ಸಿಡ್ನಿ: ನವೆಂಬರ್‌ನಿಂದ ಆಸ್ಟ್ರೇಲಿಯಾದ ಕಾಡುಗಳಲ್ಲಿ ಅಗ್ನಿ ನರ್ತನ ಆರಂಭವಾಗಿದೆ. ವಾತಾವರಣ ಮತ್ತು ನೀರಿನ ಬಿಕ್ಕಟ್ಟಿನಿಂದಾಗಿ 10,000 ಒಂಟೆಗಳನ್ನು ಕೊಲ್ಲಲು ಸ್ಥಳೀಯ ಆಡಳಿತ ನಿರ್ಧರಿಸಿದೆ. ಆಡಳಿತದ ಪ್ರಕಾರ, ಕಾಡಿನಲ್ಲಿ ಭಾರಿ ಬೆಂಕಿಯಿಂದಾಗಿ ಒಂಟೆಗಳು ವಸತಿ ಪ್ರದೇಶಗಳನ್ನು ತಲುಪುತ್ತಿವೆ. ಬೆಂಕಿಯ ಸುತ್ತಲಿನ ಶಾಖದಿಂದಾಗಿ ಈ ಒಂಟೆಗಳು ಹೆಚ್ಚು ನೀರು ಕುಡಿಯುತ್ತಿವೆ. ಈಗಾಗಲೇ, ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ ಇದು ಮತ್ತೊಂದು ರೀತಿಯ ಸಮಸ್ಯೆಯನ್ನು ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಕಾರಣಕ್ಕಾಗಿ, ಆಡಳಿತವು ಇಂದಿನಿಂದ ಐದು ದಿನಗಳ ಅಭಿಯಾನವನ್ನು ಪ್ರಾರಂಭಿಸಿದೆ. ಈ ಕೆಲಸವನ್ನು ನಿರ್ವಹಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ. ಹೀಗೆ ಒಂಟೆ ಮಾರಣ ಹೋಮಕ್ಕೆ ಸಜ್ಜಾಗಿರುವ ಪ್ರದೇಶಗಳಲ್ಲಿ, ಆಸ್ಟ್ರೇಲಿಯಾದ ಪ್ರಾಚೀನ ಜಾತಿಗಳಿವೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶವು ದಕ್ಷಿಣ ಆಸ್ಟ್ರೇಲಿಯಾದ ದೂರದ ವಾಯುವ್ಯ ಪ್ರದೇಶಕ್ಕೆ ಸೇರಿದೆ. ಈ ಸಂದರ್ಭದಲ್ಲಿ, ಸ್ಥಳೀಯ ಆಡಳಿತವು ಬೆಂಕಿಯಿಂದಾಗಿ, ನಾವು ಇಲ್ಲಿ ಬಿಸಿ ಮತ್ತು ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳುತ್ತಾರೆ. 


ನಾವು ಈಗಾಗಲೇ ನಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದೇವೆ. ನೀರಿನ ಬಿಕ್ಕಟ್ಟಿನಿಂದಾಗಿ ಜನರು ತಮ್ಮ ಅಗತ್ಯಗಳನ್ನು ಪೂರೈಸಲು ಎಸಿಯಿಂದ ನೀರನ್ನು ಸಂಗ್ರಹಿಸುತ್ತಾರೆ. ನಮ್ಮ ಮನೆಗಳಿಗೇ ನೀರು ಬರುವುದು ಕಷ್ಟಸಾಧ್ಯವಾಗಿರುವ ಈ ಸಂದರ್ಭದಲ್ಲಿ ಈ ಒಂಟೆಗಳು ಎಸಿಯಿಂದ ಹೊರಬರುವ ನೀರನ್ನು ಸಹ ಕುಡಿಯುತ್ತಿವೆ. ಈ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಈ ನಿರ್ಧಾರವನ್ನು ಸಮರ್ಥಿಸಿ ಕೊಂಡಿದ್ದಾರೆ.


ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ,  ಅರಣ್ಯದಲ್ಲಿ ಕಾಣಿಸಿಕೊಂಡ ಈ ಬೆಂಕಿ ಅವಘತದಲ್ಲಿ ಒಂದು ಡಜನ್‌ಗೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸುಮಾರು ಐದು ಕೋಟಿ ಜೀವ-ಜಂತುಗಳು ಮೃತ ಪಟ್ಟಿವೆ.