Corona Vaccine ತಯಾರಿಕೆಗೆ 5 ಲಕ್ಷ ಶಾರ್ಕ್ ಗಳ ಬಲಿ
ಕೊರೊನಾ ವೈರಸ್ ವಿರುದ್ಧ ಲಸಿಕೆ ತಯಾರಿಸಲು ದೊಡ್ಡ ಪ್ರಮಾಣದಲ್ಲಿ ಶಾರ್ಕ್ ಗಳ ಬೇಟೆಯಾಡಲಾಗುತ್ತಿದೆ.
ನವದೆಹಲಿ: ಕೊರೊನಾ ವೈರಸ್ ವಿರುದ್ಧ ಲಸಿಕೆ (Corona Vaccine) ತಯಾರಿಸಲು ದೊಡ್ಡ ಪ್ರಮಾಣದಲ್ಲಿ ಶಾರ್ಕ್ ಗಳ ಬೇಟೆಯಾಡಲಾಗುತ್ತಿದೆ. ಶಾರ್ಕ್ ಸಂರಕ್ಷಣೆಗೆಂದೇ ಕೆಲಸ ಮಾಡುವ ಒಂದು ಗುಂಪಿನ ಪ್ರಕಾರ, ವ್ಯಾಕ್ಸಿನ್ ತಯಾರಿಕೆಯಾ ರೆಸ್ ನಲ್ಲಿ ವಿಶ್ವಾದ್ಯಂತ 5 ಲಕ್ಷಕ್ಕೂ ಅಧಿಕ ಶಾರ್ಕಗಳ ಬಲಿ ನೀಡಲಾಗುತ್ತಿದೆ.
ಇದನ್ನು ಓದಿ- Corona Vaccine ತಯಾರಿಸುವ ಕಂಪನಿ Modi ಸರ್ಕಾರವನ್ನು ಕೇಳಿದ್ದೇನು ಗೊತ್ತಾ?
ಕಾರಣ ಇಲ್ಲಿದೆ
ಶಾರ್ಕ್ ಅಲೈಸ್ ಪ್ರಕಾರ, ಬಹುತೇಕ ಲಸಿಕೆಗಲಿಗಾಗಿ ಔಷಧೀಯ ಅಥವಾ ರೋಗನಿರೋಧಕ ಏಜೆಂಟ್ Adjuvant ಅವಶ್ಯಕತೆ ಇದೆ. ಇದು ಲಸಿಕೆಯ ರೋಗನಿರೋಧಕ ಕ್ಷಮತೆಯನ್ನು ಉತ್ತಮಪಡಿಸುವಲ್ಲಿ ಸಹಾಯಕಾರಿಯಾಗಿದೆ. ಈ Adjuvant ಅನ್ನು ಶಾರ್ಕ್ ಗಳ ಲೀವರ್ ನಲ್ಲಿ ಕಂಡುಬರುತ್ತದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಶಾರ್ಕ್ ಗಳ ಮಾರಣಹೋಮ ನಡೆಸಲಾಗುತ್ತಿದೆ ಎಂದಿದೆ.
ಇದನ್ನು ಓದಿ- ನವೆಂಬರ್ ವೇಳೆಗೆ ಕರೋನಾ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆ
ಹೆಚ್ಚಿನ ಸಂಖ್ಯೆಯಲ್ಲಿ ಅವಶ್ಯಕತೆ
ಕರೋನಾ ಸಾಂಕ್ರಾಮಿಕದಿಂದ ರಕ್ಷಿಸಿಕೊಳ್ಳಲು ಪ್ರಪಂಚದಾದ್ಯಂತದ ಜನರಿಗೆ ಹೆಚ್ಚಿನ ಸಂಖ್ಯೆಯ ಕರೋನಾ ಲಸಿಕೆ ಅಗತ್ಯವಿರುತ್ತದೆ. ಅಂದರೆ, ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬೇಕಾಗಿದೆ. Adjuvant ಪ್ರತಿ ವ್ಯಕ್ತಿಗೆ ಲಸಿಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಪ್ರತಿ ವ್ಯಕ್ತಿಗೆ ಅಗತ್ಯವಿರುವ ಲಸಿಕೆ, ಶಾರ್ಕ್ ಯಕೃತ್ತಿನಲ್ಲಿ ಕಂಡುಬರುವ ಈ ವಸ್ತುವು ಅದನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಶಾರ್ಕ್ ಅನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಗುತ್ತಿದೆ.
ಇದನ್ನು ಓದಿ- ಸಂತಸದ ಸುದ್ದಿ: ತನ್ನ 'Sputnik V'Corona Vaccine ಕುರಿತು ಭಾರತದೊಂದಿಗೆ ಅಧಿಕೃತ ಸಂಪರ್ಕ ಸಾಧಿಸಿದ ರಷ್ಯಾ
ಶಾರ್ಕ್ ಅತಿ ದೊಡ್ಡ ಆಗರವಾಗಿದೆ
ವಿವಿಧ ಲಸಿಕೆಗಳಿಗಾಗಿ ವಿವಿಧ Adjuvant ಗಳ ಬಳಕೆಯಾಗುತ್ತದೆ. ಆದರೆ, ಇನ್ಫ್ಲುಎಂಜಾ ಪ್ರಕರಣಗಳಲ್ಲಿ ಸ್ಕ್ವಾಲಿನ್ ಆಯಿಲ್ (Squalene Oil) ಬಳಕೆ ಸಾಮಾನ್ಯವಾಗಿದೆ. ಇದು ಶಾರ್ಕ್, ಮನುಷ್ಯ ಹಾಗೂ ಇತರೆ ಪ್ರಾಣಿಗಳ ಲಿವರ್ ನಲ್ಲಿ ಕಂಡುಬರುತ್ತದೆ. ಇತರೆ ಪ್ರಾಣಿಗಳಲ್ಲಿಯೂ ಕೂಡ ಇದು ಕಂಡು ಬಂದರೂ ಕೂಡ ಶಾರ್ಕ್ ಇದರ ಅತಿ ದೊಡ್ಡ ಆಗರವಾಗಿದೆ.