ಪಾಕಿಸ್ತಾನ: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಬಂಧನದ ಬೆನ್ನಲೇ ಬಲೂಚಿಸ್ತಾನಾಡಲ್ಲಿ ಷರೀಫ್ ಬೆಂಬಲಿಗರು ಶುಕ್ರವಾರ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 133 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 


COMMERCIAL BREAK
SCROLL TO CONTINUE READING

ಪಾಕಿಸ್ತಾನದಲ್ಲಿ ಜುಲೈ 25ರ ಚುನಾವಣೆ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಲು ಅವಳಿ ಬಾಂಬ್ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ನಡೆದ ಬಾಂಬ್ ದಾಳಿಯನ್ನು ಯುನೈಟೆಡ್ ನೇಷನ್ಸ್ ಮತ್ತು ವಿಶ್ವದ ಇತರ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. 


ಒಂದೇ ದಿನದಲ್ಲಿ ನಡೆದ 2ನೇ ದಾಳಿ ಇದಾಗಿದ್ದು, ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಜುಲೈ 25ರಂದು ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಲು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಆ ಚುನಾವಣೆಯ ಸ್ಪರ್ಧಿಯಾಗಿದ್ದ ಅವಾಮಿ ನ್ಯಾಷನಲ್​ ಪಾರ್ಟಿಯ ಮುಖಂಡರನ್ನು ಕಳೆದ ಸೋಮವಾರ ಆತ್ಮಾಹುತಿ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು.