೂನಿವರ್ಸಿಟಿ ಆಫ್ ಸಾವೊ ಪಾಲೊ, ಬ್ರೆಜಿಲ್ ನಲ್ಲಿ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಸಂಘಟಿಸಲು ಸಹಾಯ ಮಾಡುತ್ತಿದೆ, ಸ್ವತಂತ್ರ ಪರಿಶೀಲನಾ ಸಮಿತಿಯು ಸಹ ಪ್ರಯೋಗವನ್ನು ಮುಂದುವರಿಸಲು ಶಿಫಾರಸು ಮಾಡಿದೆ ಎಂದು ಹೇಳಿದರು. ಸ್ವಯಂ ಸೇವಕ ಬ್ರೆಜಿಲಿಯನ್ ಎಂದು ವಿಶ್ವವಿದ್ಯಾನಿಲಯವು ಮೊದಲೇ ದೃಢಪಡಿಸಿತು ಆದರೆ ಹೆಚ್ಚಿನ ವೈಯಕ್ತಿಕ ವಿವರಗಳನ್ನು ನೀಡಿಲ್ಲ.

"ಪ್ರಯೋಗದಲ್ಲಿ ಭಾಗವಹಿಸುವ ಯಾವುದೇ ಸ್ವಯಂಸೇವಕರನ್ನು ಒಳಗೊಂಡ ಗಂಭೀರ ಲಸಿಕೆ-ಸಂಬಂಧಿತ ತೊಡಕುಗಳ ಯಾವುದೇ ದಾಖಲೆಯಿಲ್ಲದೆ ಎಲ್ಲವೂ ನಿರೀಕ್ಷೆಯಂತೆ ಮುಂದುವರಿಯುತ್ತಿದೆ" ಎಂದು ಬ್ರೆಜಿಲ್ ವಿಶ್ವವಿದ್ಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಜಾಗಟೆ ಬಾರಿಸಿ, ದೀಪ ಹಚ್ಚಿ ಕೊರೊನಾ ಎದುರಿಸಲು ಹೇಳಿದ ಮೋದಿ ಭಾಷಣವೇ ಜನರ ನಿರ್ಲಕ್ಷಕ್ಕೆ ಮುಖ್ಯ ಕಾರಣ-ಸಿದ್ಧರಾಮಯ್ಯ

ಇಲ್ಲಿಯವರೆಗೆ, ವಿಚಾರಣೆಯಲ್ಲಿ ಯೋಜಿಸಲಾದ 10,000 ಸ್ವಯಂಸೇವಕರಲ್ಲಿ 8,000 ಜನರನ್ನು ನೇಮಕ ಮಾಡಲಾಗಿದೆ ಮತ್ತು ಬ್ರೆಜಿಲ್ ನ ಆರು ನಗರಗಳಲ್ಲಿ ಮೊದಲ ಡೋಸ್ ನೀಡಲಾಗಿದೆ, ಮತ್ತು ಅನೇಕರು ಈಗಾಗಲೇ ಎರಡನೇ ಬಾರಿಗೆ ಲಸಿಕೆಯನ್ನುಸ್ವೀಕರಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ವಕ್ತಾರರು ತಿಳಿಸಿದ್ದಾರೆ.

ಸ್ವಯಂಸೇವಕ ರಿಯೊ ಡಿ ಜನೈರೊದಲ್ಲಿ ವಾಸಿಸುತ್ತಿದ್ದ 28 ವರ್ಷದ ಯುವಕನಾಗಿದ್ದಾನೆ ಆತನು ಕೊರೊನಾದಿಂದ ಸಾವನ್ನಪ್ಪಿದ್ದಾನೆ ಎಂದು ಸಿಎನ್ಎನ್ ಬ್ರೆಸಿಲ್ ವರದಿ ಮಾಡಿದೆ.ಈ ಪ್ರಯೋಗಗಳಲ್ಲಿ ಭಾಗಿಯಾಗಿರುವವರ ವೈದ್ಯಕೀಯ ಗೌಪ್ಯತೆಯನ್ನು ಉಲ್ಲೇಖಿಸಿ ಅನ್ವಿಸಾ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಇನ್ನೊಂದೆಡೆಗೆ ಈ ಘಟನೆಯ ನಂತರ ಅಸ್ಟ್ರಾಜೆನೆಕಾ ಷೇರುಗಳು ಶೇ 1.8% ರಷ್ಟು ಕುಸಿದಿವೆ.

ಎಲ್ಲರೂ ಕರೋನಾ ಸಂಕಷ್ಟದಲ್ಲಿದ್ದಾಗ ಚೀನಾ ಬಿಲಿಯನೇರ್‌ಗಳ ಸಂಪತ್ತು ಏಕೆ ಹೆಚ್ಚುತ್ತಲೇ ಇತ್ತು?

ಬ್ರೆಜಿಲ್ ಫೆಡರಲ್ ಸರ್ಕಾರವು ಯುಕೆ ಲಸಿಕೆಯನ್ನು ಖರೀದಿಸಿ ರಿಯೊ ಡಿ ಜನೈರೊದಲ್ಲಿನ ಬಯೋಮೆಡಿಕಲ್ ಸಂಶೋಧನಾ ಕೇಂದ್ರ ಫಿಯೋಕ್ರೂಜ್ ನಲ್ಲಿ ಉತ್ಪಾದಿಸುವ ಯೋಜನೆಯನ್ನು ಹೊಂದಿದೆ, ಆದರೆ ಚೀನಾದ ಸಿನೋವಾಕ್ ಬಯೋಟೆಕ್ ಲಿಮಿಟೆಡ್ ನಿಂದ ಲಸಿಕೆಯನ್ನು ಸಾವೊ ಪಾಲೊ ರಾಜ್ಯದ ಸಂಶೋಧನಾ ಕೇಂದ್ರ ಬುಟಾಂಟನ್ ಇನ್ಸ್ಟಿಟ್ಯೂಟ್ ಪರೀಕ್ಷಿಸುತ್ತಿದೆ.

ಫೆಡರಲ್ ಸರ್ಕಾರವು ಸಿನೋವಾಕ್ ಲಸಿಕೆ ಖರೀದಿಸುವುದಿಲ್ಲ ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಬುಧವಾರ ಹೇಳಿದ್ದಾರೆ.
 

Trending News